ಐಪಿಎಲ್ ನ ಪ್ಲೇ ಆಫ್ ಸ್ಥಾನಕ್ಕೆ ಇನ್ನಷ್ಟು ಹತ್ತಿರವಾಗುವ ಗುರಿಯಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಶನಿವಾರದ 2ನೇ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದಿರುವ ಕೆಕೆಆರ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಪುಣೆ (ಮೇ.7): ಆಡಿದ 10 ಪಂದ್ಯಗಳಲ್ಲಿ 7 ಗೆಲುವು ಕಂಡು ಪ್ಲೇ ಆಫ್ ಸ್ಥಾನದಲ್ಲಿ ವಿಶ್ವಾಸದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡ ಹಾಗೂ ಈಗಾಗಲೇ ಪ್ಲೇ ಆಫ್ ಸ್ಥಾನದಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಮಾಜಿ ಚಾಂಪಿಯನ್ ಕೆಕೆಆರ್ (Kolkata Knight Riders) ತಂಡಗಳು 15ನೇ ಆವೃತ್ತಿಯ ಐಪಿಎಲ್ ನ (IPL 2022) ಶನಿವಾರದ ಡಬಲ್ ಹೆಡರ್ ನ 2ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಟಾಸ್ ಗೆದ್ದಿರುವ ಕೆಕೆಆರ್ (KKR) ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಲ್ಲಿ ಏಕೈಕ ಬದಲಾವಣೆ ಮಾಡಲಾಗಿದೆ. ಕೆ. ಗೌತಮ್ ಬದಲು ಆವೇಶ್ ಖಾನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್( ವಿ.ಕೀ), ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್, ಮೊಹ್ಸಿನ್ ಖಾನ್
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್: ಆರನ್ ಫಿಂಚ್, ಬಾಬಾ ಇಂದ್ರಜಿತ್(ವಿ.ಕೀ), ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಅನುಕುಲ್ ರಾಯ್, ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಶಿವಂ ಮಾವಿ, ಹರ್ಷಿತ್ ರಾಣಾ.
ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಭಾರೀ ನಿರೀಕ್ಷೆ ಮೂಡಿಸಿದ್ದ ಕೋಲ್ಕತಾ ನೈಟ್ರೈಡರ್ಸ್, ಸದ್ಯ ಲೀಗ್ ಹಂತದಲ್ಲೇ ಹೊರಬೀಳುವ ಭೀತಿಯಲ್ಲಿದ್ದು ಶನಿವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ ತಂಡದ ಸವಾಲನ್ನು ಎದುರಿಸಲಿದೆ. ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಶ್ರೇಯಸ್ ಅಯ್ಯರ್ ಪಡೆಗೆ ಹಿಂದಿನ ಪಂದ್ಯದಲ್ಲಿ ಒಲಿದ ಗೆಲುವು ಆತ್ಮವಿಶ್ವಾಸ ಮರಳಿ ಪಡೆಯುವಂತೆ ಮಾಡಿದ್ದರೂ, ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವ ಒತ್ತಡ ಇದೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆರೋನ್ ಫಿಂಚ್ (Aaron Finch) ಜವಾಬ್ದಾರಿಯುತ ಪ್ರದರ್ಶನ ತೋರುತ್ತಿಲ್ಲ. ನಾಯಕ ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ನಿತೀಶ್ ರಾಣಾ ಹಾಗೂ ಆಂಡ್ರೆ ರಸೆಲ್ ಅವರನ್ನು ಕೆಕೆಆರ್ ಬ್ಯಾಟಿಂಗ್‌ನಲ್ಲಿ ನೆಚ್ಚಿಕೊಂಡಿದ್ದಾರೆ. ಇನ್ನು ಸುನಿಲ್ ನರೈನ್ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕುತ್ತಿದ್ದು, ಉಳಿದ ಬೌಲರ್‌ಗಳಿಂದ ಉತ್ತಮ ಸಾಥ್ ಸಿಗುತ್ತಿಲ್ಲ.
IPL 2022: ಯಶಸ್ವಿ ಅಬ್ಬರ, ರಾಜಸ್ಥಾನ ರಾಯಲ್ಸ್‌ಗೆ ರೋಚಕ ಜಯ..!
ನಾವು ಈ ಮೈದಾನದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿಲ್ಲ. ಆದರೆ, ಟಿವಿಯಲ್ಲಿ ಈ ಮೈದಾನದಲ್ಲಿ ಆಡಿದ ಕೆಲವು ಪಂದ್ಯಗಳನ್ನು ವೀಕ್ಷಿಸಿದ್ದೇವೆ. ಸ್ವಲ್ಪ ಜಿಗುಟಾದ ಪಿಚ್. ಇಲ್ಲಿ ರನ್ ಬರುವುದು ಕಷ್ಟ. ಆದರೆ, ಇದು ನಮ್ಮ ಬ್ಯಾಟಿಂಗ್ ವಿಭಾಗಕ್ಕೆ ಸವಾಲು ನೀಡಲು ಸಾಧ್ಯವಾಗುತ್ತದೆ. ಉತ್ತಮವಾಗಿ ಆಡುವ ಮೂಲಕ ಸ್ಪರ್ಧಾತ್ಮಕ ಮೊತ್ತವನ್ನು ಮೈದಾನದಲ್ಲಿ ದಾಖಲಿಸಬೇಕು. ಸವಾಲಿನ ಪಿಚ್ ನಲ್ಲಿ ರನ್ ಗಳಿಸುವ ಚಾಲೆಂಜ್ ನ ಬಗ್ಗೆ ನಾವು ಹಚ್ಚಿನ ಗಮನ ನೀಡಬೇಕಿದೆ. ತಂಡದಲ್ಲಿ ಏಕೈಕ ಬದಲಾವಣೆ ಮಾಡಿದ್ದೇವೆ. ಕೆ. ಗೌತಮ್ ಬದಲಿಗೆ ಆವೇಶ್ ಖಾನ್ ಸ್ಥಾನ ಪಡೆದುಕೊಂಡಿದ್ದಾರೆ. ನಾವು ಒಂದೋ ಅಥವಾ ಎರಡು ಪ್ಲೇಯರ್ ಗಳ ಮೇಲೆ ಅವಲಂಬಿತವಾಗಿಲ್ಲ ಎನ್ನುವುದು ನನಗೆ ಹೆಚ್ಚಿನ ವಿಶ್ವಾಸ ತಂದಿದೆ. ಕೆಲ ದಿನಗಳ ಬ್ರೇಕ್ ಸಿಕ್ಕಿದ್ದು ಖುಷಿಯಾಗಿದ್ದು ಮೈದಾನದಲ್ಲಿ ನಮ್ಮ ಶೇ.100ರಷ್ಟು ನಿರ್ವಹಣೆ ನೀಡಲಿದ್ದೇವೆ.
ಕೆಎಲ್ ರಾಹುಲ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ
IPL 2022: ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ರಾಜಸ್ಥಾನ ರಾಯಲ್ಸ್
ನಾವು ಮೊದಲು ಬೌಲಿಂಗ್ ಮಾಡಬೇಕು ಎಂದು ಬಯಸಿದ್ದೆವು. ಕಳೆದ ಪಂದ್ಯದಲ್ಲಿ ನಾವು ಉತ್ತಮ ಮೊತ್ತವನ್ನು ಚೇಸ್ ಮಾಡಿದ್ದೆವು. ಉಮೇಶ್ ಯಾದವ್ ಗಾಯಗೊಂಡಿದ್ದು ಅವರ ಬದಲು ಹರ್ಷಿತ್ ರಾಣಾ ತಂಡಕ್ಕೆ ಬಂದಿದ್ದಾರೆ. ತಂಡದ ಸಂಯೋಜನೆಯ ಬಗ್ಗೆ ನಾಯಕ ಹೆಚ್ಚಿನ ಗಮನ ನೀಡುತ್ತಾನೆ. ಆದರೆ, ಸಾಕಷ್ಟು ಇಂಜುರಿಯ ಕಾರಣದಿಂದಾಗಿ ತಂಡದಲ್ಲಿ ಬದಲಾವಣೆಗಳು ನಿರಂತರವಾಗಿ ಆಗುತ್ತಿದ್ದವು. ಇದೆಲ್ಲವೂ ಆಟದಲ್ಲಿ ಸಾಮಾನ್ಯ. ನಮಗೆ ಈ ಸೀಸನ್ ಉತ್ತಮವಾಗಿರಲಿಲ್ಲ. ಹಾಗಂತ ಹೋರಾಟ ಕೈಬಿಟ್ಟಿಲ್ಲ. ಉತ್ತಮ ಪಂದ್ಯವನ್ನು ಎದುರು ನೋಡುತ್ತಿದ್ದೇವೆ. ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತನೆ ಮಾಡಲು ಪ್ರಯತ್ನಿಸುತ್ತೇನೆ.
ಶ್ರೇಯಸ್ ಅಯ್ಯರ್, ಕೆಕೆಆರ್ ತಂಡದ ನಾಯಕ
