ಪಂಜಾಬ್ ದಾಳಿಗೆ ತತ್ತರಿಸಿದ ಸನ್‌ರೈರ್ಸ್ ಹೈದರಾಬಾದ್ 157 ರನ್ ಸಿಡಿಸಿದ ಸನ್‌ರೈಸರ್ಸ್ ಹೈದರಾಬಾದ್  ಐಪಿಎಲ್ 2022 ಲೀಗ್ ಹಂತದ ಅಂತಿಮ ಪಂದ್ಯ

ಮುಂಬೈ(ಮೇ.22): ಅಭಿಶೇಕ್ ಶರ್ಮಾ ದಿಟ್ಟ ಹೋರಾಟ ನೀಡಿದರೂ ಇತರ ಬ್ಯಾಟ್ಸ್‌ಮನ್‌ಗಳ ವೈಫಲ್ಯಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಅಬ್ಬರಿಸಲು ವಿಫಲವಾಗಿದೆ. ಪರಿಣಾಮ ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ನಷ್ಟಕ್ಕೆ ರನ್ ಸಿಡಿಸಿದೆ.

ಪ್ರಿಯಂ ಗರ್ಗ್ ಕೇವಲ 4 ರನ್ ಸಿಡಿಸಿ ಔಟಾದರು. ಇತ್ತ ಅಭಿಶೇಕ್ ಶರ್ಮಾ ಹೋರಾಟ ಮುಂದುವರಿಸಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ರಾಹುಲ್ ತ್ರಿಪಾಠಿ 20 ರನ್ ಸಿಡಿಸಿ ಔಟಾದರು. ಆ್ಯಡಿನ್ ಮರ್ಕ್ರಮ್ 21 ರನ್ ಸಿಡಿಸಿ ಔಟಾದರು.

ನಿಕೋಲಸ್ ಪೂರನ್ ಕೇವಲ 5 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ವಾಶಿಂಗ್ಟನ್ ಸುಂದರ್, ರೊಮಾರಿಯೋ ಶೆಪರ್ಡ್ ಅಬ್ಬರಿಸಿದರು. ಪರಿಣಾಮ ಸನ್‌ರೈಸರ್ಸ್ ಹೈದರಾಬಾದ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ವಾಶಿಂಗ್ಟನ್ ಸುಂದರ್ 25 ರನ್ ಸಿಡಿಸಿ ಔಟಾದರು . ಶೆಫರ್ಡ್ ಅಜೇಯ 26 ರನ್ ಸಿಡಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿತು.

ಪಂಜಾಬ್ ಪರ ಹರ್ಪ್ರೀತ್ ಬ್ರಾರ್ 3 ವಿಕೆಟ್ ಕಬಳಿಸಿ ಮಿಂಚಿದರು. ನತನ್ ಎಲ್ಲಿಸ್ 2 ವಿಕೆಟ್ ಕಬಳಿಸಿದರೆ, ಕಾಗಿಸೋ ರಬಾಡ 1 ವಿಕೆಟ್ ಕಬಳಿಸಿದರು. 

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಐಪಿಎಲ್ 2022 ಲೀಗ್ ಟೂರ್ನಿಯ 70ನೇ ಹಾಗೂ ಕೊನೆಯ ಲೀಗ್ ಪಂದ್ಯ. ಈ ಪಂದ್ಯದ ಫಲಿತಾಂಶ ಯಾವ ತಂಡದ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ. ಕಾರಣ ಈ ಪಂದ್ಯ ಆಟಕ್ಕುಂಟು ಲೆಕ್ಕಕ್ಲಿಲ್ಲ. ಹೈದರಾಬಾದ್ ಹಾಗೂ ಪಂಜಾಬ್ ಎರಡೂ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಪ್ಲೇ ಆಫ್ ಸುತ್ತಿಗ ಈಗಾಗಲೇ ನಾಲ್ಕು ತಂಡಗಳು ಪ್ರವೇಶ ಪಡೆದುಕೊಂಡಿದೆ.

ಗುಜರಾತ್ ಟೈಟಾನ್ಸ್, ರಾಜಸ್ಥಾನ ರಾಯಲ್ಸ್, ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶ ಪಡೆದುಕೊಂಡಿದೆ. ಈ ಬಾರಿಯ ಪ್ಲೇ ಆಫ್ ಪ್ರವೇಶ ಪಡೆದ ಯಾವ ತಂಡ ಪ್ರಶಸ್ತಿ ಗೆದ್ದರೂ ದಾಖಲೆ. ಕಾರಣ ಹೊಸ ತಂಡವೊಂದು ಟೂರ್ನಿ ಮುಡಿಗೇರಿಸಿಕೊಳ್ಳಲಿದೆ. ಇಷ್ಟೇ ಅಲ್ಲ ಇರಲ್ಲಿ ಗುಜರಾತ್ ಹಾಗೂ ಲಖನೌ ತಂಡ ಪ್ರಶಸ್ತಿ ಗೆದ್ದರೆ ಐಪಿಎಲ್ ಪ್ರವೇಶಿಸಿದ ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದ ಸಾಧನೆ ಮಾಡಲಿದೆ.