IPL 2022: ನಾಯಕತ್ವದಿಂದ ಕೆಳಗಿಳಿದಿದ್ದು ಧೋನಿಯ ತಪ್ಪು ನಿರ್ಧಾರವೆಂದ ಸೆಹ್ವಾಗ್..!

* ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್‌

* ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಹಾಲಿ ಚಾಂಪಿಯನ್‌

* ಜಡೇಜಾ ಬದಲಿಗೆ ಮತ್ತೆ ನಾಯಕತ್ವ ಸ್ವೀಕರಿಸಿರುವ ಎಂ ಎಸ್‌ ಧೋನಿ

IPL 2022 MS Dhoni Stepping down CSK Captaincy was a wrong decision Says Virender Sehwag kvn

ನವದೆಹಲಿ(ಮೇ.05): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League) ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ (MS Dhoni) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕತ್ವದಿಂದ ಕೆಳಗಿಳಿದು ರವೀಂದ್ರ ಜಡೇಜಾಗೆ ಪಟ್ಟ ಕಟ್ಟಿದ್ದು ಅತ್ಯಂತ ಕೆಟ್ಟ ನಿರ್ಧಾರವಾಗಿತ್ತು ಎಂದು ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag) ಹೇಳಿದ್ದಾರೆ. ಈ ಕುರಿತಂತೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮ್ಯಾನೇಜ್‌ಮೆಂಟ್‌ ನಿರ್ಧಾರವನ್ನು ಸೆಹ್ವಾಗ್‌ ಟೀಕಿಸಿದ್ದಾರೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿ ಪ್ಲೇ ಆಫ್‌ಗೇರುವ ಅವಕಾಶವನ್ನು ಬಹುತೇಕ ಕೈಚೆಲ್ಲಿದೆ.

ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ರನ್‌ಗಳ ಅಂತರದ ರೋಚಕ ಸೋಲು ಕಾಣುವ ಮೂಲಕ ಬಹುತೇಕ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ.  ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇದುವರೆಗೂ ಒಟ್ಟು 10 ಪಂದ್ಯಗಳನ್ನಾಡಿ ಕೇವಲ 3 ಗೆಲುವುಗಳನ್ನು ದಾಖಲಿಸುವ ಮೂಲಕ ಕೇವಲ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಮೊದಲು 5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿತ್ತು, ಇದೀಗ ಆರ್‌ಸಿಬಿ ಎದುರಿನ ಸೋಲಿನೊಂದಿಗೆ ಸಿಎಸ್‌ಕೆ ಪ್ಲೇ ಆಫ್‌ ಹಾದಿಯೂ ಅಂತ್ಯವಾಗಿದೆ. ಈ ಆವೃತ್ತಿಯ ಐಪಿಎಲ್‌ಗೂ ಮುನ್ನ ನಾಯಕತ್ವ ಬದಲಾವಣೆ ಮಾಡಿದ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಸೆಹ್ವಾಗ್ ಕಾಲೆಳೆದಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಟೂರ್ನಿ ಆರಂಭದಲ್ಲೇ ಮಹೇಂದ್ರ ಸಿಂಗ್ ಧೋನಿ ಬದಲು ರವೀಂದ್ರ ಜಡೇಜಾ ಅವರನ್ನು ನಾಯಕರನ್ನಾಗಿ ಘೋಷಿಸುವ ಮೂಲಕ ತಪ್ಪು ಮಾಡಿತು. ನನ್ನ ಪ್ರಕಾರ ಇದು ತಪ್ಪು ನಿರ್ಧಾರವಾಗಿತ್ತು. ನನ್ನ ಪ್ರಕಾರ ಒಂದು ವೇಳೆ ರವೀಂದ್ರ ಜಡೇಜಾ ಅವರನ್ನೇ ನಾಯಕ ಎಂದು ತೀರ್ಮಾನಿಸಿದ್ದಾರೆ ಎಂದ ಮೇಲೆ ಇನ್ನುಳಿದ ಪಂದ್ಯಗಳಲ್ಲೂ ಜಡೇಜಾ ಅವರೇ ನಾಯಕರಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಬೇಕಿತ್ತು ಎಂದು ವಿರೇಂದ್ರ ಸೆಹ್ವಾಗ್ ಖ್ಯಾತ ಕ್ರಿಕೆಟ್‌ ವೆಬ್‌ಸೈಟ್‌ Cricbuzz ಗೆ ಪ್ರತಿಕ್ರಿಯಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡುವ ಹನ್ನೊಂದರ ಬಳಗ ಇನ್ನೂ ಸರಿಯಾಗಿ ಸೆಟಲ್ ಆಗಿಲ್ಲ. ಋತುರಾಜ್ ಗಾಯಕ್ವಾಡ್ ಅವರಿಂದ ಆರಂಭದಿಂದಲೂ ರನ್ ಬರುತ್ತಿಲ್ಲ. ಬ್ಯಾಟರ್‌ಗಳು ಸರಿಯಾಗಿ ರನ್ ಗಳಿಸುತ್ತಿಲ್ಲ. ಒಂದು ಪಂದ್ಯದಲ್ಲಿ ಧೋನಿ ರನ್ ಗಳಿಸಿದರೆ, ಮತ್ತೊಂದು ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ರನ್ ಬಾರಿಸಿದ್ದಾರೆ. ಒಂದು ಪಂದ್ಯದಲ್ಲಿ ಧೋನಿ ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿದ ಪಂದ್ಯವನ್ನು ಸಿಎಸ್‌ಕೆ ಬಹುತೇಕ ಸೋತೇ ಹೋಯಿತು ಎನ್ನುವಂತಾಗಿತ್ತು. ಅವರು ಆರಂಭದಿಂದಲೇ ಒಳ್ಳೆಯ ಪ್ರದರ್ಶನ ತೋರಲು ವಿಫಲರಾದರು. ಒಂದು ವೇಳೆ ಆರಂಭದಿಂದಲೇ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕರಾಗಿದ್ದರೆ ಸಿಎಸ್‌ಕೆ ತಂಡವು ಇಷ್ಟು ಪಂದ್ಯಗಳನ್ನು ಸೋಲುತ್ತಿರಲಿಲ್ಲ ಎಂದು ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

IPL 2022: ಹಾರ್ದಿಕ್‌ ಪಾಂಡ್ಯ ಪುತ್ರ ಅಗಸ್ತ್ಯನಿಂದ ರಶೀದ್ ಖಾನ್‌ಗೆ ಪ್ಲೈಯಿಂಗ್ ಕಿಸ್‌..! ವಿಡಿಯೋ ವೈರಲ್

15ನೇ ಆವೃತ್ತಿಯ ಐಪಿಎಲ್‌ನ ಆರಂಭಿಕ 8 ಪಂದ್ಯಗಳಲ್ಲಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. 8 ಪಂದ್ಯಗಳಲ್ಲಿ ಸಿಎಸ್‌ಕೆ ಕೇವಲ 2 ಪಂದ್ಯಗಳಲ್ಲಿ ಮಾತ್ರ ಜಯ ಗಳಿಸಿತ್ತು. ಇದರ ಬೆನ್ನಲ್ಲೇ ಆಟದ ಮೇಲೆ ಗಮನ ಕೊಡುವ ಉದ್ದೇಶದಿಂದ ರವೀಂದ್ರ ಜಡೇಜಾ ತಮ್ಮ ನಾಯಕತ್ವವನ್ನು ಧೋನಿಗೆ ವರ್ಗಾಯಿಸಿದ್ದರು. ಧೋನಿ ನೇತೃತ್ವದಲ್ಲಿ ಸಿಎಸ್‌ಕೆ ಎರಡು ಪಂದ್ಯಗಳನ್ನಾಡಿ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದೆ.

Latest Videos
Follow Us:
Download App:
  • android
  • ios