Asianet Suvarna News Asianet Suvarna News

IPL 2022: ಜೋಸ್ ಬಟ್ಲರ್ ಅಬ್ಬರಕ್ಕೆ ಮೂಗುದಾರ ಹಾಕೋರೆ ಇಲ್ಲ

* ಐಪಿಎಲ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ ಜೋಸ್ ಬಟ್ಲರ್

* ಹರಾಜಿಗೂ ಮುನ್ನ ಜೋಸ್ ಬಟ್ಲರ್‌ರನ್ನು ರೀಟೈನ್ ಮಾಡಿಕೊಂಡಿದ್ದ ರಾಜಸ್ಥಾನ ರಾಯಲ್ಸ್

* 7 ಇನಿಂಗ್ಸ್‌ನಲ್ಲಿ 3 ಶತಕ ಸಿಡಿಸಿ ಮಿಂಚಿರುವ ಬಟ್ಲರ್

IPL 2022 Rajasthan Royals Jos Buttler Going Great Guns he is unstoppable kvn
Author
Bengaluru, First Published Apr 25, 2022, 6:36 PM IST

ಬೆಂಗಳೂರು(ಏ.25): ಐಪಿಎಲ್ ಆಟಗಾರರ ಹರಾಜಿಗೂ (IPL Auction 2022) ಮುನ್ನ ರಾಜಸ್ಥಾನ ರಾಯಲ್ಸ್ (Rajasthan Royals) ಫ್ರಾಂಚೈಸಿಯು 10 ಕೋಟಿ ರುಪಾಯಿ ನೀಡಿ ಜೋಸ್ ಬಟ್ಲರ್ (Jos Buttler) ಅವರನ್ನು ರೀಟೈನ್ ಮಾಡಿಕೊಂಡಿತ್ತು. ಹೀಗಾಗಿ ಬಿಗ್​ ಹಿಟ್ಟರ್ ಜೋಸ್​ ಬಟ್ಲರ್ ಮೇಲೆ​​​ ಅಪಾರ ನಿರೀಕ್ಷೆಗಳಿದ್ವು. ಸ್ಫೋಟಕ ಬ್ಯಾಟರ್​ ಆ ವಿಶ್ವಾಸ ಉಳಿಸಿಕೊಂಡಿದ್ದಾರೆ.  ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಬಟ್ಲರ್​ ಘರ್ಜನೆ ಜೋರಾಗಿದೆ. ಈ ಆಂಗ್ಲ ಬ್ಯಾಟರ್​​ ದರ್ಬಾರ್​​ಗೆ ಎದುರಾಳಿ ಪಡೆ ಥಂಡಾ ಹೊಡಿದಿವೆ. ಬಟ್ಲರ್​ ಹಿಂದೆಂದೂ ಕಾಣದಷ್ಟು ರನ್​ ಹೊಳೆಯನ್ನ ಹರಿಸ್ತಿದ್ದಾರೆ. 

491 ರನ್​​​, 3 ಅಮೋಘ ಶತಕ, ದಾಖಲೆಗಳು ಉಡೀಸ್​:

ಟೂರ್ನಿ ಆರಂಭದಿಂದಲೇ ಸಿಂಹಘರ್ಜನೆ ನಡೆಸ್ತಿರೋ ಬಟ್ಲರ್​ ಈವರೆಗೆ ಒಟ್ಟು 491 ರನ್​​ ಬಾರಿಸಿದ್ದಾರೆ. ಮೂರು ವಂಡರ್​ಫುಲ್​​ ಸೆಂಚುರಿಸ್​ ಮೂಡಿ ಬಂದಿವೆ. ಮೊದಲ ಶತಕ ಮುಂಬೈ ಇಂಡಿಯನ್ಸ್‌ ವಿರುದ್ಧ ಬಾರಿಸಿದ್ರೆ 2 ಹಾಗೂ 3ನೇ ಶತಕವನ್ನ ಕೆಕೆಆರ್​​​​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಡಿಸಿದ್ದಾರೆ. ಇನ್ನು ಬಟ್ಲರ್​​ ಶತಕ ಸಿಡಿಸಿದ ಮೂರು ಪಂದ್ಯವನ್ನ ರಾಜಸ್ಥಾನ ಗೆದ್ದಿದೆ. 64 ಇನ್ನಿಂಗ್ಸ್​ಗಳಿಂದ ಶತಕ ಸಿಡಿಸದ ಬಟ್ಲರ್​ ಕಳೆದ 8 ಇನ್ನಿಂಗ್ಸ್​​ಗಳಲ್ಲಿ 4 ಶತಕ ಬಾರಿಸಿದ್ದು ವಿಶೇಷ. 

ಇನ್ನು 2 ಶತಕ ಸಿಡಿಸಿದ್ರೆ ಕೊಹ್ಲಿ-ಗೇಲ್​ ರೆಕಾರ್ಡ್​ ಖತಂ: 

ಸದ್ಯ ಆಡಿರೋ 7 ಪಂದ್ಯಗಳಲ್ಲಿ  ಮೂರು ಭರ್ಜರಿ ಶತಕ ಸಿಡಿಸಿರೋ ಬಟ್ಲರ್​​ ಅನೇಕ ದಾಖಲೆಗಳನ್ನ ಅಳಿಸಿ ಹಾಕಿದ್ದಾರೆ. ಮತ್ತಷ್ಟು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಸ್ಫೋಟಕ ದಾಂಡಿಗನಿಂದ ಇನ್ನು ಎರಡು ಶತಕ ಮೂಡಿಬಂದ್ರೆ ಸೀಸನ್​​​ವೊಂದರಲ್ಲೇ ಅತ್ಯಧಿಕ ಶತಕ ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆರ್​ಸಿಬಿ ತಂಡದ ಮಾಜಿ ಕ್ಯಾಪ್ಟನ್ ಕೊಹ್ಲಿ 2016ರಲ್ಲಿ 4 ಶತಕ ಸಿಡಿಸಿದ್ದಾರೆ.  ಇನ್ನು ಸೀಸನ್​ವೊಂದರಲ್ಲೇ ಕೊಹ್ಲಿ 971 ರನ್​​ ಗಳಿಸಿದ್ದಾರೆ. ಬಟ್ಲರ್​ ಈಗಾಗ್ಲೇ 491 ರನ್​​ ಗಳಿಸಿದ್ದು, ಇನ್ನು 480 ರನ್​​​​​ ಗಳಿಸಿದ್ರೆ ಕೊಹ್ಲಿಯನ್ನ ಹಿಂದಿಕ್ಕಲಿದ್ದಾರೆ. ಅಷ್ಟೆ ಅಲ್ಲ ಇನ್ನೂ 3 ಶತಕ ಬಾರಿಸಿದ್ರೆ ಐಪಿಎಲ್​ ಹಿಸ್ಟರಿಯಲ್ಲಿ ಅಧಿಕ ಶತಕ ಸಿಡಿಸಿದ ಮೊದಲಿಗ ಅನ್ನಿಸಿಕೊಳ್ಳಲಿದ್ದಾರೆ. 6 ಶತಕ ಸಿಡಿಸಿರೋ ಕ್ರಿಸ್​ ಗೇಲ್ ಹೆಸರಿನಲ್ಲಿ ದಾಖಲೆ ಉಳಿದುಕೊಂಡಿದೆ.

ರಂಗಿನ್​ ಆಟದಲ್ಲಿ ಬಟ್ಲರ್​​​ ಪಾರಮ್ಯ: 

ಹೌದು, ಪ್ರಸಕ್ತ ಐಪಿಎಲ್​​ನಲ್ಲಿ ಜೋಸ್​ ಬಟ್ಲರ್​ ಅನ್ನೋ ಡೆಡ್ಲಿ ಬ್ಯಾಟರ್​​ ಡಾಮಿನೇಟ್ ಸಾಧಿಸಿದ್ದಾರೆ. ಬರೀ 491 ರನ್​ ಗಳಿಸಿ ಆರೆಂಜ್​ ಕ್ಯಾಪ್​​ ಮಾತ್ರ ಉಳಿಸಿಕೊಂಡಿಲ್ಲ. ಬದಲಿಗೆ ಟೂರ್ನಿಯಲ್ಲಿ  ವೈಯಕ್ತಿಕ ಗರಿಷ್ಟ 116 ರನ್​ ಬಾರಿಸಿದ ಖ್ಯಾತಿ ಹಾಗೂ ಮೋಸ್ಟ್​ ವ್ಯಾಲ್ಯೂಯೇಬಲ್ ಪ್ಲೇಯರ್​ ಕೂಡ ಇವರಾಗಿದ್ದಾರೆ. ಒಟ್ಟಿನಲ್ಲಿ ಈವರೆಗೆ ಬಟ್ಲರ್​​ ಆರ್ಭಟಕ್ಕೆ ಮೂಗುದಾರ ಹಾಕೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಇನ್ನಾದ್ರು ಬ್ರೇಕ್ ಬೀಳುತ್ತಾ? ಇಲ್ಲ ಬಟ್ಲರ್​ ಮತ್ತಷ್ಟು ರೆಬೆಲ್​ ಆಗ್ತಾರಾ ಅನ್ನೋದನ್ನ ಕಾದುನೋಡಬೇಕು.
 

Follow Us:
Download App:
  • android
  • ios