IPL 2022: ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್ನಿಂದ ಇಬ್ಬರು ಔಟ್, ಮತ್ತಿಬ್ಬರಿಂದ ಫೈಟ್..!
* ಟೀಂ ಇಂಡಿಯಾ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದಾರೆ ನಾಲ್ವರು ಕ್ರಿಕೆಟಿಗರು
* ಐಪಿಎಲ್‌ನಲ್ಲಿ ಅದ್ಭುತ ನಾಯಕತ್ವದ ಮೂಲಕ ಮಿಂಚುತ್ತಿದ್ದಾರೆ ಇಬ್ಬರು ನಾಯಕರು
* ಕನ್ನಡದ ಆಟಗಾರನಿಗೆ ಭವಿಷ್ಯದ ಟೀಂ ಇಂಡಿಯಾ ನಾಯಕನಾಗುವ ಅವಕಾಶ
ಮುಂಬೈ(ಮೇ.04): ಇದು IPL ಮತ್ತು ಟೀಂ ಇಂಡಿಯಾ ಸ್ಟೋರಿ. ಸದ್ಯ ರೋಹಿತ್ ಶರ್ಮಾ ಟೀಂ ಇಂಡಿಯಾ ಕ್ಯಾಪ್ಟನ್. ವಯಸ್ಸು ಆಗ್ಲೇ 35. 2023ರ ಅಂತ್ಯದ ವೇಳೆಗೆ ಹಿಟ್ ಮ್ಯಾನ್ ನಾಯಕತ್ವವೂ ಬಹುತೇಕ ಕೊನೆಗೊಳ್ಳಲಿದೆ. ರಾಹುಲ್ ದ್ರಾವಿಡ್ (Rahul Dravid) ಕೋಚ್ ಅವಧಿ ಮುಗಿದ ಬೆನ್ನಲ್ಲೇ ರೋಹಿತ್ ಕ್ಯಾಪ್ಟನ್ಸಿ ಟೈಮೂ ಮುಗಿಯುತ್ತೆ. 2024ಕ್ಕೆ ಟೀಂ ಇಂಡಿಯಾಗೆ (Team India) ಹೊಸ ನಾಯಕ ನೇಮಕವಾಗಬೇಕು. ರೋಹಿತ್ ಶರ್ಮಾ (Rohit Sharma) ನಂತರ ನಾಯಕನಾಗಲೂ ನಾಲ್ವರು ರೇಸ್ನಲ್ಲಿದ್ದರು. ಆದರೆ ಈಗ ಇಬ್ಬರು ರೇಸ್ನಿಂದ ಹೊರಬಿದ್ದಿದ್ದಾರೆ. ಇನ್ನಿಬ್ಬರ ನಡುವೆ ರೇಸ್ ಸ್ಟಾರ್ಟ್ ಆಗಿದೆ. ಇದೆಲ್ಲಾ ನಡೆಯುತ್ತಿರುವುದು IPLನಲ್ಲಿ. ಹೌದು, IPLನಲ್ಲಿ ನಾಯಕರಾಗಿರುವ ನಾಲ್ವರು, ಭವಿಷ್ಯದಲ್ಲಿ ಟೀಂ ಇಂಡಿಯಾ ನಾಯಕರಾಗಲು ಎದುರು ನೋಡ್ತಿದ್ದಾರೆ. ಆದ್ರೆ ಐಪಿಎಲ್‌ನಲ್ಲಿ ಕಳಪೆ ನಾಯಕತ್ವದಿಂದ ಇಬ್ಬರು ಔಟ್ ಆಗಿದ್ದರೆ, ಇನ್ನಿಬ್ಬರ ನಡುವೆ ಫೈಟ್ ಬಿದ್ದಿದೆ.
ಶ್ರೇಯಸ್ ಅಯ್ಯರ್ (Shreyas Iyer) ಮತ್ತು ರಿಷಭ್ ಪಂತ್ (Rishabh Pant), IPLನಲ್ಲಿ ಕಳಪೆ ನಾಯಕತ್ವದಿಂದ ಟೀಕೆಗೆ ಗುರಿಯಾಗಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ 10ರಲ್ಲಿ ಗೆದ್ದಿರೋದು ಕೇವಲ ನಾಲ್ಕನ್ನ ಮಾತ್ರ. ಇನ್ನು ಪಂತ್ ಕ್ಯಾಪ್ಟನ್ಸಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 9ರಲ್ಲಿ ನಾಲ್ಕು ಗೆದ್ದಿದೆ. ಜೊತೆಗೆ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನೋ ಬಾಲ್ ಕಾಂಟ್ರವಿರ್ಸಿ ಪಂತ್ಗೆ ಉರುಳಾಗಲಿದೆ. ಕೋಚ್ ಅನ್ನೇ ಮೈದಾನಕ್ಕೆ ಕಳುಹಿಸಿ, ದೊಡ್ಡ ರದ್ದಾಂತ ಮಾಡಿದ್ದರು ರಿಷಭ್ ಪಂತ್. ಇದು ಪಂತ್ಗೆ ಭಾರಿ ಹಿನ್ನಡೆಯಾಗಿದೆ.
ಹಳೆ ಸ್ನೇಹಿತರ ನಡುವೆ ಹೊಸ ಸವಾಲು:
ಯೆಸ್, ಕನ್ನಡಿಗ KL ರಾಹುಲ್ (KL Rahul) ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಹಳೆಯ ಸ್ನೇಹಿತರೇ. ಹಾಗಂತ ಈಗೇನು ಅವರು ದುಷ್ಮನ್ಗಳು ಇಲ್ಲ. ಕಾಫಿ ವಿತ್ ಕರಣ್ ಕಾರ್ಯಕ್ರಮ ಕಾಂಟ್ರವಿರ್ಸಿ ಆದ್ಮೇಲೆ ಈ ಇಬ್ಬರು ಸ್ನೇಹ ಮೊದಲಿನಂತಿಲ್ಲ. ಆದ್ರೂ ಟೀಮ್ಮೆಂಟ್ ಆದ್ಮೇಲೆ ಅಲ್ಪ ಸ್ವಲ್ಪ ಫ್ರೆಂಡ್ ಶಿಪ್ ಇರಬೇಕಲ್ವಾ..? ಆ ಫ್ರೆಂಡ್ಸ್ ಶಿಪ್ ಮಾತ್ರ ಇದೆ. ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾ ಕ್ಯಾಪ್ಟನ್ ಆಗಲು ಈ ಇಬ್ಬರ ನಡುವೆ ಫೈಟ್ ಬಿದ್ದಿದೆ.
ಪಾಯಿಂಟ್ ಟೇಬಲ್ನಲ್ಲಿ ಟಾಪ್-2ನಲ್ಲಿ ಹೊಸ ತಂಡಗಳು:
ಯೆಸ್, ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಮತ್ತು ರಾಹುಲ್ ಕ್ಯಾಪ್ಟನ್ಸಿಯ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮೊದಲ ಸಲ IPL ಆಡ್ತಿವೆ. ಮೊದಲ ಸೀಸನ್ನಲ್ಲೇ ಎರಡು ಟೀಮ್ಸ್ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಪಾಯಿಂಟ್ ಟೇಬಲ್ನಲ್ಲಿ ಟಾಪ್-2ನಲ್ಲಿವೆ. 10 ಪಂದ್ಯಗಳಲ್ಲೇ ಈ ಎರಡು ಟೀಮ್ಸ್ ಪ್ಲೇ ಆಫ್ ಎಂಟ್ರಿಯನ್ನ ಖಚಿತಪಡಿಸಿಕೊಂಡಿದ್ದು, ಲೀಗ್ನಲ್ಲಿ ಇನ್ನೂ 4 ಪಂದ್ಯಗಳನ್ನಾಡಬೇಕಿದೆ. ಈ ಪರ್ಫಾಮೆನ್ಸ್ನಿಂದಲೇ ಈ ಇಬ್ಬರು ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್ನಲ್ಲಿರೋದು.
IPL 2022: ಇಂದು ಹ್ಯಾಟ್ರಿಕ್ ಸೋಲಿನ ಸರಪಳಿ ಕಳಚುತ್ತಾ ಆರ್‌ಸಿಬಿ..?
ಸದ್ಯ ರಾಹುಲ್ ಟೀಂ ಇಂಡಿಯಾ ವೈಸ್ ಕ್ಯಾಪ್ಟನ್. ಹಾರ್ದಿಕ್ ಪಾಂಡ್ಯಗೆ ಗೇಟ್ ಪಾಸ್ ನೀಡಲಾಗಿದೆ. ಫಿಟ್ನೆಸ್ ಮತ್ತು ಫಾರ್ಮ್ ಎರಡನ್ನೂ ಪ್ರೂವ್ ಮಾಡಿದ್ರೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡ್ತಾರೆ. ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಹಾಫ್ ಸೆಂಚುರಿ ಬಾರಿಸಿದ್ದಾರೆ. ವಿಕೆಟ್ ಸಹ ಪಡೆದಿದ್ದಾರೆ. ಆದ್ರೆ ಟೀಂ ಇಂಡಿಯಾ ಲೀಡ್ ಮಾಡುವಷ್ಟು ಶಕ್ತಿ-ಯುಕ್ತಿ ಎರಡು ಹಾರ್ದಿಕ್ ಬಳಿ ಇಲ್ಲ. ಅಲ್ಲಿಗೆ ರೋಹಿತ್ ಬಳಿಕ ಕನ್ನಡಿಗನೇ ನಾಯಕನಾಗುವ ಎಲ್ಲಾ ಸಾಧ್ಯತೆಗಳಿವೆ.