Asianet Suvarna News Asianet Suvarna News

IPL 2022 ಮುಂಬೈ ಇಂಡಿಯನ್ಸ್ ತಂಡಕ್ಕೆ ಸತತ 8ನೇ ಸೋಲು

ಐಪಿಎಲ್ ಇತಿಹಾಸದಲ್ಲಿ ಸತತ 8 ಪಂದ್ಯಗಳಲ್ಲಿ ಸೋಲು ಕಂಡ ಮೊದಲ ತಂಡ ಎನಿಸಿಕೊಂಡ ಮುಂಬೈ ಇಂಡಿಯನ್ಸ್, 15ನೇ ಆವೃತ್ತಿಯ ಐಪಿಎಲ್ ನ ಪ್ಲೇ ಅಫ್ ರೇಸ್ ನಿಂದ ಹೋರಾಟವಿಲ್ಲದೆ ಮೊದಲ ತಂಡವಾಗಿ ನಿರ್ಗಮಿಸುವುದು ಬಹುತೇಕ ಖಚಿತವಾಗಿದೆ.

IPL 2022  LSG vs MI Lucknow Super Giants won by 36 runs Mumbai Indians lost 8th match Of The Season san
Author
Bengaluru, First Published Apr 24, 2022, 11:40 PM IST | Last Updated Apr 24, 2022, 11:45 PM IST

ಮುಂಬೈ (ಏ.24): ಸತತ ಎಂಟನೇ ಪಂದ್ಯದಲ್ಲಿ ಎದುರಾದ ಆಘಾತಕಾರಿ ಸೋಲಿನ ಬೆನ್ನಲ್ಲಿಯೇ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಮುಂಬೈ ಇಂಡಿಯನ್ಸ್ (Mumbai Indians) ಮೊದಲ ತಂಡವಾಗಿ ಪ್ಲೇ ಆಫ್ ರೇಸ್ (Play Off)ನಿಂದ ನಿರ್ಗಮಿಸುವುದು ಖಚಿತವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ ನಡೆದ ಕಾದಾಟದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡ 36 ರನ್ ಗಳ ಸೋಲು ಕಂಡಿತು.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಮೊತ್ತ ಕಲೆಹಾಕಿತು. ಅದಕ್ಕೆ ಕಾರಣವಾಗಿದ್ದು, ಕೆಎಲ್ ರಾಹುಲ್ (103*ರನ್, 62 ಎಸೆತ, 12 ಬೌಂಡರಿ, 4 ಸಿಕ್ಸರ್) ಬಾರಿಸಿದ ಆಕರ್ಷಕ ಶತಕ. 169 ರನ್ ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಗೆ 132 ರನ್ ಕಲೆಹಾಕಿ ಸೋಲು ಕಂಡಿತು. ಆ ಮೂಲಕ ಐಪಿಎಲ್ ನಿಂದ ಬಹುತೇಕವಾಗಿ ಹೊರಬಿದ್ದಿದೆ.

ಸಾಲು ಸಾಲು ಸೋಲುಗಳಿಂದ ಆಘಾತ ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಕಳೆದ ಕೆಲ ಪಂದ್ಯಗಳಿಗೆ ಹೋಲಿಸಿದರೆ, ಈ ಬಾರಿ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕಟ್ ಗೆ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಜೋಡಿ 43 ಎಸೆತಗಳಲ್ಲಿ 49 ರನ್ ಜೊತೆಯಾಟವಾಡಿತು. ಆಮೆಗತಿಯ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ 20 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸಿದರೆ, ಜೊತೆಯಾಟ ಹೆಚ್ಚಿನ ರನ್ ಗಳನ್ನು ರೋಹಿತ್ ಶರ್ಮ ಸಿಡಿಸಿದ್ದರು. ತಿಣುಕುತ್ತ ಬ್ಯಾಟಿಂಗ್ ನಡೆಸಿದ್ದ ಇಶಾನ್ ಕಿಶನ್, ರವಿ ಬಿಷ್ಣೋಯಇ ಎಸೆದ 8ನೇ ಓವರ್ ನ ಮೊದಲ ಎಸೆತದಲ್ಲಿ ನಿರ್ಗಮಿಸಿದರು.

IPL 2022 ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಚಚ್ಚಿದ ಕೆಎಲ್ ರಾಹುಲ್!

ಇಶಾನ್ ಕಿಶನ್ ಔಟಾದ ಬೆನ್ನಲ್ಲಿಯೇ ಮುಂಬೈನ ಪ್ರಮುಖ ಬ್ಯಾಟ್ಸ್ ಮನ್ ಗಳು ಪರೇಡ್ ನಡೆಸಿದರು. 5 ಎಸೆತ ಆಡಿದ ಡೆವಾಲ್ಡ್ ಬ್ರೇವಿಸ್ 3 ರನ್ ಬಾರಿಸಿ ಮೊಹ್ಸಿನ್ ಖಾನ್ ಗೆ ವಿಕೆಟ್ ನೀಡಿದರೆ, 31 ಎಸೆತಗಳಲ್ಲಿ5 ಬೌಂಡರಿ, 1 ಸಿಕ್ಸರ್ ನೊಂದಿಗೆ 39 ರನ್ ಸಿಡಿಸಿ ಮುಂಬೈನ ಆರಂಭಿಕ ರನ್ ಗಳಿಗೆ ಕಾರಣರಾಗಿದ್ದ ರೋಹಿತ್ ಶರ್ಮ 3ನೇ ವಿಕೆಟ್ ರೂಪದಲ್ಲಿ ನಿರ್ಗಮಿಸಿದರು. ಕೃನಾಲ್ ಪಾಂಡ್ಯ, ರೋಹಿತ್ ಅವರ ಪ್ರಮುಖ ವಿಕೆಟ್ ಉರುಳಿಸಿದರು. ಕಳೆದ ಹಲವು ಪಂದ್ಯಗಳಿಂದ ಮುಂಬೈ ತಂಡಕ್ಕೆ ಬ್ಯಾಟಿಂಗ್ ವಿಭಾಗದ ಬಲವಾಗಿದ್ದ ಸೂರ್ಯ ಕುಮಾರ್ ಯಾದವ್, 7 ಎಸೆತಗಳಲ್ಲಿ 7 ರನ್ ಬಾರಿಸಿ ಆಯುಷ್ ಬಡೋನಿಗೆ ವಿಕೆಟ್ ನೀಡಿದರು. ಇದು ಬಡೋನಿಯ ಮೊಟ್ಟಮೊದಲ ಐಪಿಎಲ್ ವಿಕೆಟ್ ಎನಿಸಿದೆ. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಬಾರಿಸಿದ್ದ ಮುಂಬೈ ಇಂಡಿಯನ್ಸ್ 67 ರನ್ ಗಳಿಸುವ ವೇಳೆಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಹಾದಿಯಲ್ಲಿತ್ತು.

IPL 2022 ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ

ತಿಲಕ್ ವರ್ಮ-ಪೊಲಾರ್ಡ್ ಜೊತೆಯಾಟ: ಸೋಲಿನ ಅಪಾಯದಲ್ಲಿದ್ದ ಮುಂಬೈ ತಂಡಕ್ಕೆ 5ನೇ ವಿಕೆಟ್ ಗೆ ತಿಲಕ್ ವರ್ಮ ಹಾಗೂ ಕೈರಾನ್ ಪೊಲ್ಲಾರ್ಡ್ ಆಧಾರವಾದರು. ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ಗಳ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದ ತಿಲಕ್ ವರ್ಮ ಆರಂಭದಲ್ಲಿ ತಾವೇ ಹೆಚ್ಚಿನ ಎಸೆತಗಳನ್ನು ಎದುರಿಸುವ ಮೂಲಕ ರನ್ ಗಳಿಸಲು ನೋಡಿದರು. ಇನ್ನೊಂದೆಡೆ ಕೈರಾನ್ ಪೊಲ್ಲಾರ್ಡ್ ಕೂಡ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿ ಹೆಚ್ಚಿನ ವಿಕೆಟ್ ಪತನವಾಗದಂತೆ ನೋಡಿಕೊಂಡಿದ್ದರು. 39 ಎಸೆತಗಳಲ್ಲಿ 57 ರನ್ ಜೊತೆಯಾಟವಾಡಿದ ಈ ಜೋಡಿಯನ್ನು 18ನೇ ಓವರ್ ನಲ್ಲಿ ಜೇಸನ್ ಹೋಲ್ಡರ್ ಬೇರ್ಪಡಿಸಿದರು. 27 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 38 ರನ್ ಸಿಡಿಸಿದ್ದ ತಿಲಕ್ ವರ್ಮ ದೊಡ್ಡ ಹೊಡೆತ ಬಾರಿಸುವ ಯತ್ನದಲ್ಲಿ ರವಿ ಬಿಷ್ಣೋಯಿಗೆ ಕ್ಯಾಚ್ ನೀಡಿದರು.

Latest Videos
Follow Us:
Download App:
  • android
  • ios