IPL 2022 ಸಾಧಾರಣ ಮೊತ್ತ ಪೇರಿಸಿದ ಗುಜರಾತ್ ಟೈಟಾನ್ಸ್

ಸಾಯಿ ಸುದರ್ಶನ್ ಬಾರಿಸಿದ ಆಕರ್ಷಕ ಅರ್ಧಶತಕದ ಹೊರತಾಗಿಯೂ, ಗುಜರಾತ್ ಟೈಟಾನ್ಸ್ ತಂಡದ ದೊಡ್ಡ ಮೊತ್ತದ ಜೊತೆಯಾಟಕ್ಕೆ ಪಂಜಾಬ್ ಕಿಂಗ್ಸ್ ಬ್ರೇಕ್ ಹಾಕಿತು. ಪ್ರಮುಖವಾಗಿ ಕಗೀಸೋ ರಬಾಡ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್, ಸಾಧಾರಣ ಮೊತ್ತದ ಗುರಿ ಪಡೆದುಕೊಂಡಿದೆ.
 

IPL 2022 GT vs PBKS Kagiso Rabada Bowling Helps Punjab Kings to control Gujarat Titans Batting san

ಮುಂಬೈ (ಮೇ.3): ಮಾರಕ ವೇಗಿ ಕಗೀಸೋ ರಬಾಡ (33ಕ್ಕೆ 4) ದಾಳಿಗೆ ಗುಜರಾತ್ ಟೈಟಾನ್ಸ್  (Gujarat Titans) ತಂಡದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡಿದರು. ಸಾಯಿ ಸುದರ್ಶನ್ (64*ರನ್, 50 ಎಸೆತ, 5 ಬೌಂಡರಿ, 1 ಸಿಕ್ಸರ್‌) ಬಾರಿಸಿದ ತಾಳ್ಮೆಯ ಅರ್ಧಶತಕದ ಹೊರತಾಗಿಯೂ ಗುಜರಾತ್ ಟೈಟಾನ್ಸ್ ತಂಡ ಸಾಧಾರಣ ಮೊತ್ತ ದಾಖಲಿಸಿದೆ.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ (Hardik Pandya) ಅಚ್ಚರಿ ಎನ್ನುವಂತೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ರಬಾಡ ಮಾರಕ ದಾಳಿಯ ನಡುವೆಯೂ ಸಾಯಿ ಸುದರ್ಶನ್ ಬಾರಿಸಿದ ಎಚ್ಚರಿಕೆಯ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 8 ವಿಕೆಟ್ 143 ರನ್ ಪೇರಿಸಿದೆ.

ಬ್ಯಾಟಿಂಗ್ ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಒಂದು ರನ್ಔಟ್ ಹಾಗೂ ರಬಾಡ (Kagiso Rabada) ಅವರ ಕೆಲ ಅದ್ಭುತ ಎಸೆತಗಳು ತಂಡವನ್ನು ಕಂಗೆಡಿಸಿದವು. ಶುಬ್ ಮಾನ್ ಗಿಲ್ 6 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 9 ರನ್ ಬಾರಿಸಿ ರಿಷಿ ಧವನ್ ಮಾಡಿ ರನ್ ಔಟ್ ಗೆ ಹೊರನಡೆದರೆ, 17 ಎಸೆತಗಳಲ್ಲಿ ಆಕರ್ಷಕ ಮೂರು ಬೌಂಡರಿ ಹಾಗೂ 1 ಸಿಕ್ಸರ್ ನೊಂದಿಗೆ 21 ರನ್ ಬಾರಿಸಿದ್ದ ವೃದ್ಧಿಮಾನ್ ಸಾಹ ರಬಾಡ ಎಸೆದ ನಾಲ್ಕನೇ ಓವರ್ ನಲ್ಲಿ ಬಲಿಯಾದರು.

34 ರನ್ ಗೆ 2 ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಗುಜರಾತ್ ಈ ಮೊತ್ತಕ್ಕೆ 10 ರನ್ ಸೇರಿಸುವ ವೇಳೆಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಂಡಿತು. 7 ಎಸೆತಗಳನ್ನು ಎದುರಿಸಿದ ಪಾಂಡ್ಯ ಕೇವಲ 1 ರನ್ ಬಾರಿಸಿ ರಿಷಿ ಧವನ್ ಗೆ ಬಲಿಯಾದರು. 44 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ಸಾಯಿ ಸುದರ್ಶನ್ ಹಾಗೂ ಡೇವಿಡ್ ಮಿಲ್ಲರ್ 23 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 65ರ ಗಡಿ ದಾಟಿಸಿದ್ದರು. ಇನ್ನೇನು ಗುಜರಾತ್ ತಂಡ ಚೇತರಿಕೆ ಕಾಣುತ್ತದೆ ಎನ್ನುವ ಹಂತದಲ್ಲಿ ದಾಳಿಗಿಳಿದ ಲಿಯಾಮ್ ಲಿವಿಂಗ್ ಸ್ಟೋನ್, ಡೇವಿಡ್ ಮಿಲ್ಲರ್ ಅವರ ವಿಕೆಟ್ ಉರುಳಿಸಿದರು.

IPL 2022: ಈತನಿಗೆ ಕುಟುಂಬಕ್ಕಿಂತ ಕ್ರಿಕೆಟ್​​ ಆಟವೇ ದೊಡ್ಡದಾಯ್ತು..!

ಒಂದೆಡೆ ಸಾಯಿ ಸುದರ್ಶನ್ ನಿಧಾನಗತಿಯ ಆಟವಾಡಿ ತಂಡವನ್ನು ಆಧರಿಸಿದ್ದರೆ, ಇನ್ನೊಂಡೆ ಗುಜರಾತ್ ತಂಡದ ಒಂದೊಂದೇ ವಿಕೆಟ್ ಗಳು ಪತನವಾಗುತ್ತಿದ್ದವು. 5ನೇ ವಿಕೆಟ್ ಗೆ ರಾಹುಲ್ ಟೇವಾಟಿಯಾ ಹಾಗೂ ಸಾಯಿ ಸುದರ್ಶನ್ 45 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 110ರ ಗಡಿ ದಾಟಿಸಿದರು. ಸೂಪರ್ ಸ್ಟಾರ್ ವೇಗಿ ಕಗೀಸೋ ರಬಾಡ ಸತತ ಎರಡು ಎಸೆತಗಳಲ್ಲಿ ಟೇವಾಟಿಯಾ ಹಾಗೂ ರಶೀದ್ ಖಾನ್ ಅವರ ವಿಕೆಟ್ ಉರುಳಿಸಿ ಗುಜರಾತ್ ತಂಡದ ದೊಡ್ಡ ಮೊತ್ತದ ಆಸೆಗೆ ಬ್ರೇಕ್ ಹಾಕಿದರು.

ತನಗಿಂತ 28 ವರ್ಷ ಚಿಕ್ಕವಳನ್ನು ಮದುವೆಯಾದ ಅರುಣ್ ಲಾಲ್, ಮದುವೆ ಚಿತ್ರಗಳು ವೈರಲ್!

ಐಪಿಎಲ್ ನಲ್ಲಿ 6ನೇ ಬಾರಿಗೆ ರಬಾಡಗೆ 4 ವಿಕೆಟ್! :
ಐಪಿಎಲ್ ಇತಿಹಾಸದಲ್ಲಿ ಗರಿಷ್ಠ 4 ಹಾಗೂ ಅದಕ್ಕಿಂತ ಹೆಚ್ಚಿನ ವಿಕೆಟ್ ಉರುಳಿಸಿದ ಬೌಲರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಕೆಕೆಆರ್ ತಂಡದ ಸುನೀಲ್ ನಾರಾಯಣ್ 144 ಪಂದ್ಯಗಳಲ್ಲಿ 8 ಬಾರಿ 4 ಹಾಗೂ ಅದಕ್ಕಿಂತ ಹೆಚ್ಚಿನ ವಿಕೆಟ್ ಸಾಧನೆ ಮಾಡಿ ಅಗ್ರಸ್ಥಾನದಲ್ಲಿದ್ದರೆ, ಲಸಿತ್ ಮಾಲಿಂಗ್ 122 ಪಂದ್ಯಗಳಲ್ಲಿ 7 ಬಾರಿ ಈ ಸಾಧನೆ ಮಾಡಿದ್ದಾರೆ, ರಬಾಡ 59 ಪಂದ್ಯಗಳಲ್ಲಿ 6 ಬಾರಿ ಈ ಸಾಧನೆ ಮಾಡಿದ್ದಾರೆ. ಅಮಿತ್ ಮಿಶ್ರಾ 154 ಪಂದ್ಯಗಳಲ್ಲಿ 5 ಬಾರಿ 4 ಹಾಗೂ ಅದಕ್ಕಿಂತ ಹೆಚ್ಚಿನ ವಿಕೆಟ್ ಉರುಳಿಸಿದ್ದಾರೆ.

Latest Videos
Follow Us:
Download App:
  • android
  • ios