* ರಾಜಸ್ಥಾನ ರಾಯಲ್ಸ್ ತಂಡಕ್ಕಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸವಾಲು* ಅಂಕಪಟ್ಟಿಯಲ್ಲಿ ಟಾಪ್‌ 2ನೊಳಗೆ ಸ್ಥಾನ ಪಡೆಯಲು ಸಂಜು ಸ್ಯಾಮ್ಸನ್‌ ಪಡೆ ಕಸರತ್ತು* ಪ್ಲೇ ಆಫ್‌ ಖಚಿತವಾಗಿದ್ದರೂ ರಾಯಲ್ಸ್‌ ಒತ್ತಡದಲ್ಲಿರೋದೇಕೆ?

ಮುಂಬೈ(ಮೇ.20) : ಇದೇ ಭಾನುವಾರ 15ನೇ ಆವೃತ್ತಿಯ ಐಪಿಎಲ್​ (IPL 2022) ಟೂರ್ನಿಯ ಲೀಗ್ ಪಂದ್ಯಗಳಿಗೆ ತೆರೆ ಬೀಳುತ್ತಿದೆ. ಮೂರು ಟೀಂಗಳು ಈಗಾಗಲೇ​ ಪ್ಲೇ ಆಫ್​​​​​ನಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿವೆ. ರಾಜಸ್ಥಾನ ರಾಯಲ್ಸ್ (Rajasthan Royals) ಸಹ ಪ್ಲೇ ಆಫ್ ಎಂಟ್ರಿ ಖಚಿತವಾಗಿದ್ದರೂ ಇನ್ನೊಂದು ಲೀಗ್ ಪಂದ್ಯವನ್ನ ಗೆಲ್ಲಲು ಎದುರು ನೋಡ್ತಿದೆ. ಮುಂಬೈನಲ್ಲಿ ಇಂದು ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗ್ತಿವೆ. ಈಗಾಗಲೇ ಪ್ಲೇ ಆಫ್​ ರೇಸ್​ನಿಂದ ಹೊರಬಿದ್ದಿರುವ ಸಿಎಸ್​ಕೆ ಮತ್ತು ಪ್ಲೇ ಆಫ್​​ಗೆ ಎಂಟ್ರಿ ಪಡೆದಿರೋ ರಾಜಸ್ಥಾನ ರಾಯಲ್ಸ್​​ಗೆ ಮಹತ್ವದ ಪಂದ್ಯ. ಯಾಕೆ ಗೊತ್ತಾ..?

ಹೌದು, ರಾಜಸ್ಥಾನ ರಾಯಲ್ಸ್ ಪ್ಲೇ ಆಫ್​ಗೆ ಎಂಟ್ರಿ ಪಡೆದಿದೆ. ಆದರೂ ಯಾಕೆ ಮಹತ್ವದ ಪಂದ್ಯ ಅಂತಿರಾ. ಅದಕ್ಕೂ ಕಾರಣವಿದೆ. ರಾಜಸ್ಥಾನ ರಾಯಲ್ಸ್‌ 13 ಪಂದ್ಯಗಳಲ್ಲಿ 8 ಗೆದ್ದು ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದೆ. ಇಂದು ಸಿಎಸ್​ಕೆ ವಿರುದ್ಧ ಗೆದ್ದರೆ 18 ಅಂಕಗಳಿಸಲಿದೆ. ಅಷ್ಟೇ ಅಂಕಗಳಿಸಿ 2ನೇ ಸ್ಥಾನದಲ್ಲಿರುವ ಲಖನೌ ಸೂಪರ್‌ ಜೈಂಟ್ಸ್‌ ತಂಡದ ರನ್ ರೇಟ್ ಕಮ್ಮಿ ಇರುವುದರಿಂದ 3ನೇ ಸ್ಥಾನಕ್ಕೆ ಜಾರಲಿದ್ದು, ರಾಜಸ್ಥಾನ ರಾಯಲ್ಸ್ 2ನೇ ಸ್ಥಾನಕ್ಕೇರಲಿದೆ.

ಅಂಕಪಟ್ಟಿಯಲ್ಲಿ ಟಾಪ್​-2ನಲ್ಲಿರುವ ತಂಡಗಳಿಗೆ ಎರಡು ಚಾನ್ಸ್:

ಯೆಸ್, ಇದೇ ಕಾರಣಕ್ಕೆ ರಾಜಸ್ಥಾನ ರಾಯಲ್ಸ್ ಇಂದು ಗೆಲ್ಲೋ ಒತ್ತಡದಲ್ಲಿರೋದು. ಪಾಯಿಂಟ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಫೈನಲ್​ಗೇರಲು ಎರಡು ಮ್ಯಾಚ್ ಸಿಗಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದವರು ನೇರ ಫೈನಲ್​ಗೇರಿದ್ರೆ, ಸೋತ ತಂಡಕ್ಕೆ ಸೆಕೆಂಡ್ ಕ್ವಾಲಿಫೈಯರ್​ನಲ್ಲಿ ಆಡಲು ಅವಕಾಶ ಸಿಗಲಿದೆ. ಅಲ್ಲಿ ಗೆದ್ದರೆ ಫೈನಲ್ ಪ್ರವೇಶಿಸಬಹುದು. ಹಾಗಾಗಿಯೇ ಪಾಯಿಂಟ್ ಟೇಬಲ್​ನಲ್ಲಿ ಟಾಪ್​-2ನಲ್ಲಿ ಸ್ಥಾನ ಪಡೆಯಲು ಎಲ್ಲಾ ತಂಡಗಳು ಫೈಟ್ ನಡೆಸೋದು.

90 ನಿಮಿಷ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದೆ: ಯಶಸ್ಸಿನ ಸೀಕ್ರೇಟ್ ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಆ ತಂಡಕ್ಕೆ ಫೈನಲ್ ಪ್ರವೇಶಿಸಲು ಎರಡು ಮ್ಯಾಚ್ ಸಿಗಲಿದೆ. ಗುಜರಾತ್​ನಂತೆ ಎರಡು ಚಾನ್ಸ್ ಪಡೆಯಲು ಸಿಎಸ್​ಕೆ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆಲ್ಲೋ ಒತ್ತಡದಲ್ಲಿರೋದು. ಇಂದು ರಾಜಸ್ಥಾನ ಗೆದ್ದರೆ ಪಾಯಿಂಟ್ ಟೇಬಲ್​​ನಲ್ಲಿ 2ನೇ ಸ್ಥಾನಕ್ಕೇರಲಿದೆ. ಅದಕ್ಕಾಗಿಯೇ ಇಂದಿನ ಪಂದ್ಯ ರಾಯಲ್ಸ್​​ಗೆ ಮಹತ್ವದ ಪಂದ್ಯ. ಇನ್ನು ಓಪನರ್ ಜೋಸ್ ಬಟ್ಲರ್​ ಆರೆಂಜ್ ಕ್ಯಾಪ್ ಗೆಲ್ಲಬೇಕು ಅಂದ್ರೆ ಉಳಿದ ಪಂದ್ಯದಲ್ಲೂ ಮಿಂಚಬೇಕು.

ಗೆಲ್ಲಬೇಕಾದ ಒತ್ತಡದಲ್ಲಿ ಸಿಎಸ್​​ಕೆಯೂ ಇದೆ:

ಹೌದು, ರಾಜಸ್ಥಾನ ಮಾತ್ರವಲ್ಲ, ಸಿಎಸ್​ಕೆ ಸಹ ಇಂದಿನ ಪಂದ್ಯ ಗೆಲ್ಲೋ ಒತ್ತಡದಲ್ಲಿದೆ. ಪ್ಲೇ ಆಫ್ ರೇಸ್​​ನಿಂದ ಹೊರಬಿದ್ದಿರುವ ಸಿಎಸ್​ಕೆ 13 ಪಂದ್ಯದಿಂದ 8 ಅಂಕ ಗಳಿಸಿದೆ. ಇಂದು ಸಿಎಸ್​ಕೆ ಸೋತು, ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದರೆ ಆಗ ಎರಡು ಟೀಮ್ಸ್ ತಲಾ 8 ಅಂಕಗಳಿಸಲಿವೆ. ಆಗ ರನ್ ರೇಟ್​​​​​​​​​​​​​​​​​​​ ಆಧಾರದ ಮೇಲೆ ಮುಂಬೈ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ್ರೆ, ಚೆನ್ನೈ ಕೊನೆ ಸ್ಥಾನಕ್ಕಿಳಿಯಲಿದೆ. ಕೊನೆ ಸ್ಥಾನಕ್ಕೆ ಜಾರಿ ಅವಮಾನ ಅನುಭವಿಸಬಾರದು ಅನ್ನೋ ಕಾರಣಕ್ಕೆ ಸಿಎಸ್​ಕೆ ಇಂದು ಗೆಲುವಿಗಾಗಿ ಹೋರಾಟ ನಡೆಸಲಿದೆ.