IPL 2022 ರಾಹುಲ್, ಹೂಡ ಅರ್ಧಶತಕ, ಹೈದರಾಬಾದ್‌ಗೆ 170 ರನ್ ಟಾರ್ಗೆಟ್
- ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡ ಹಾಫ್ ಸೆಂಚುರಿ
- ಸನ್‌ರೈಸರ್ಸ್ ವಿರುದ್ಧ 169 ರನ್ ಸಿಡಿಸಿದ ಲಖನೌ ಸೂಪರ್‌ಜೈಂಟ್ಸ್
- ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ
ಮುಂಬೈ(ಏ.04): ಐಪಿಎಲ್ ಲೀಗ್ ಟೂರ್ನಿಯ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ತಂಡದ ಹೋರಾಟ ಆರಂಭದಲ್ಲೇ ಕುತೂಹಲ ಸೃಷ್ಟಿಸಿದೆ. ನಾಯಕ ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡ ಅರ್ಧಶತಕ ನೆರವಿನಿಂದ ಲಖನೌ ತಂಡ 7 ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿದೆ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿಗೆ 170 ರನ್ ಸಿಡಿಸಿಬೇಕಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಲಖನೌ ಸೂಪರ್‌ಜೈಂಟ್ಸ್ ತಂಡ ಆರಂಭದಲ್ಲೇ ಸನ್‌ರೈಸರ್ಸ್ ದಾಳಿಗೆ ತುತ್ತಾಯಿತು. ಕ್ವಿಂಟನ್ ಡಿಕಾಕ್ ಕೇವಲ 1 ರನ್ ಸಿಡಿಸಿ ಔಟಾದರು. ಇವಿನ್ ಲಿವಿಸ್ ಒಂದು ರನ್ ಸಿಡಿಸಿ ನಿರ್ಗಮಿಸಿದರು. ಕನ್ನಡಿಗ ಮನೀಶ್ ಪಾಂಡೆ 11 ರನ್ ಸಿಡಿಸಿ ಔಟಾದರು 27 ರನ್‌ಗಳಿಗೆ ಲಖನೌ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.
IPL 2022- ಪತ್ನಿ ಮತ್ತು ಮಗನ ಜೊತೆ Hardik Pandya ಗೆಲುವಿನ ಸೆಲೆಬ್ರೆಷನ್
ತಂಡಕ್ಕೆ ಆಸರೆಯಾದ ಕೆಎಲ್ ರಾಹುಲ್ ಹೋರಾಟ ಮುಂದುವರಿಸಿದರು. ದೀಪಕ್ ಹೂಡ ಉತ್ತಮ ಸಾಥ್ ನೀಡಿದರು. ಬಹುಬೇಗನೆ ವಿಕೆಟ್ ಕಳೆದುಕೊಂಡ ಕಾರಣ ಕೆಎಲ್ ರಾಹುಲ್ ನಿಧಾನಗತಿಯ ಆಟಕ್ಕೆ ಒತ್ತು ನೀಡಿದರು. ಈ ಮೂಲಕ ವಿಕೆಟ್ ಉಳಿಸಿಕೊಂಡು ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು.
ಹೂಡ ಹಾಗೂ ರಾಹುಲ್ ಜೊತೆಯಾಟದಿಂದ ಲಖನೌ ಸೂಪರ್‌ಜೈಂಟ್ಸ್ ಆಘಾತದಿಂದ ಚೇತರಿಸಿಕೊಂಡಿತು. ಇಷ್ಟೇ ಅಲ್ಲ ರಾಹುಲ್ ಹಾಗೂ ಹೂಡ ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಹೂಡ 33 ಎಸೆತದಲ್ಲಿ 51 ರನ್ ಸಿಡಿಸಿ ಔಟಾದರು. 16 ಓವರ್ ಪೂರ್ಣಗೊಳ್ಳುತ್ತಿದ್ದಂತೆ ರಾಹುಲ್ ಆಟದ ಶೈಲಿ ಬದಲಿಸಿದರು. ಸ್ಫೋಟಕ ಬ್ಯಾಟಿಂಗ್ ಮೊರೆ ಹೋದರು.
IPL 2022: ಆರ್‌ಸಿಬಿ ಪ್ರತಿಭಾನ್ವಿತ ಆಟಗಾರ ಟೂರ್ನಿಯಿಂದಲೇ ಔಟ್..!
ಅಂತಿಮ ಹಂತದಲ್ಲಿ ಆಯುಶ್ ಬದೋನಿ ಕೂಡ ಉತ್ತಮ ಸಾಥ್ ನೀಡಿದರು. ಕೆಎಲ್ ರಾಹುಲ್ 50 ಎಸೆತದಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 68 ರನ್ ಸಿಡಿಸಿದರು. ಕ್ರುನಾಲ್ ಪಾಂಡ್ಯ ಕೇವಲ 6 ರನ್ ಸಿಡಿಸಿ ಔಟಾದರು. ಆಯುಷ್ ಬದೋನಿ 19 ರನ್ ಸಿಡಿಸಿ ಔಟಾದರು. ಹೋಲ್ಡರ್ ಅಜೇಯ 8 ರನ್ ಸಿಡಿಸಿದರು. ಈ ಮೂಲಕ ಲಖನೌ ಸೂಪರ್‌ಜೈಂಟ್ಸ್ 7 ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿತು.
ಲಖನೌ ಸೂಪರ್‌ಜೈಂಟ್ಸ್ ತಂಡ ಉತ್ತಮ ಬೌಲಿಂಗ್ ದಾಳಿ ಹೊಂದಿದೆ. ಇಂದು ಜೇಸನ್ ಹೋಲ್ಡರ್ ಕೂಡ ತಂಡ ಸೇರಿಕೊಂಡಿದ್ದಾರೆ. ಇನ್ನು ರವಿ ಬಿಶ್ನೋಯಿ, ಆ್ಯಂಡ್ರೂ ಟೈ, ಅವೇಶ್ ಖಾನ್, ಕ್ರುನಾಲ್ ಪಾಂಡ್ಯ ಸೇರಿದಂತೆ ಬಲಿಷ್ಠ ಪಡೆ ಹೊಂದಿದೆ. ಹೀಗಾಗಿ ಇತ್ತ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಬ್ಯಾಟಿಂಗ್ ಪಡೆ ಹೊಂದಿದೆ. ಆದರೆ ಮೊದಲ ಪಂದ್ಯದಲ್ಲಿ ಕಾಂಬಿನೇಶನ್ ವರ್ಕೌಟ್ ಆಗಿಲ್ಲ. ಘಟಾನುಘಟಿ ಬ್ಯಾಟ್ಸ್‌ಮನ್ ಅಬ್ಬರಿಸಲಿಲ್ಲ.
ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿಕಾಕ್, ಮನೀಶ್ ಪಾಂಡೆ, ಇವಿನ್ ಲಿವಿಸ್, ದೀಪಕ್ ಹೂಡ, ಆಯುಷ್ ಬದೋನಿ, ಕ್ರುನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಆ್ಯಂಡ್ರೂ ಟೈ, ರವಿ ಬಿಶ್ನೋಯ್, ಆವೇಶ್ ಖಾನ್
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಕೇನ್ ವಿಲಿಯಮ್ಸನ್(ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಆ್ಯಡಿನ್ ಮಕ್ರಮ್, ಅಬ್ದುಲ್ ಸಮಾದ್, ರೊಮಾರಿಯೋ ಶೆಫಾರ್ಡ್, ವಾಶಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್