RR vs RCB ನಡುವಿನ 13 ಲೀಗ್ ಪಂದ್ಯ ಟಾಸ್ ಗೆದ್ದ ಬೆಂಗಳೂರು ತಂಡ ಫೀಲ್ಡಿಂಗ್ ಆಯ್ಕೆ ಮುಂಬೈನ ವಾಂಖೆಡೆಯಲ್ಲಿ ನಡೆಯುತ್ತಿರುವ ಪಂದ್ಯ

ಮುಂಬೈ(ಏ.05): ಐಪಿಎಲ್ ಟೂರ್ನಿಯಲ್ಲಿಂದು ರಾಯಲ್ ಹೋರಾಟ. ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11
ಫಾಫ್ ಡುಪ್ಲೆಸಿಸ್(ನಾಯಕ), ಅನೂಜ್ ರಾವತ್, ವಿರಾಟ್ ಕೊಹ್ಲಿ,ದಿನೇಶ್ ಕಾರ್ತಿಕ್, ಶೇರ್ಫಾನೆ ರುದ್‌ಪೋರ್ಡ್, ಶಹಬಾಜ್ ನದೀಮ್, ವಾನಿಂದು ಹಸರಂಗ, ಡೇವಿಡ್ ವೀಲೆ, ಹರ್ಷಲ್ ಪಟೇಲ್, ಅಕ್ಷ ದೀಪ್, ಮೊಹಮ್ಮದ್ ಸಿರಾಜ್ 

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ನಾಯಕ), ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ನವದೀಪ್ ಸೈನಿ, ಟ್ರೆಂಟ್ ಬೋಲ್ಟ್, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಾಲ್

ಆ ಎರಡು ಪಂದ್ಯದ ಸೋಲಿಗೆ ವಿರಾಟ್ ಕೊಹ್ಲಿ ಕಣ್ಣೀರಿಟ್ಟಿದ್ದೇಕೆ..?

ಮುಂಬೈನ ವಾಂಖೆಡೆಯಲ್ಲಿ ಚೇಸ್ ಮಾಡಿದ ತಂಡಕ್ಕೆ ಹೆಚ್ಚಿನ ಯಶಸ್ಸು ಸಿಕ್ಕಿದೆ. ಈ ಆವೃತ್ತಿಯಲ್ಲಿ ಆಡಿದ 3 ಪಂದ್ಯಗಳೂ ಕೂಡ ಚೇಸಿಂಗ್ ತಂಡ ಗೆಲುವು ದಾಖಲಿಸಿದೆ. ಸೆಕೆಂಡ್ ಬೌಲಿಂಗ್ ವೇಳೆ ಇಬ್ಬನಿ ಕೂಡ ಪರಿಣಾಮ ಬೀರಲಿದೆ. ವೇಗಿಗಳೂ ಹೆಚ್ಚಿನ ಪ್ರಾಬಲ್ಯ ಸಾಧಿಸಿರುವುದು ಈ ಹಿಂದಿನ ಪಂದ್ಯಗಳಲ್ಲಿ ಸಾಬೀತಾಗಿದೆ. ವಾಂಖೆಡೆ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಆಡಿದ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಸೋತಿದೆ. ಇನ್ನು ರಾಜಸ್ಥಾನ ರಾಯಲ್ಸ್ ಆಡಿದ 13 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ಐಪಿಎಲ್ ಟೂರ್ನಿಯಲ್ಲಿ ಒಟ್ಟು 24 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಆರ್‌ಸಿಬಿ 12 ಗೆಲುವು ದಾಖಲಿಸಿದ್ದರೆ, ರಾಜಸ್ಥಾನ 10 ಗೆಲುವು ಕಂಡಿದೆ. ಆದರೆ ಈ ಬಾರಿಯ ಐಪಿಎಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಸೋಲಿಲ್ಲದ ಸರದನಾಗಿದೆ. ಆಡಿದ 2 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ಸೋಲು 1 ಗೆಲುವಿನೊಂದಿಗೆ 7ನೇ ಸ್ಥಾನದಲ್ಲಿದೆ. 

IPL 2022: ಮ್ಯಾಕ್ಸ್‌ವೆಲ್‌ RCB ಪರ ಕಣಕ್ಕಿಳಿಯೋದು ಯಾವಾಗ? ಮೈಕ್ ಹೆಸನ್ ಹೇಳಿದ್ದೇನು..?

ರಾಜಸ್ಥಾನ ರಾಯಲ್ಸ್ ಅತ್ಯುತ್ತಮ ಸ್ಪಿನ್ ದಾಳಿ ಹೊಂದಿದೆ. ಆದರೆ ಬೆಂಗಳೂರು ತಂಡ ಮಿಡ್ಲ್ ಓವರ್‌ನಲ್ಲಿ ಪರಿಣಾಮಕಾರಿಯಾಗಿ ಸ್ಪಿನ್ ಬೌಲಿಂಗ್ ಮಾಡಬಲ್ಲ ಆಟಗಾರನ ಹೊಂದಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಕಾಣಿಕೆ ನೀಡುತ್ತಾರೆ. ಆದರೆ ಮ್ಯಾಕ್ಸ್‌ವೆಲ್ ಅಲಭ್ಯತೆ ಆರ್‌ಸಿಬಿ ತಂಡಕ್ಕೆ ಬಹುವಾಗಿ ಕಾಡಲಿದೆ. 

ರಾಜಸ್ಥಾನ ರಾಯಲ್ಸ್ ಅಬ್ಬರದ ಬ್ಯಾಟಿಂಗ್ ಹಾಗೂ ಮಾರಕ ದಾಳಿ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುತ್ತಿದೆ.ಇತ್ತ ಬೆಂಗಳೂರು ತಂಡ ದಿ್ಟ್ಟ ಹೋರಾಟ ನೀಡುವ ವಿಶ್ವಾಸದಲ್ಲಿದೆ.

ಸನ್‌ರೈಸ​ರ್‍ಸ್ ವಿರುದ್ಧ ಲಖನೌಗೆ 12 ರನ್‌ ರೋಚಕ ಗೆಲುವು
ವೇಗಿ ಆವೇಶ್‌ ಖಾನ್‌ರ ಆಕರ್ಷಕ ಬೌಲಿಂಗ್‌ ದಾಳಿಯ ನೆರವಿನಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡ ಸನ್‌ರೈಸ​ರ್‍ಸ್ ಹೈದರಾಬಾದ್‌ ವಿರುದ್ಧ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ತಂಡಕ್ಕಿದು ಸತತ 2ನೇ ಗೆಲುವು. ಇದೇ ವೇಳೆ ಸನ್‌ರೈಸ​ರ್‍ಸ್ 2ನೇ ಪಂದ್ಯದಲ್ಲೂ ಸೋಲು ಅನುಭವಿಸಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಮೊದಲು ಬ್ಯಾಟ್‌ ಮಾಡಿದ ಲಖನೌ ಕೆ.ಎಲ್‌.ರಾಹುಲ್‌(68) ಹಾಗೂ ದೀಪಕ್‌ ಹೂಡಾ(51) ಅವರ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 7 ವಿಕೆಟ್‌ಗೆ 169 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಸನ್‌ರೈಸ​ರ್‍ಸ್, 20 ಓವರಲ್ಲಿ 9 ವಿಕೆಟ್‌ಗೆ 157 ರನ್‌ ಗಳಿಸಲಷ್ಟೇ ಶಕ್ತವಾಯಿತು. ರಾಹುಲ್‌ ತ್ರಿಪಾಠಿ(44) ಹಾಗೂ ನಿಕೋಲಸ್‌ ಪೂರನ್‌(34) ಹೋರಾಟ ಸಾಕಾಗಲಿಲ್ಲ. ಆವೇಶ್‌ ಪ್ರಮುಖ 4 ವಿಕೆಟ್‌ ಕಬಳಿಸಿದರು. ಆರಂಭಿಕರಾದ ಅಭಿಷೇಕ್‌, ವಿಲಿಯಮ್ಸನ್‌, ಅಪಾಯಕಾರಿ ಬ್ಯಾಟರ್‌ಗಳಾದ ಪೂರನ್‌ ಹಾಗೂ ಅಬ್ದುಲ್‌ ಸಮದ್‌ರನ್ನು ಔಟ್‌ ಮಾಡಿ, ಲಖನೌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.