Asianet Suvarna News Asianet Suvarna News

IPL 2022 ಟಾಸ್ ಗೆದ್ದ ಮುಂಬೈ ತಂಡದಿಂದ ಬೌಲಿಂಗ್ ಆಯ್ಕೆ

ಮೊದಲ ಪಂದ್ಯದಲ್ಲಿ ಸೋಲಿನ ನಿರಾಸೆ ಕಂಡಿರುವ ಮುಂಬೈ ಇಂಡಿಯನ್ಸ್ ತಂಡ ಹಾಗೂ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 61 ರನ್ ಗಳ ದೊಡ್ಡ ಅಂತರದಿಂದ ಬಗ್ಗುಬಡಿದಿರುವ ರಾಜಸ್ಥಾನ ರಾಯಲ್ಸ್ ತಂಡ ಶನಿವಾರದ ಮೊದಲ ಪಂದ್ಯದಲ್ಲಿ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ.

IPL 2022 MI vs RR Unchanged Mumbai Indians have won the toss and have opted to field against Rajasthan Royals san
Author
Bengaluru, First Published Apr 2, 2022, 3:34 PM IST | Last Updated Apr 2, 2022, 3:49 PM IST

ಮುಂಬೈ(ಏ.02): ಮುಂಬೈ ಇಂಡಿಯನ್ಸ್  (Mumbai Indians) ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ( Indian Premier League ) ಇನ್ನೂ ತಮ್ಮ ಗೆಲುವಿನ ಖಾತೆ ತೆರೆದಿಲ್ಲ ಮತ್ತು ಶನಿವಾರ ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ( Dr DY Patil Sports Academy ) ಸಂಜು ಸ್ಯಾಮ್ಸನ್ ( Sanju Samson ) ನೇತೃತ್ವದ ರಾಜಸ್ಥಾನ್ ರಾಯಲ್ಸ್ (Rajasthan Royals) ಅನ್ನು ಎದುರಿಸಲಿದ್ದು, ಮೊದಲ ಗೆಲುವು ದಾಖಲಿಸುವ ವಿಶ್ವಾಸದಲ್ಲಿದೆ. ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದ ಮೊದಲ ಪಂದ್ಯದ ಪ್ಲೇಯಿಂಗ್ ಇಲೆವೆನ್ ಅನ್ನೇ ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿದೆ. ಇದರಿಂದಾಗಿ ಸೂರ್ಯಕುಮಾರ್ ಯಾದವ್ ಈ ಪಂದ್ಯಕ್ಕೂ ಲಭ್ಯರಿಲ್ಲ.ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 4 ವಿಕೆಟ್ ಸೋಲು ಕಂಡಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ 2022ರ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ( Sunrisers Hyderabad ) ತಂಡವನ್ನು 61 ರನ್ ಗಳಿಂದ ಮಣಿಸಿ ಶುಭಾರಂಭ ಮಾಡಿತ್ತು.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ 2011 ರ ವಿಶ್ವಕಪ್ (2011 ODI World Cup Win )ವಿಜಯದ 11 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿತು. ಅವರು ಜಹೀರ್ ಖಾನ್ (Zaheer Khan ) ಮತ್ತು ಸಚಿನ್ ತೆಂಡುಲ್ಕರ್ (Sachin Tendulkar) , ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ಪ್ರಯಾಣಿಸಲು ತಯಾರಾಗುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ. 

ಈ ವರ್ಷ ಇಲ್ಲಿಯವರೆಗೆ ನಡೆದ ಎರಡು ಪಂದ್ಯಗಳಲ್ಲಿ, ಚೇಸಿಂಗ್ (Chasing) ಮಾಡಿದ ತಂಡಗಳು ಗೆಲುವು ಸಾಧಿಸಿವೆ. ಹಾಗಾಗಿ ಚೇಸಿಂಗ್ ಪ್ರವೃತ್ತಿಯಲ್ಲಿ ಈ ಬಾರಿ ಬದಲಾವಣೆ ಆಗುವುದು ಅನುಮಾನ. ಹಾಗಿದ್ದರೂ, ಮಧ್ಯಾಹ್ಬದ ಅವಧಿಯ ಆಟವಾಗಿರುವ ಕಾರಣ ಫಲಿತಾಂಶದ ಬಗ್ಗೆ ಕುತೂಹಲವಿದೆ. ರಾಜಸ್ಥಾನ ಹಾಗೂ ಮುಂಬೈ ತಂಡಗಳು ಐಪಿಎಲ್ ನಲ್ಲಿ 24 ಬಾರಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್ ತಂಡ ಸಣ್ಣ ಮಟ್ಟದ ಮುನ್ನಡೆಯಲ್ಲಿದೆ.

13 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಹಾಗೂ 11 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡಗಳು ಗೆಲುವು ಕಂಡಿವೆ. ಆದರೆ, 2018ರಿಂದ ನಡೆದಿರುವ ಮುಖಾಮುಖಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ 5-3 ಗೆಲುವುಗಳ ಮುನ್ನಡೆಯಲ್ಲಿದೆ. 2018 ರಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿದ ಪೈಕಿ 62.50ರ ಗೆಲುವಿನ ಸರಾಸರಿ ಹೊಂದಿದೆ. ಆದರೆ, ಈ ಮೈದಾನದಲ್ಲಿ ಆಡಿದ 7 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ 5 ಗೆಲುವು ಕಂಡಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ ತಲಾ 1 ಗೆಲುವು ಹಾಗೂ ಸೋಲು ಕಂಡಿದೆ.

IPL 2022 ಬರೋಬ್ಬರಿ 8 ಸಿಕ್ಸರ್, ರಸೆಲ್ ಅಬ್ಬರದಿಂದ ಕೆಕೆಆರ್‌ಗೆ ಭರ್ಜರಿ ಗೆಲುವು!

ಪ್ಲೇಯಿಂಗ್ ಇಲೆವೆನ್
ರಾಜಸ್ಥಾನ್ ರಾಯಲ್ಸ್:
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ), ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ.

IPL 2022 - ಬಾಲಿವುಡ್ ಬೆಡಗಿಯರ ಜೊತೆ ಕ್ರಿಕೆಟಿಗರ ಲವ್‌ ಆಫೇರ್ಸ್‌!

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿ.ಕೀ), ಅನ್ ಮೋಲ್ ಪ್ರೀತ್ ಸಿಂಗ್, ತಿಲಕ್ ವರ್ಮಾ, ಕೈರಾನ್ ಪೊಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಜಸ್ ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್, ಬಸಿಲ್ ಥಂಪಿ.

Latest Videos
Follow Us:
Download App:
  • android
  • ios