Asianet Suvarna News Asianet Suvarna News

ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ಕೆ ಎಲ್ ರಾಹುಲ್.!

* ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಕೆ ಎಲ್ ರಾಹುಲ್

* ಸತತ 5 ವರ್ಷ 500 ಪ್ಲಸ್ ರನ್ ಬಾರಿಸಿರುವ ಕನ್ನಡಿಗ

* ಡೇವಿಡ್ ವಾರ್ನರ್​ 6 ಸಲ 500 ಪ್ಲಸ್ ರನ್​ ಹೊಡೆದಿದ್ದಾರೆ.

IPL 2022 KL Rahul Becomes First Player to Score 500 Runs in 5 Consecutive Seasons kvn
Author
Bengaluru, First Published May 20, 2022, 4:54 PM IST

ಮುಂಬೈ(ಮೇ.20): ಐಪಿಎಲ್ ದುನಿಯಾವನ್ನು ಆಳಿದವರು ಬ್ಯಾಟ್ಸ್​ಮನ್​ಗಳು. ದಿಗ್ಗಜ ಬ್ಯಾಟರ್​ಗಳು ಕಲರ್ ಫುಲ್ ಟೂರ್ನಿ ಆಡಿದ್ದಾರೆ, ಆಡುತ್ತಿದ್ದಾರೆ. ಸಚಿನ್ ತೆಂಡುಲ್ಕರ್ (Sachin Tendulkar), ರಾಹುಲ್‌ ದ್ರಾವಿಡ್, ಸೌರವ್ ಗಂಗೂಲಿ, ಕ್ರಿಸ್‌ ಗೇಲ್, ಡೇವಿಡ್ ವಾರ್ನರ್ (David Warner), ರೋಹಿತ್ ಶರ್ಮಾ​, ಎಂ ಎಸ್ ಧೋನಿ ಹೀಗೆ ದಿಗ್ಗಜ ಕ್ರಿಕೆಟಿಗರೆಲ್ಲಾ ಚುಟುಕು ಕ್ರಿಕೆಟ್​ನಲ್ಲಿ ಮಿಂಚಿದ್ದಾರೆ, ಮಿಂಚುತ್ತಿದ್ದಾರೆ. ಆದ್ರೆ ಈ ಸ್ಟಾರ್​ ಬ್ಯಾಟರ್​ಗಳ್ಯಾರು ಮಾಡದ ದಾಖಲೆಯೊಂದನ್ನ ಕನ್ನಡಿಗ ಕೆ ಎಲ್ ರಾಹುಲ್ (KL Rahul) ಮಾಡಿದ್ದಾರೆ. ಈ ಮೂಲಕ ಐಪಿಎಲ್​​​ನಲ್ಲಿ ದಾಖಲೆ ಸರದಾರ ಎನಿಸಿಕೊಂಡಿದ್ದಾರೆ.

ಸತತ 5 ವರ್ಷ 500 ಪ್ಲಸ್ ರನ್​: 

ಕಳೆದೈದು ವರ್ಷಗಳಿಂದ IPL​ನಲ್ಲಿ ಕನ್ಸಿಟೆನ್ಸಿ ಪರ್ಫಾಮೆನ್ಸ್ ನೀಡ್ತಿರೋದು ಅಂದ್ರೆ ಅದು ಕನ್ನಡಿಗ ರಾಹುಲ್ ಮಾತ್ರ. ಕರ್ನಾಟಕ ಬಾಯ್​​ ಐಪಿಎಲ್​ನಲ್ಲಿ 2018ರಿಂದ ಸತತ 5 ವರ್ಷ 500 ಪ್ಲಸ್ ರನ್ ಹೊಡೆದ ದಾಖಲೆ ಮಾಡಿದ್ದಾನೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲಿ 5 ಸೀಸನ್​ನಲ್ಲಿ 500 ಪ್ಲಸ್ ಹೊಡೆದಿರುವ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ (Shikhar Dhawan) ದಾಖಲೆ ಸರಿಗಟ್ಟಿದ್ದಾರೆ. ಡೇವಿಡ್ ವಾರ್ನರ್​ 6 ಸಲ 500 ಪ್ಲಸ್ ರನ್​ ಹೊಡೆದಿದ್ದಾರೆ. ಕೆ ಎಲ್‌ ರಾಹುಲ್ ಇನ್ನೆರಡು ಸೀಸನ್​ನಲ್ಲಿ ತಲಾ 500 ಪ್ಲಸ್ ರನ್ ಹೊಡೆದ್ರೆ ವಾರ್ನರ್ ರೆಕಾರ್ಡ್​ ಸಹ ಬ್ರೇಕ್ ಮಾಡಲಿದ್ದಾರೆ.

ವಿರಾಟ್ ಕೊಹ್ಲಿ - ಕ್ವಿಂಟನ್ ಡಿ ಕಾಕ್ ದಾಖಲೆ ಮುರಿಯಲಿಲ್ಲ ರಾಹುಲ್ ​- ಡಿ ಕಾಕ್:

ಮೊನ್ನೆ ಕೆಕೆಆರ್ ವಿರುದ್ಧ  ಲಖನೌ ಕ್ಯಾಪ್ಟನ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್​​ಗೆ 210 ರನ್​ಗಳ ಜೊತೆಯಾಟವಾಡಿದ್ರು. ಈ ಮೂಲಕ ಐಪಿಎಲ್​ನಲ್ಲಿ ಮೊದಲ ವಿಕೆಟ್​​​ಗೆ ಗರಿಷ್ಠ ರನ್​ ಜೊತೆಯಾಟವಾಡಿದ ದಾಖಲೆ ಮಾಡಿದ್ರು. ಹಾಗೆ ಒಂದೂ ವಿಕೆಟ್ ಕಳೆದುಕೊಳ್ಳದೆ ಸಂಪೂರ್ಣ 20 ಓವರ್ ಬ್ಯಾಟಿಂಗ್ ಮಾಡಿದ ರೆಕಾರ್ಡ್​ ಸಹ ಮಾಡಿದ್ರು.

ಪ್ಲೇ ಆಫ್​​​ ಪ್ರವೇಶಿಸಿರುವ ರಾಜಸ್ಥಾನ ರಾಯಲ್ಸ್ ಗೆಲ್ಲೋ ಒತ್ತಡದಲ್ಲಿರೋದ್ಯಾಕೆ..?

ಆದ್ರೆ ಈ ಇಬ್ಬರಿಂದ 2016ರಲ್ಲಿ ಆರ್​ಸಿಬಿ ಜೋಡಿ ಮಾಡಿದ್ದ ದಾಖಲೆ ಮುರಿಯಲು ಆಗಲಿಲ್ಲ. 2016ರಲ್ಲಿ ಗುಜರಾತ್ ಲಯನ್ಸ್​ ವಿರುದ್ಧ ವಿರಾಟ್ ಕೊಹ್ಲಿ - ಡಿ ಕಾಕ್ ಸೇರಿಕೊಂಡು 229 ರನ್​​ ಜೊತೆಯಾಟವಾಡಿದ್ದರು. ಈಗಲೂ ಈ ದಾಖಲೆ ಈ ಇಬ್ಬರ ಹೆಸರಿನಲ್ಲೇ ಇದೆ. 2015ರಲ್ಲೇ ಎಬಿ ಡಿವಿಲಿಯರ್ಸ್‌- ಕೊಹ್ಲಿ ಮುಂಬೈ ವಿರುದ್ಧ 215 ರನ್​ಗಳ ಜೊತೆಯಾಟ ಆಡಿದ್ದರು. ಮೊನ್ನೆ ರಾಹುಲ್​-ಡಿಕಾಕ್​​ 210 ರನ್​​ಗಳ ಜೊತೆಯಾಟವಾಡಿದ್ರು.

ಆರೆಂಜ್ ಕ್ಯಾಪ್​​​​ಗೆ ಬಟ್ಲರ್​​-ರಾಹುಲ್-ಡಿಕಾಕ್​ ಫೈಟ್​:

ಈ ಸೀಸನ್ ಐಪಿಎಲ್​ನಲ್ಲಿ 500 ಪ್ಲಸ್ ರನ್ ಹೊಡೆದಿರೋದು ಮೂವರು ಮಾತ್ರ. ಹಾಗಾಗಿ ಜೋಸ್ ಬಟ್ಲರ್​ (Jos Buttler), ರಾಹುಲ್ ಹಾಗೂ ಡಿ ಕಾಕ್ ಈ ಸಲ ಆರೆಂಜ್  ಕ್ಯಾಪ್ ಗೆಲ್ಲೋ ರೇಸ್​ನಲ್ಲಿದ್ದಾರೆ. ಈ ಮೂವರು ಇನ್ನೂ 2ರಿಂದ ಮೂರು ಮ್ಯಾಚ್ ಆಡೋ ಸಾಧ್ಯತೆ ಇದೆ. ಹಾಗಾಗಿ ಯಾರು ಬೇಕಾದರೂ ಆರೆಂಜ್ ಕ್ಯಾಪ್ ಗೆಲ್ಲಬಹುದು.
 

Follow Us:
Download App:
  • android
  • ios