* ಬ್ಯಾಟಿಂಗ್‌ನಲ್ಲಿ ರನ್‌ ಬರ ಅನುಭವಿಸುತ್ತಿರುವ ಕನ್ನಡಿಗ ಮನೀಶ್ ಪಾಂಡೆ * ಈ ಬಾರಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಮನೀಶ್* ಕಳೆದ ಮೂರು ಪಂದ್ಯಗಳಿಂದ ಪಾಂಡೆ ಗಳಿಸಿದ್ದು ಕೇವಲ 22 ರನ್

ಮುಂಬೈ(ಏ.07): ಭಂಡ ಧೈರ್ಯ ಮಾಡಿ ಹೊಸ ಫ್ರಾಂಚೈಸಿ ಲಖನೌ ಸೂಪರ್‌ ಜೈಂಟ್ಸ್‌ (Lucknow Super Giants) ಐಪಿಎಲ್ ಆಟಗಾರರ ಹರಾಜಿನಲ್ಲಿ ಕನ್ನಡಿಗ ಮನೀಶ್​ ಪಾಂಡೆರನ್ನ (Manish Pandey) ತನ್ನ ತೆಕ್ಕೆಗೆ ಸೆಳೆದುಕೊಳ್ತು. ಸಾಲದೆಂಬಂತೆ ಹಿಂದೆ ಮುಂದೆ ನೋಡದೇ ಆಡುವ ಹನ್ನೊಂದರ ಬಳಗದಲ್ಲೂ ಚಾನ್ಸ್ ನೀಡ್ತು. ಆದ್ರೆ ಫ್ರಾಂಚೈಸಿ ಇಟ್ಟ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ಮನೀಶ್ ಪಾಂಡೆ ಫೇಲಾಗಿದ್ದಾರೆ. ಮನೀಶ್​​ ಅದ್ಭುತ ಪ್ರತಿಭಾನ್ವಿತ ಕ್ರಿಕೆಟಿಗ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಪ್ರಸಕ್ತ ಐಪಿಎಲ್​​ನಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರ್ತಿಲ್ಲ. ಅವರ ಮೇಲಿಟ್ಟ ಎಲ್ಲಾ ಭರವಸೆಗಳು ಹುಸಿಯಾಗಿವೆ. ಪದೇ ಪದೇ ಪಾಂಡೆ ವೈಫಲ್ಯ​ ಕಾಣ್ತಿದ್ದಂತೆ ಪ್ಲೇಯಿಂಗ್​ ಇಲೆವೆನ್​​ನಿಂದ ಕೈಬಿಡಬೇಕು ಅನ್ನೋ ಟಾಕ್ಸ್​ ಜೋರಾಗಿ ಕೇಳಿ ಬರ್ತಿದೆ. ಕನ್ನಡಿಗ ಅಂತಹ ವರ್ಸ್ಟ್ ಪರ್ಫಾಮೆನ್ಸ್ ​​​ನೀಡ್ತಿದ್ದಾರೆ.

3 ಪಂದ್ಯಗಳಿಂದ ಜಸ್ಟ್​ 22 ರನ್​​​: ರನ್​ ಗಳಿಸಲು ಹೆಣಗಾಡ್ತಿರೋ ಮನೀಶ್ ಪಾಂಡೆ ನಿಜಕ್ಕೂ ಸ್ಟ್ರಗಲ್​ ಮಾಡ್ತಿದ್ದಾರೆ. 3 ಪಂದ್ಯಗಳಿಂದ ಜಸ್ಟ್ 22 ರನ್​ ಕಲೆಹಾಕಿದ್ದಾರೆ. ಅಂದ್ರೆ ಪಂದ್ಯವೊಂದಕ್ಕೆ 7 ರನ್​​​​ನಂತೆ. ಇನ್ನೂ ಈ ಮೂರು ಇನ್ನಿಂಗ್ಸ್​ಗಳಲ್ಲಿ ಬೆಸ್ಟ್​ ಸ್ಕೋರ್ ಅಂದ್ರೆನೇ 11. 

ಪಾಂಡೆಗೆ ಮತ್ತೊಂದು ಚಾನ್ಸ್ ಕೊಡ್ತಾರಾ ಕ್ಯಾಪ್ಟನ್ ರಾಹುಲ್​​:

ಮನೀಶ್ ಪಾಂಡೆ ಕಳಪೆ ಆಟ ಟೀಮ್ ಮ್ಯಾನೇಜ್​​ಮೆಂಟ್ ನಿದ್ದೆಗೆಡಿಸಿದೆ. ಪ್ಲೇ ಆಫ್​​​ ಎಂಟ್ರಿಕೊಡಬೇಕಾದ್ರೆ ಪ್ರತಿಯೊಂದು ಪಂದ್ಯವು ಮುಖ್ಯ. ಹೀಗಾಗಿ ಪಾಂಡೆ ಸದ್ಯ ಸಂಕಷ್ಟದಲ್ಲಿದ್ದಾರೆ. ಒಂದು ವೇಳೆ ವರ್ಸ್ಟ್ ಪರ್ಫಾಮೆನ್ಸ್ ಹೊರತಾಗಿಯೂ ಕ್ಯಾಪ್ಟನ್​​ ರಾಹುಲ್​ ನಂಬಿಕೆ ಇಟ್ರೆ ಪಾಂಡೆ ಇಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ. ​​ಒಂದು ವೇಳೆ ಆಡಿದ್ರು ಅದು ಫೈನಲ್ ಚಾನ್ಸ್​​. ರನ್​​ ಹೊಳೆ ಹರಿಸಲೇಬೇಕಿದೆ. ಇಲ್ಲವಾದ್ರೆ ಕನ್ನಡಿಗ ಟೀಮ್​ ಮ್ಯಾನೇಜ್​​ಮೆಂಟ್ ಕೆಂಗಣ್ಣಿಗೆ ಗುರಿಯಾಗೋದು ಪಕ್ಕಾ.

IPL 2022 ಲಖನೌ ಹ್ಯಾಟ್ರಿಕ್ ಗೆಲುವಿನ ಕನಸಿಗೆ ತಣ್ಣೀರೆರಚುತ್ತಾ ಡೆಲ್ಲಿ ಕ್ಯಾಪಿಟಲ್ಸ್..?

ಇನ್ನು ಕಳೆದ ಸೀಸನ್​​ನಲ್ಲೂ ಪಾಂಡೆ ಪ್ಲಾಫ್​ ಆಗಿದ್ರು. ಬರೀ 292 ರನ್ನಷ್ಟೇ ಗಳಿಸಿದ್ರು. ಇಷ್ಟಾದ್ರು ಲಖನೌ ಸೂಪರ್‌ ಜೈಂಟ್ಸ್‌ ಕನ್ನಡಿಗನ ಮೇಲೆ ನಂಬಿಕೆ ಇಟ್ಟು ಬರೋಬ್ಬರಿ 4.6 ಕೋಟಿ ಖರೀದಿಸ್ತು. ಆದ್ರೂ ಪ್ರಯೋಜನ ಏನು ಬಂತು. ಇದಕ್ಕೆ ನ್ಯಾಯ ಒದಗಿಸಬೇಕಾದ ಪಾಂಡೆ ಮತ್ತೆ ಪ್ಲಾಫ್​ ಶೋನಿಂದ ಸುದ್ದಿಯಲ್ಲಿದ್ದಾರೆ. ಇನ್ನಾದ್ರು ಸಿಕ್ಕ ಚಾನ್ಸ್ ಎನ್​ಕ್ಯಾಶ್ ಮಾಡಿಕೊಳ್ಳಲಿ.

ಮನೀಶ್ ಪಾಂಡೆ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ಲಖನೌ ಸೂಪರ್ ಜೈಂಟ್ಸ್ ತಂಡವು ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿ, ಹ್ಯಾಟ್ರಿಕ್ ಗೆಲುವಿನತ್ತ ಚಿತ್ತ ನೆಟ್ಟಿದೆ. ಲಖನೌ ಸೂಪರ್ ಜೈಂಟ್ಸ್ ತಂಡವು ಮೊದಲ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ಗೆ ಶರಣಾಗಿದ್ದರೂ, ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ ಗೆಲುವು ಸಾಧಿಸಿದೆ. ಕ್ವಿಂಟನ್ ಡಿ ಕಾಕ್, ಆಯುಷ್ ಬದೋನಿ, ಎವಿನ್ ಲೆವಿಸ್ ಹಾಗೂ ದೀಪಕ್ ಹೂಡಾ ಭರ್ಜರಿ ಫಾರ್ಮ್‌ನಲ್ಲಿರುವುದು ಲಖನೌ ತಂಡದ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಇನ್ನು ತಂಡದ ಬೌಲರ್‌ಗಳು ಕೂಡಾ ಕರಾರುವಕ್ಕಾದ ದಾಳಿ ನಡೆಸುವ ಮೂಲಕ ಕಳೆದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕೃನಾಲ್ ಪಾಂಡ್ಯ ಹಾಗೂ ಜೇಸನ್ ಹೋಲ್ಡರ್ ಎದುರಾಳಿ ಬ್ಯಾಟರ್‌ಗಳಿಗೆ ಸುಲಭವಾಗಿ ರನ್ ಬಾರಿಸಲು ಅವಕಾಶ ಮಾಡಿಕೊಡುತ್ತಿಲ್ಲ. ಇನ್ನು ಯುವ ವೇಗಿ ಆವೇಶ್ ಖಾನ್ ಕೂಡಾ ಮಿಂಚಿನ ವೇಗದಲ್ಲಿ ದಾಳಿ ನಡೆಸುತ್ತಿದ್ದು, ಬಲಿಷ್ಠ ಡೆಲ್ಲಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.