Asianet Suvarna News Asianet Suvarna News

IPL 2022: ದೇವದತ್‌ ಪಡಿಕ್ಕಲ್​​ಗೆ ಬಯಸದೆ ಬಂದ ಭಾಗ್ಯ..!

* ಈ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ದೇವದತ್ ಪಡಿಕ್ಕಲ್

* ಮೊದಲ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್ ನಡೆಸಿದ ಕನ್ನಡಿಗ ದೇವದತ್ ಪಡಿಕ್ಕಲ್

* ರಾಯಲ್ಸ್ ಪರ ನಾಲ್ಕನೇ ಕ್ರಮಾಂಕದಲ್ಲಿ ಅಬ್ಬರಿಸಿದ ಎಡಗೈ ಬ್ಯಾಟರ್‌ ಪಡಿಕ್ಕಲ್

IPL 2022 Rajasthan Royals young talent Devdutt Padikkal Shine in No 4 batting slot kvn
Author
Bengaluru, First Published Apr 1, 2022, 3:37 PM IST | Last Updated Apr 1, 2022, 3:37 PM IST

ಮುಂಬೈ(ಏ.01): ಕರ್ನಾಟಕದ ದೇವದತ್ ಪಡಿಕ್ಕಲ್(Devdutt Padikkal) ಬೆಸಿಕಲಿ ಓಪನಿಂಗ್ ಬ್ಯಾಟ್ಸ್​ಮನ್. ಕರ್ನಾಟಕ ಮತ್ತು ಐಪಿಎಲ್​​ನಲ್ಲಿ (IPL) ಆರ್​​ಸಿಬಿ ಪರ ಎಡಗೈ ಬ್ಯಾಟರ್,​ ಇನ್ನಿಂಗ್ಸ್ ಆರಂಭಿಸಿ, ಅದೆಷ್ಟೋ ಪಂದ್ಯ ಗೆಲ್ಲಿಸಿ ಕೊಟ್ಟಿದ್ದಾರೆ. ಆರಂಭಿಕನಾಗಿ ಸೆಂಚುರಿಗಳನ್ನ ಸಿಡಿಸಿದ್ದಾರೆ. ಟೀಂ ಇಂಡಿಯಾ(Team India) ಪರವೂ ಎರಡು ಟಿ20 ಪಂದ್ಯಗಳನ್ನಾಡಿದ್ದಾರೆ. ಇಷ್ಟೆಲ್ಲಾ ಸಾಧ್ಯವಾಗಿದ್ದು ಮಾತ್ರ ಪಡಿಕ್ಕಲ್ ಓಪನಿಂಗ್ ಬ್ಯಾಟರ್ ಆಗಿ ಆಡಿದಕ್ಕೆ.

ಆದರೆ ಈ ಐಪಿಎಲ್​​​​ನಲ್ಲಿ ರಾಜಸ್ಥಾನ ರಾಯಲ್ಸ್(Rajasthan Royals) ಪರ ಆಡ್ತಿರೋ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಕ್ರಮಾಂಕ ಚೇಂಜ್ ಆಗಿದೆ. ಹೌದು, ಆರಂಭಿಕನಿಂದ ಮಧ್ಯಮ ಕ್ರಮಾಂಕಕ್ಕೆ ಜಾರಿದ್ದಾರೆ. ಸನ್‌ರೈಸರ್ಸ್ ಹೈದ್ರಾಬಾದ್ (Sunrisers Hyderabad) ವಿರುದ್ಧದ ಪಂದ್ಯದಲ್ಲಿ ನಂಬರ್ 4 ಸ್ಲಾಟ್​​ನಲ್ಲಿ ಬ್ಯಾಟ್ ಬೀಸಿ 41 ರನ್ ಬಾರಿಸಿದ್ರು. ಕಾರಣ, ರಾಜಸ್ಥಾನ ಟೀಂ​ನಲ್ಲಿ ಖಾಯಂ ಓಪನರ್​​ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಇದ್ದಾರೆ. ಹಾಗಾಗಿ ಪಡಿಕ್ಕಲ್​​​ಗೆ ನಂಬರ್ 3 ಸ್ಲಾಟ್ ಫಿಕ್ಸ್​ ಆಗಿದೆ. ಆದರೆ ಹೈದ್ರಾಬಾದ್ ವಿರುದ್ಧ ನಾಯಕ ಸಂಜು ಸ್ಯಾಮ್ಸನ್ (Sanju Samson) 3ನೇ ಕ್ರಮಾಂಕದಲ್ಲಿ ಆಡಿದ್ದರಿಂದ ದೇವದತ್,​ 4ನೇ ಕ್ರಮಾಂಕದಲ್ಲಿ ಆಡಬೇಕಾಯ್ತು.

ಮಧ್ಯಮ ಕ್ರಮಾಂಕದಲ್ಲಿ ಆಡಿದರೆ ಮಾತ್ರ ಕನ್ನಡಿಗನಿಗೆ ಭವಿಷ್ಯ..!:

ಮೊನ್ನೆಯ ಪಂದ್ಯ ಮಾತ್ರವಲ್ಲ, ಈ ಸೀಸನ್ ಪೂರ್ತಿ ಪಡಿಕ್ಕಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಮಾಡಬೇಕು. ಓಪನಿಂಗ್ ಬ್ಯಾಟ್ಸ್​ಮನ್ ಒಬ್ಬ, ಮಿಡಲ್ ಆರ್ಡರ್​​ನಲ್ಲಿ ಆಡೋದು ಕಷ್ಟನೇ. ಆದ್ರೆ ಇದು ಕಷ್ಟವಾದ್ರೂ ಪಡಿಕ್ಕಲ್​ಗೆ ಬಯಸದೆ ಬಂದ ಭಾಗ್ಯ ಅಂದುಕೊಂಡ್ರೆ ಉತ್ತಮ. ಯಾಕಂದರೆ ಅವರ ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ಆರಂಭಿಕನಾಗಿ ಆಡೋದಕ್ಕಿಂತ ಮಧ್ಯಮ ಕ್ರಮಾಂಕದಲ್ಲಿ ಆಡಿದರೆ ಒಳ್ಳೆಯದು. ಆಗ ಮಾತ್ರ ಅವರ ಕೆರಿಯರ್ ಮತ್ತಷ್ಟು ಎತ್ತರಕ್ಕೆ ಏರಲಿದೆ. ಇಲ್ಲವಾದ್ರೆ ಅವರ ಕೆರಿಯರ್​​​​​​​​​​​​​​​​​​​​​​ ಕವಲು ದಾರಿ ಹಿಡಿಯಲಿದೆ. ಕನ್ನಡಿಗ ಯಾಕೆ ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಅನ್ನೋದಕ್ಕೂ ರೀಸನ್ ಇದೆ.

ಭಾರತ ತಂಡದಲ್ಲಿ ಮಾತ್ರವಲ್ಲ, 2ನೇ ದರ್ಜೆ ತಂಡದಲ್ಲೂ ಓಪನಿಂಗ್ ಸ್ಲಾಟ್ ಖಾಲಿಯಿಲ್ಲ:  

ದೇವದತ್ ಪಡಿಕ್ಕಲ್, ಆರಂಭಿಕನಾಗಿ ಆಡೋದಕ್ಕಿಂತ ಮಧ್ಯಮ ಕ್ರಮಾಂಕದಲ್ಲಿ ಆಡಿದರೆ ಉತ್ತಮ. ಯಾಕಂದರೆ ಭಾರತೀಯ ಕ್ರಿಕೆಟ್​ನಲ್ಲಿ ಸಾಲು ಸಾಲು ಓಪನರ್ಸ್ ಇದ್ದಾರೆ. ರೋಹಿತ್ ಶರ್ಮಾ(Rohit Sharma), ಶಿಖರ್ ಧವನ್, ಕೆಎಲ್ ರಾಹುಲ್ (KL Rahul), ಇಶಾನ್ ಕಿಶನ್, ಯಶಸ್ವಿ ಜೈಪಾಲ್, ಋತುರಾಜ್ ಗಾಯಕ್ವಾಡ್, ಪೃಥ್ವಿ ಶಾ ಹೀಗೆ ಹೆಸರು ಹೇಳುತ್ತಾ ಹೋದ್ರೆ ಡಜನ್ ಓಪನರ್ಸ್​ ಸಿಗ್ತಾರೆ. ಈ ಎಲ್ಲರೊಂದಿಗೆ ಪೈಪೋಟಿ ನಡೆಸಿ, ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಬೇಕು ಅಂದರೆ ಕನಿಷ್ಟ ಐದಾರು ವರ್ಷ ಕಾಯಬೇಕಾಗುತ್ತೆ. ಅಷ್ಟೊತ್ತಿಗೆ ಪಡಿಕ್ಕಲ್​ಗೆ ವಯಸ್ಸಾಗಿರುತ್ತೆ.

ತಮ್ಮ ದಾಖಲೆ ಮುರಿದ Dwayne Bravo ಚಾಂಪಿಯನ್ ಬೌಲರ್‌ ಎಂದು ಬಣ್ಣಿಸಿದ ಲಸಿತ್ ಮಾಲಿಂಗ..!

ಟೀಂ ಇಂಡಿಯಾ ಕಳೆದ ವರ್ಷ ಶ್ರೀಲಂಕಾ ಟೂರ್​ಗೆ ಹೋಗಿತ್ತಲ್ಲ, ಆ 2ನೇ ದರ್ಜೆ ತಂಡದಲ್ಲೂ ಓಪನಿಂಗ್ ಸ್ಲಾಟ್ ಖಾಲಿ ಇಲ್ಲ. ಆ ಸಿರೀಸ್​ನಲ್ಲಿ ಲಂಕಾ ವಿರುದ್ಧ ಎರಡು ಟಿ20 ಪಂದ್ಯಗಳನ್ನಾಡಿದ ದೇವಡತ್ ಪಡಿಕ್ಕಲ್, 9 ಮತ್ತು 29 ರನ್ ಬಾರಿಸಿದ್ದರು. ಆ ಎರಡು ಪಂದ್ಯವನ್ನೂ ಅವರು ಆಡಿದ್ದು ನಂಬರ್ 3 ಸ್ಲಾಟ್​​ನಲ್ಲಿ. ಅಲ್ಲಿಗೆ ನೀವೂ ಊಹಿಸಿಕೊಳ್ಳಿ ಟೀಂ ಇಂಡಿಯಾದಲ್ಲಿ ಆರಂಭಿಕನಾಗಿ ಆಡಲು ಎಷ್ಟು ಕಾಂಪಿಟೇಶನ್ ಇದೆ ಅಂತ.

ಭಾರತಕ್ಕೆ ಬೇಕಿದ್ದಾನೆ ಮಧ್ಯಮ ಕ್ರಮಾಂಕದಲ್ಲಿ ಆಡೋ ಎಡಗೈ ಬ್ಯಾಟರ್: 

ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕದಲ್ಲಿ ಆಡೋ ಒಬ್ಬ ಎಡಗೈ ಬ್ಯಾಟರ್ ಬೇಕಿದ್ದಾನೆ. ರಿಷಭ್ ಪಂತ್ ಬಿಟ್ಟರೆ ಯಾವೊಬ್ಬರೂ ಲೆಫ್ಟಿ ಬ್ಯಾಟರ್​ ಇಲ್ಲ. ಹಾಗಾಗಿ ದೇವದತ್ ಪಡಿಕ್ಕಲ್, ಐಪಿಎಲ್​ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿ ಕ್ಲಿಕ್ ಆದ್ರೆ ಬಹುಬೇಗ ಟೀಂ ಇಂಡಿಯಾ ಮಿಡಲ್ ಆರ್ಡರ್​​​​​​​ನಲ್ಲಿ ಸ್ಥಾನ ಪಡೆಯಬಹುದು. ಅದಕ್ಕೆ ನಾವ್ ಮೊದಲೇ ಹೇಳಿದ್ದು. ಓಪನರ್​ ಆಗಿ ಆಡೋದಕ್ಕಿಂತ ಮಿಡಲ್ ಆರ್ಡರ್​ನಲ್ಲಿ ಆಡಿದ್ರೆ ಭವಿಷ್ಯ ಇದೆ ಅಂತ. 

Latest Videos
Follow Us:
Download App:
  • android
  • ios