* 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಿಂಚಿನ ಪ್ರದರ್ಶನ ತೋರುತ್ತಿರುವ ದಿನೇಶ್ ಕಾರ್ತಿಕ್* ಧೋನಿಯಂತೆ ಮ್ಯಾಚ್ ಫಿನೀಶರ್ ಆಗಿ ಗುರುತಿಸಿಕೊಂಡಿರುವ ಡಿಕೆ* ಎಬಿಡಿ ಸ್ಥಾನ ತುಂಬುವತ್ತ ದಿಟ್ಟ ಹೆಜ್ಜೆ ಇಡುತ್ತಿರುವ ವಿಕೆಟ್‌ ಕೀಪರ್ ಬ್ಯಾಟರ್‌

ಮುಂಬೈ(ಏ.07): ಅಯ್ಯೋ, ಎಂ ಎಸ್ ಧೋನಿ (MS Dhoni) ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡದಲ್ಲಿದ್ದಾರೆ. ನಾಯಕತ್ವ ತ್ಯಜಿಸಿದ್ರು ಆಟಗಾರನಾಗಿ ಚೆನ್ನೈ ಪರ ಆಡ್ತಿದ್ದಾರೆ. ಫಸ್ಟ್ ಮ್ಯಾಚ್​​​​​ನಲ್ಲೇ ಆರ್ಭಟಿಸಿ ಹಾಫ್ ಸೆಂಚುರಿ ಬೇರೆ ಹೊಡೆದಿದ್ದಾರೆ. ಇಲ್ಲಿ ನೋಡಿದ್ರೆ ಆರ್​ಸಿಬಿ (RCB) ತಂಡದಲ್ಲಿ ಎಂ ಎಸ್ ಧೋನಿ ಇದ್ದಾರೆ ಅಂತ ಹೇಳಿ ಕನ್ಫ್ಯೂಸ್ ಮಾಡ್ತಿದ್ದಾರೆ ಅಂದುಕೊಳ್ಳಬೇಡಿ. ನಿಜವಾಗ್ಲೂ ಚೆನ್ನೈ ತಲೈವಾ ಆರ್​ಸಿಬಿ ತಂಡದಲ್ಲಿದ್ದಾನೆ. ಸ್ಫೋಟಕ ಬ್ಯಾಟಿಂಗ್, ಕೂಲ್ ಬ್ಯಾಟಿಂಗ್ ಮತ್ತು ಮ್ಯಾಚ್ ಫಿನಿಶ್ ಮಾಡೋಕು ಈತ ರೆಡಿ. ವಿಕೆಟ್ ಮುಂದೆ ಮಾತ್ರವಲ್ಲ, ವಿಕೆಟ್ ಹಿಂದೆಯೂ ಅದ್ಭುತ ಕೀಪಿಂಗ್ ಮಾಡ್ತಿದ್ದಾನೆ. ಆ ಧೋನಿ ಯಾರು ಗೊತ್ತಾ..? ದಿನೇಶ್ ಕಾರ್ತಿಕ್.

ಆರ್​​ಸಿಬಿಯಲ್ಲಿ ಕಾರ್ತಿಕ್​​​ ಮ್ಯಾಚ್ ಫಿನಿಶರ್​: 

ಯೆಸ್, ಈ ಸಲದ ಬಿಡ್​ನಲ್ಲಿ ಆರ್​ಸಿಬಿ ತಂಡ ಸೇರಿಕೊಂಡಿರೋ ದಿನೇಶ್ ಕಾರ್ತಿಕ್ (Dinesh Karthik), ಈಗ ಮ್ಯಾಚ್ ಫಿನಿಶರ್. ಸೆಕೆಂಡ್ ಟೈಮ್ ಬೆಂಗಳೂರಿಗೆ ಬಂದಿರುವ ಡಿಕೆ, ಈ ಸೀಸನ್​ನಲ್ಲಿ ಆರ್​ಸಿಬಿ ಆಡಿರುವ ಮೂರು ಮ್ಯಾಚ್​​ ಅನ್ನೋ ಅದ್ಭುತವಾಗಿ ಫಿನಿಶ್ ಮಾಡಿದ್ದಾರೆ. ಅದಕ್ಕಾಗಿಯೇ ಕಾರ್ತಿಕ್ ಅವರನ್ನ ಧೋನಿ ಹೋಲಿಸಿದ್ದು ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್.

ಮೂರು ಪಂದ್ಯದಲ್ಲೂ ಡಿಕೆ ಔಟ್ ಆಗಿಯೇ ಇಲ್ಲ..!:

ಧೋನಿಗೆ ಡಿಕೆಯನ್ನ ಆರ್​​ಸಿಬಿ ಕ್ಯಾಪ್ಟನ್ ಯಾಕೆ ಹೋಲಿಸಿದ್ದು ಗೊತ್ತಾ..? ಇದೇ ಕಾರಣಕ್ಕೆ ಕಂಡ್ರಿ. ಆರ್​ಸಿಬಿ ಆಡಿರೋ ಮೂರು ಮ್ಯಾಚ್​​​ನಲ್ಲೂ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಮಾಡಿ ಮ್ಯಾಚ್ ಫಿನಿಶ್ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ ಜಸ್ಟ್​ 14 ಬಾಲ್​​ಗೆ ಅಜೇಯ 32 ರನ್ ಬಾರಿಸಿ, ಆರ್​​ಸಿಬಿ 205 ರನ್ ಹೊಡೆಯಲು ಕಾರಣರಾದ್ರು. ಆದರೆ ಪಂಜಾಬ್ ಚೇಸ್ ಮಾಡಿ ಆ ಪಂದ್ಯ ಗೆದ್ದುಕೊಳ್ತು. ಕೆಕೆಆರ್​ ವಿರುದ್ಧ ಅಜೇಯ 14 ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ ಅಜೇಯ 44 ರನ್ ಸಿಡಿಸಿ ಮ್ಯಾಚ್ ಫಿನಿಶ್ ಮಾಡಿದ್ರು. ರಾಯಲ್ಸ್ ವಿರುದ್ಧ ಡಿಕೆ ಆಟ ನೋಡಿ ಎಲ್ಲರೂ ಫಿದಾ ಆಗಿದ್ದಾರೆ.

ಎಬಿಡಿ ಸ್ಥಾನ ತುಂಬುತ್ತಿದ್ದಾರೆ ಡಿಕೆ..!:

2019ರ ಏಕದಿನ ವಿಶ್ವಕಪ್ ಬಳಿಕ ದಿನೇಶ್ ಟೀಂ ಇಂಡಿಯಾದಿಂದ (Team India) ಡ್ರಾಪ್ ಆದ್ರು. ನಂತರ ಕಾಮೆಂಟೇಟರ್ ಸಹ ಆದ್ರು. ಆಗ್ಲೇ ಡಿಕೆ ಕೆರಿಯರ್ ಕ್ಲೋಸ್ ಎಂದು ಎಲ್ಲರೂ ಭಾವಿಸಿದ್ದರು. ಈ ಸಲದ ಐಪಿಎಲ್ ಬಿಡ್​ನಲ್ಲೂ ಸೇಲ್ ಆಗೋದು ಡೌಟ್ ಇತ್ತು. ಆದ್ರೆ ಆರ್​ಸಿಬಿ ಡಿಕೆಗೆ ಐದುವರೆ ಕೋಟಿ ಕೊಟ್ಟು ಖರೀದಿಸ್ತು. ಆರ್​ಸಿಬಿಯಲ್ಲಿ ಫಿನಿಶರ್ ಜವಾಬ್ದಾರಿ ಸಿಕ್ಕಿದೆ. ತನಗೆ ಕೊಟ್ಟ ಜವಾಬ್ದಾರಿಯನ್ನ ಕಾರ್ತಿಕ್ ಅಚ್ಚುಕಟ್ಟಾಗಿ ನಿರ್ವಾಹಿಸುತ್ತಿದ್ದಾರೆ. ಎಬಿ ಡಿವಿಲಿಯರ್ಸ್ ಸ್ಥಾನವನ್ನ ತುಂಬಿ, ಅವರ ಅನುಪಸ್ಥಿತಿ ಕಾಡದಂತೆ ನೋಡಿಕೊಳ್ತಿದ್ದಾರೆ. ಡಿಕೆ ಆಟ ಹೀಗೆ ಮುಂದುವರೆದ್ರೆ, ಆರ್​ಸಿಬಿ ಫಸ್ಟ್​ ಟೈಮ್ ಐಪಿಎಲ್ ಟ್ರೋಫಿ ಹಿಡಿಯೋದು ಗ್ಯಾರಂಟಿ.

IPL 2022: RCB ಕಾಲೆಳೆಯಲು ಹೋಗಿ ತಾನೇ ಟ್ರೋಲ್ ಆದ ರಾಜಸ್ಥಾನ ರಾಯಲ್ಸ್..!

ಆರ್‌ಸಿಬಿ ತಂಡದ ಆಪತ್ಭಾಂಧವ ಎನಿಸಿದ್ದ ಎಬಿ ಡಿವಿಲಿಯರ್ಸ್‌ (AB de Villiers) 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರು. ಎಬಿಡಿ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಆರ್‌ಸಿಬಿ ತಂಡಕ್ಕೆ ಗೆಲುವಿನ ಸಿಹಿಯನ್ನು ಉಣಬಡಿಸಿದ್ದರು. ಆದರೆ ಎಬಿಡಿ ಯುಗಾಂತ್ಯವಾದ ಬಳಿಕ ಅವರ ಸ್ಥಾನವನ್ನು ತುಂಬುವವರು ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಲಾರಂಭಿಸಿತ್ತು. 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಆರ್‌ಸಿಬಿ ಪಾಲಿನ ಮೊದಲ ಮೂರು ಪಂದ್ಯಗಳನ್ನು ಗಮನಿಸಿದರೆ, ಎಬಿಡಿ ಹೆಜ್ಜೆಯಲ್ಲಿಯೇ ದಿನೇಶ್ ಕಾರ್ತಿಕ್ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.