* ಆರ್‌ಸಿಬಿ ಪ್ಲೇ ಆಫ್‌ ಭವಿಷ್ಯ ಮುಂಬೈ ಇಂಡಿಯನ್ಸ್‌ ಕೈಯಲ್ಲಿ* ಮುಂಬೈ-ಆರ್‌ಸಿಬಿ ಮೈದಾನದೊಳಗೆ ಬದ್ದ ಎದುರಾಳಿಗಳಾಗಿ ಕಾದಾಡಿವೆ* ಈಗ ಡೆಲ್ಲಿ ಎದುರು ಮುಂಬೈ ಗೆಲ್ಲಲು ಆರ್‌ಸಿಬಿ ಪ್ರಾರ್ಥನೆ

ಮುಂಬೈ(ಮೇ.21): ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವು ಲೀಗ್​​​ ಹಂತದ ಕೊನೆ ಪಂದ್ಯ ಗೆದ್ದು, ತನ್ನ ಭವಿಷ್ಯವನ್ನ ಮುಂಬೈ ಇಂಡಿಯನ್ಸ್ (Mumbai Indians) ಕೈಯಲ್ಲಿಟ್ಟಿದೆ. ಡು ಪ್ಲೆಸಿಸ್​​ ಬಳಗದ ಅಳಿವು-ಉಳಿವಿನ ಪ್ರಶ್ನೆ ಸದ್ಯ ಎಲ್ಲವೂ ಮುಂಬೈ ಇಂಡಿಯನ್ಸ್‌ ಮೇಲೆ ನಿಂತಿದೆ. ನಿಮಗೆ ನೆನಪಿರಲಿ. ಆರ್​ಸಿಬಿಗೆ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಬಿಟ್ರೆ, ಮತ್ತೊಂದು ದೊಡ್ಡ ವೈರಿ ಅಂದ್ರೆ ಅದು ಇದೇ ಮುಂಬೈ ಇಂಡಿಯನ್ಸ್​. ಐಪಿಎಲ್​​ ಆರಂಭವಾದಾಗಿನಿಂದಲೂ ಎರಡೂ ತಂಡಗಳು ಅಂಗಳದಲ್ಲಿ ಹಾವು-ಮುಂಗುಸಿಯಂತೆ ಕಾದಾಡುತ್ತಾ ಬಂದಿವೆ. ಅಭಿಮಾನಿಗಳಂತೂ ಕಿತ್ತಾಡುತ್ತಲೇ ಇರ್ತಾರೆ. ಇವರನ್ನ ಕಂಡ್ರೆ ಅವರಿಗಾಗಲ್ಲ, ಅವರನ್ನು ಕಂಡ್ರೆ ಇವರಿಗಾಗಲ್ಲ. ಇಬ್ಬರೂ ಬಿಗ್ ಹೇಟರ್ಸ್​. ಇಂತಹ ಬದ್ಧವೈರಿಗಳು ನಾವೀಗ ದುಷ್ಮನ್ಸ್ ಅಲ್ಲ, ಭಾಯ್ ಭಾಯ್ ಅಂತಿದ್ದಾರೆ.

ಇಂದು ಮುಂಬೈಗೆ ಸಿಗಲಿದೆ ಆರ್​ಸಿಬಿ ಫ್ಯಾನ್ಸ್​ ಬೆಂಬಲ:

ಎಂತಹ ಕಟುಕ ಮನುಷ್ಯನೇ ಬದಲಾಗ್ತಾನೆ. ಅಂತ್ರದಲ್ಲಿ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ಫ್ಯಾನ್ಸ್​ ವೈರತ್ವ ಕೊನೆಗೊಳ್ಳದಿರುತ್ತಾ..? ಖಂಡಿತ ಕೊನೆಗೊಂಡಿದೆ. ಇಂದು ಐಪಿಎಲ್​ ಹಂಗಾಮದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಸೆಣಸಾಡಲಿವೆ. ಈ ಬ್ಯಾಟಲ್​​ನಲ್ಲಿ ಆರ್​ಸಿಬಿ ತಂಡ ಬದ್ಧವೈರಿ ಮುಂಬೈ ಸಪೋರ್ಟ್​ಗೆ ನಿಂತಿದೆ. ಹಳೇದೆಲ್ಲವನ್ನು ಮರೆತು, ಇಂದು ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲೆಂದು ಪ್ರತಿಯೊಬ್ಬ ಆರ್​ಸಿಬಿ ಅಭಿಮಾನಿ ಮತ್ತು ಆಟಗಾರರು ಪ್ರಾರ್ಥಿಸ್ತಿದ್ದಾರೆ. ಯಾಕಂದ್ರೆ ಆರ್​ಸಿಬಿ ಮುಂದಿನ ಐಪಿಎಲ್​ ಭವಿಷ್ಯ ಮುಂಬೈ ಮೇಲೆ ನಿಂತಿದೆ. ಇಂದು ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆದ್ದರೆ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಲಿದೆ. ಇಲ್ಲವಾದ್ರೆ ಟೂರ್ನಿಯಿಂದಲೇ ಹೊರಬೀಳಲಿದೆ. ಹೀಗಾಗಿ ಇಡೀ ಆರ್​ಸಿಬಿ ಫ್ಯಾನ್ಸ್​ ಇಂದು ಮುಂಬೈ ಅಭಿಮಾನಿಗಳಾಗಿ ಬದಲಾಗಿದ್ದಾರೆ.

ಮುಂಬೈ ಬೆಂಬಲಿಸಿದ್ದಾರೆ ಕೊಹ್ಲಿ: 

ಗುಜರಾತ್ ಟೈಟಾನ್ಸ್ (Gujarat Titans) ವಿರುದ್ದ ಘರ್ಜಿಸಿ ಪಂದ್ಯ ಗೆಲ್ಲಿಸಿಕೊಟ್ಟ ವಿರಾಟ್ ಕೊಹ್ಲಿ (Virat Kohli), ಆರ್​ಸಿಬಿ ಪ್ಲೇ ಆಫ್​ ಆಸೆ ಜೀವಂತವಾಗಿರಿಸಿದ್ರು. ಅಷ್ಟೇ ಅಲ್ಲ ಪಂದ್ಯ ಬಳಿಕ ನನ್ನ ಫುಲ್ ಸಪೋರ್ಟ್​ ಮುಂಬೈಗೆ ಇರಲಿದೆ. ಅವರ 25 ಸಪೋರ್ಟ್​ ಸ್ಟಾಫ್​​ ಜತೆ ನಾವೆಲ್ಲರೂ ಮುಂಬೈ ಇಂಡಿಯನ್ಸ್‌ಗೆ ಬೆಂಬಲಿಸಿದ್ದೇವೆ ಎಂದು ಕಿಂಗ್ ಕೊಹ್ಲಿ ಹೇಳಿದ್ದಾರೆ. ಇನ್ನು ಮ್ಯಾಚ್​ ಪ್ರಜಂಟೇಶನ್​ ವೇಳೆ ಮಾತನಾಡಿದ ಆರ್​ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್​ ಇನ್ನೇನಿದ್ರು ನಮ್ಮ ಸಪೋರ್ಟ್​ ಮುಂಬೈಗೆ. ರೋಹಿತ್ ಶರ್ಮಾ ಮೇಲೆ ಎಲ್ಲ ಭಾರ ಹಾಕಿದ್ದೇವೆ. ಪಂದ್ಯ ಗೆದ್ದು ಕೊಡುತ್ತಾರೆ ಅಂತ ನಂಬಿದ್ದೇವೆ ಎಂದರು.

IPL 2022: ಡೆಲ್ಲಿ ಗೆದ್ದರೆ ಪ್ಲೇ ಆಫ್​ಗೆ, ಮುಂಬೈ ಗೆದ್ದರೆ ಆರ್​ಸಿಬಿ ಪ್ಲೇ ಆಫ್​​ಗೆ..!!

5 ಬಾರಿ ಕಪ್ ಗೆದ್ದಿದ್ದಲ್ಲ, ಡೆಲ್ಲಿ ಮೇಲೆ ಮ್ಯಾಚ್​ ಗೆದ್ದು ತೋರಿಸಿ: 

ಒಂದೆಡೆ ಆರ್​ಸಿಬಿ ಫ್ಯಾನ್ಸ್ ಆ್ಯಂಡ್ ಟೀಮ್​​​​ ಮುಂಬೈ ಸಪೋರ್ಟ್​ಗೆ ನಿಂತಿದಿದ್ರೆ, ಇನ್ನೊಂದೆಡೆ ಮುಂಬೈ ಟ್ರೋಲ್ ಆಗ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ಮುಂಬೈ ಕಾಲೆಳೆಯುವ ರೀತಿಯಲ್ಲಿ ಮೀಮ್ಸ್ ಹರಿದಾಡ್ತಿವೆ. ಐದು ಸಲ ಕಪ್​ ಗೆದ್ದಿದ್ದು ಅಲ್ಲ, ಇವಾಗ ಡೆಲ್ಲಿ ಮೇಲೆ ಮ್ಯಾಚ್​ ಗೆದ್ದು ತೋರಿಸ್ತೋ ಅಂತಿದ್ದಾರೆ. ಜೊತೆಗೆ ಟೆಸ್ಟ್​​ ಕ್ಯಾಪ್ಟನ್ಸಿ ಬಿಟ್ಟುಕೊಟ್ಟೆ. ಒನ್ಡೇ ಮತ್ತು ಟಿ20 ಕ್ಯಾಪ್ಟನ್ಸಿ ಕೂಡ ಕೊಟ್ಟೆ, ಪ್ಲೀಸ್​​​​​ ಲಾಸ್ಟ್ ಮ್ಯಾಚ್​ ಡೆಲ್ಲಿ ಮೇಲೆ ಗೆದ್ದುಬಿಡ್ರೋ ಮಗ ಸಾಕು ಅಂತ ಕೊಹ್ಲಿ, ರೋಹಿತ್​​ಗೆ ಹೇಳುವ ಮೀಮ್ಸ್​ ಹರಿದಾಡ್ತಿದೆ. ಒಟ್ಟಿನಲ್ಲಿ ಆರ್​ಸಿಬಿ, ತಾವು ಸೇವ್ ಆಗಲು ವೈರತ್ವ ಮರೆತು ಮುಂಬೈ ಬೆಂಬಲಕ್ಕೆ ನಿಂತಿದೆ. ಮುಂಬೈ ಪಂದ್ಯ ಗೆದ್ದು ಆರ್​ಸಿಬಿ ಸಪೋರ್ಟ್​ಗೆ ಋಣಿಯಾಗಿರುತ್ತಾ? ಇಲ್ಲ ಸೋತು ದ್ವೇಷ ಹೆಚ್ಚಾಗುವಂತೆ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕು.