ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಆರಂಭದಲ್ಲೇ 3 ವಿಕೆಟ್ ಕಬಳಿಸಿದ ಆರ್‌ಸಿಬಿ ರಾಜಸ್ಥಾನ ಅಬ್ಬರಕ್ಕೆ ಶಾಕ್ ನೀಡಿದ ಬೆಂಗಳೂರು ತಂಡ  

ಪುಣೆ(ಏ.26): ಪ್ರತಿ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಿದ್ದ ರಾಜಸ್ಥಾನ ರಾಯಲ್ಸ್‌ಗೆ ಆರ್‌ಸಿಬಿ ಶಾಕ್ ನೀಡಿದೆ. ಬ್ಯಾಟಿಂಗ್ ಇಳಿದ ರಾಯಲ್ಸ್ ಆರಂಭದಲ್ಲೇ ಮೊಹಮ್ಮದ್ ಸಿರಾಜ್ ದಾಳಿಗೆ ಕುಸಿತ ಕಂಡಿತು. ಪರಿಣಾಮ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.

ಶತಕದ ಮೂಲಕ ಐಪಿಎಲ್ ಟೂರ್ನಿಯಲ್ಲಿ ಮಿಂಚುತ್ತಿರುವ ಜೋಸ್ ಬಟ್ಲರ್ ಕೇವಲ 8 ರನ್ ಸಿಡಿಸಿ ಔಟಾದರು. ಹೇಜಲ್‌ವುಡ್ ದಾಳಿಗೆ ಬಟ್ಲರ್ ಉತ್ತರ ನೀಡಲು ಸಾಧ್ಯವಾಗದೆ ಪೆವಿಲಿಯನ್ ಸೇರಿದರು. ಮತ್ತೊರ್ವ ಆರಂಭಿಕ ದೇವದತ್ ಪಡಿಕ್ಕಲ್ 7 ರನ್ ಸಿಡಿಸಿ ಔಟಾದರು. 

ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ..?

ಆರಂಭದಲ್ಲೇ ಎರಡು ವಿಕೆಟ್ ಪತನಗೊಂಡ ಕಾರಣ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆರ್ಡರ್‌ನಲ್ಲಿ ಕೆಲ ಬದಲಾವಣೆ ಮಾಡಿತು. ಆರ್ ಅಶ್ವಿನ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಅಶ್ವಿನ್ 17 ರನ್ ಸಿಡಿಸಿ ಔಟಾದರು.

ಸಂಜು ಸ್ಯಾಮ್ಸನ್ ಹೋರಾಟ ಮುಂದುವರಿಸಿದರು. ರಾಜಸ್ಥಾನ ರಾಯಲ್ಸ್ 33 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. 

ರಾಯಲ್ ಚಾಲೆಂಜರ್ಸ್ ಪ್ಲೇಯಿಂಗ್ 11
ಫಾಫ್ ಡುಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮೆಕ್ಸ್‌ವೆಲ್, ಸುಯಷ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಶಹಬಾಜ್ ಅಹಮ್ಮದ್, ದಿನೇಶ್ ಕಾರ್ತಿಕ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್

 ಪಂಜಾಬ್‌ ಆಲ್ರೌಂಡರ್ ಫೇಸ್ ಶೀಲ್ಡ್ ಧರಿಸಿದ್ದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ..!

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಡರಿಲ್ ಮೆಚೆಲ್, ಆರ್ ಅಶ್ವಿನ್, ಟ್ರೆಂಟ್ ಬೋಲ್ಟ್, ಕುಲ್ದೀಪ್ ಸೇನೆ, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಾಲ್

ಪಂಜಾಬ್ ಕಿಂಗ್ಸ್‌ಗೆ ಗೆಲುವು

ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಸೋಲಿನತ್ತ ಮುಖ ಮಾಡಿತು. ಐಪಿಎಲ್‌ 15ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್‌್ಸ ಪ್ಲೇ-ಆಫ್‌ ಹಾದಿ ಮತ್ತಷ್ಟುಕಠಿಣಗೊಂಡಿದೆ. ಪಂಜಾಬ್‌ ಕಿಂಗ್‌್ಸ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ 11 ರನ್‌ಗಳ ಸೋಲು ಅನುಭವಿಸಿತು. ತಂಡಕ್ಕಿದು ಈ ಆವೃತ್ತಿಯಲ್ಲಿ 6ನೇ ಸೋಲು. ಬಾಕಿ ಇರುವ 6 ಪಂದ್ಯಗಳಲ್ಲಿ ಚೆನ್ನೈ ಎಲ್ಲಾ 6 ಪಂದ್ಯಗಳಲ್ಲಿ ಗೆದ್ದರೂ ಪ್ಲೇ-ಆಫ್‌ಗೇರುವುದು ಕಷ್ಟ.

ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌, ಶಿಖರ್‌ ಧವನ್‌ರ ಆಕರ್ಷಕ 88* ರನ್‌ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ಗೆ 187 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ, ಅಂಬಟಿ ರಾಯುಡು ಅವರ ಸ್ಫೋಟಕ ಇನ್ನಿಂಗ್‌್ಸ(78 ರನ್‌, 39 ಎಸೆತ, 7 ಬೌಂಡರಿ, 6 ಸಿಕ್ಸರ್‌) ಹೊರತಾಗಿಯೂ ಗೆಲುವಿನ ದಡ ಸೇರಲಿಲ್ಲ.

ಪಂಜಾಬ್‌ 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದು, ಪ್ಲೇ-ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈ ಮತ್ತೆ ಆರಂಭಿಕ ಆಘಾತ ಅನುಭವಿಸಿತು. 40 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈಗೆ ರಾಯುಡು ಆಸರೆಯಾದರು. ಅವರ ಆಕರ್ಷಕ ಆಟ ತಂಡ ಗೆಲುವಿನ ಆಸೆಯನ್ನು ಕೈಬಿಡದಂತೆ ಮಾಡಿತು.18ನೇ ಓವರಲ್ಲಿ ರಾಯುಡು ಔಟಾದಾಗ ತಂಡವನ್ನು ಗೆಲ್ಲಿಸುವ ಹೊಣೆ ಎಂ.ಎಸ್‌.ಧೋನಿ ಹೆಗಲಿಗೆ ಬಿತ್ತು. 1 ಬೌಂಡರಿ, 1 ಸಿಕ್ಸರ್‌ ಬಾರಿಸಿ ಧೋನಿ ಭರವಸೆ ಮೂಡಿಸಿದರು. ಈ ನಡುವೆ ಅಶ್‌ರ್‍ದೀಪ್‌ ಸಿಂಗ್‌ ಮತ್ತೊಮ್ಮೆ ಪಂಜಾಬ್‌ಗೆ ನೆರವಾದರು. 19ನೇ ಓವರಲ್ಲಿ ಕೇವಲ 8 ರನ್‌ ನೀಡಿ ಕೊನೆ ಓವರ್‌ನಲ್ಲಿ ಚೆನ್ನೈ 27 ರನ್‌ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿಸಿದರು. ರಿಶಿ ಧವನ್‌ ಎಸೆದ 20ನೇ ಓವರ್‌ನ 3ನೇ ಎಸೆತದಲ್ಲಿ ಧೋನಿ ಔಟಾಗುತ್ತಿದ್ದಂತೆ ಚೆನ್ನೈ ಜಯದ ಆಸೆ ಕಮರಿ ಹೋಯಿತು.