ಐಪಿಎಲ್ ಟೂರ್ನಿಯ 4ನೇ ಲೀಗ್ ಪಂದ್ಯ ಇದೇ ಮೊದಲ ಬಾರಿಗೆ ಲಖನೌ ಗುಜರಾತ್ ತಂಡ ಕಣಕ್ಕೆ ಕೆಎಲ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಮುಖಾಮುಖಿ
ಮುಂಬೈ(ಮಾ.28): ಐಪಿಎಲ್ 15ನೇ ಆವೃತ್ತಿಯಲ್ಲಿ ಹೊಸದಾಗಿ ಸೇರಿಕೊಂಡ ಲಖನೌ ಸೂಪರ್‌ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದೆ. ಐಪಿಎಲ್ 2022 ಟೂರ್ನಿಯ 4ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಕಳೆದ ಬಾರಿ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ಹರಾಜಿಗೂ ಮುನ್ನವೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಗುಡ್ ಬೈ ಹೇಳಿ ಗುಜರಾತ್ ಲಖನೌ ತಂಡ ಸೇರಿಕೊಂಡಿದ್ದರು. ಇತ್ತ ಹಾರ್ಧಿಕ್ ಪಾಂಡ್ಯ ಕಳೆದ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಜೊತೆ ಸುದೀರ್ಘ ಕಾಲ ಒಪ್ಪಂದ ಹೊಂದಿದ್ದ ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ಬೇರೊಂದು ತಂಡದಲ್ಲಿ ಆಡುತ್ತಿದ್ದಾರೆ. ಈ ಬಾರಿ ನಾಯಕನಾಗಿ ಬಡ್ತಿ ಪಡೆದಿದ್ದಾರೆ.
ಲಖನೌ ಸೂಪರ್ ಜೈಂಟ್ಸ್:
ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿಕಾಕ್, ಇವಿನ್ ಲಿವಿಸ್, ಮನೀಶ್ ಪಾಂಡೆ, ದೀಪಕ್ ಹೂಡ, ಕ್ರುನಾಲ್ ಪಾಂಡ್ಯ, ಮೊಹ್ಸಿನ್ ಖಾನ್, ಆಯೂಷ್ ಬದೋನಿ, ದುಷ್ಮಂತ ಚಮೀರಾ, ರವಿ ಬಿಶ್ನೋಯಿ, ಅವೇಶ್ ಖಾನ್
ಗುಜರಾತ್ ಟೈಟಾನ್ಸ್:
ಶುಬಮನ್ ಗಿಲ್, ಮಾಥ್ಯೂ ವೇಡ್, ವಿಜಯ್ ಶಂಕರ್, ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ಟಿವಾಟಿಯಾ, ರಶೀದ್ ಖಾನ್, ಲ್ಯೂಕ್ ಫರ್ಗ್ಯೂಸನ್, ವರುಣ್ ಆ್ಯರೋನ್, ಮೊಹಮ್ಮದ್ ಶಮಿ
ಗುಜರಾತ್ ಟೈಟಾನ್ಸ್
ಪ್ರಾಬಲ್ಯ
ಶಮಿ, ಲಾಕಿರಂತಹ ಅನುಭವಿಗಳ ಬಲ
ಗಿಲ್ ತಂಡದ ಬ್ಯಾಟಿಂಗ್ ಬೆನ್ನೆಲುಬು
ರಶೀದ್ ಖಾನ್ ಬೌಲಿಂಗ್ ಟ್ರಂಪ್‌ಕಾರ್ಡ್
ದೌರ್ಬಲ್ಯ
ನಾಯಕನಾಗಿ ಹಾರ್ದಿಕ್‌ಗೆ ಅನುಭವವಿಲ್ಲ
ಮಧ್ಯಮ ಕ್ರಮಾಂಕ ಕುಸಿಯುವ ಭೀತಿ
ಶಮಿಗೆ ಬೆಂಬಲ ನೀಡುವ ವೇಗಿ ಕೊರತೆ
ಪ್ರಮುಖ ಆಟಗಾರರು: ಶುಭ್‌ಮನ್ ಗಿಲ್, ಹಾರ್ದಿಕ್, ರಶೀದ್, ಶಮಿ.
ಲಖನೌ ಸೂಪರ್ ಜೈಂಟ್ಸ್
ಪ್ರಾಬಲ್ಯ
ರಾಹುಲ್, ಡಿ ಕಾಕ್, ಪಾಂಡೆ ಬ್ಯಾಟಿಂಗ್ ಬಲ
ಸ್ಟೋಯ್ನಿಸ್ ಆಲ್ರೌಂಡ್ ಆಟದ ನೆರವು
ಹೋಲ್ಡರ್, ಆವೇಶ್‌ರಂತಹ ಟಿ20 ತಜ್ಞ ವೇಗಿಗಳು
ದೌರ್ಬಲ್ಯ
ದುರ್ಬಲ ಕೆಳ ಮಧ್ಯಮ ಕ್ರಮಾಂಕ
ಲೆಗ್ ಸ್ಪಿನ್ನರ್ ಬಿಷ್ಣೋಯ್ ಮೇಲೆ ಒತ್ತಡ
ಕಾಡಲಿದೆ ಮಾರ್ಕ್ ವುಡ್ ಅನುಪಸ್ಥಿತಿ
ಪ್ರಮುಖ ಆಟಗಾರರು: ರಾಹುಲ್, ಸ್ಟೋಯ್ನಿಸ್, ಪಾಂಡೆ, ಡಿ ಕಾಕ್
ಗುಜರಾತ್ ತಂಡಕ್ಕೆ ಗುರ್ಬಾಜ್ ಸೇರ್ಪಡೆ
2022ರ ಐಪಿಎಲ್ ಆವೃತ್ತಿಗೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಅಷ್ಘಾನಿಸ್ತಾನದ 20 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಸೇರ್ಪಡೆಯಾಗಿದ್ದಾರೆ. ಜೇಸನ್ ರಾಯ್ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದರಿಂದ ಅವರ ಜಾಗಕ್ಕೆ ಗುರ್ಬಾಜ್‌ರನ್ನು ಮೂಲಬೆಲೆ (50 ಲಕ್ಷ ರು.) ನೀಡಿ ಖರೀದಿಸಲಾಗಿದೆ. ಗುಜರಾತ್ ತಂಡ ಸೇರಿದ 3ನೇ ಆಫ್ಘನ್ ಆಟಗಾರ ಎನಿಸಿದ್ದಾರೆ. ಹರಾಜಿಗೂ ಮುನ್ನ ರಶೀದ್ ಖಾನ್‌ರನ್ನು ಆಯ್ಕೆ ಮಾಡಿಕೊಂಡಿದ್ದ ತಂಡ, ಹರಾಜಿನಲ್ಲಿ ನೂರ್ ಅಹ್ಮದ್‌ರನ್ನು ಖರೀದಿಸಿತ್ತು. ಗುರ್ಬಾಜ್, ಆಫ್ಘನ್ ಪರ 20 ಟಿ20 ಪಂದ್ಯಗಳನ್ನಾಡಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡವನ್ನು ಸಿವಿಸಿ ಕ್ಯಾಪಿಟಲ್ಸ್ 5625 ಕೋಟಿ ರು. ನೀಡಿ ಖರೀದಿಸಿದ್ದು, ತಾರಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಲಿದ್ದಾರೆ.ಇನ್ನು ಉದ್ಯಮಿ ಸಂಜೀವ್ ಗೋಯೆಂಕಾ ಆರ್‌ಪಿಎಸ್‌ಜಿ ಸಮೂಹವು ಲಖನೌ ತಂಡವನ್ನು 7090 ಕೋಟಿ ರು. ನೀಡಿ ಖರೀದಿಸಿತ್ತು. ತಂಡಕ್ಕೆ ಕೆ.ಎಲ್.ರಾಹುಲ್ ನಾಯಕರಾಗಿದ್ದಾರೆ.
