* ಕಾಪ್ಟರ್ 7 ಹೆಸರಿನ ಬಿಯರ್‌ ಮಾರುಕಟ್ಟೆಗೆ ಲಗ್ಗೆ* ಅಕಾರ್ಡ್‌ ಸಂಸ್ಥೆ ಜೊತೆ ಕೈಜೋಡಿಸಿರುವ ಧೋನಿ* ಕಾಪ್ಟರ್‌ 7 ಬ್ರ್ಯಾಂಡ್‌ ಬಿಯರ್‌ಗಳು ಈಗಾಗಲೇ ಬೆಂಗಳೂರು, ಮುಂಬೈ, ಗೋವಾ, ಪಂಜಾಬ್‌, ಜಾರ್ಖಂಡ್‌ನಲ್ಲಿ ಲಭ್ಯ

ಚೆನ್ನೈ(ಏ.12): ಟೀಂ ಇಂಡಿಯಾ (Team India) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ (Former Chennai Super Kings Captain MS Dhoni) ಮಾಜಿ ನಾಯಕ ಎಂ.ಎಸ್‌.ಧೋನಿ ‘ಕಾಪ್ಟರ್‌ 7’ (Copter7) ಹೆಸರಿನ ಬಿಯರ್‌ ಮಾರುಕಟ್ಟೆಗೆ ತಂದಿದ್ದಾರೆ. ಅಕಾರ್ಡ್‌ ಸಂಸ್ಥೆ ಜೊತೆ ಕೈಜೋಡಿಸಿರುವ ಧೋನಿ, ಬಿಯರ್‌ ವ್ಯಾಪಾರದಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಕಾಪ್ಟರ್‌ 7 ಬ್ರ್ಯಾಂಡ್‌ ಬಿಯರ್‌ಗಳು ಈಗಾಗಲೇ ಬೆಂಗಳೂರು, ಮುಂಬೈ, ಗೋವಾ, ಪಂಜಾಬ್‌, ಜಾರ್ಖಂಡ್‌ನಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಚೆನ್ನೈನಲ್ಲಿ ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ.

ಜಯ್‌ ಶಾಗೆ ಸದ್ಯಕ್ಕಿಲ್ಲ ಐಸಿಸಿ ಅಧ್ಯಕ್ಷ ಪಟ್ಟ

ನವದೆಹಲಿ: ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ (Jay Shah), ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಅಧ್ಯಕ್ಷರಾಗಲು ಇನ್ನಷ್ಟು ಸಮಯ ಕಾಯಬೇಕಿದೆ. ಭಾನುವಾರ ನಡೆದ ಸಭೆಯಲ್ಲಿ ಹಾಲಿ ಮುಖ್ಯಸ್ಥ ಗ್ರೆಗರ್‌ ಬಾಕ್ರ್ಲೆ ಅವರನ್ನೇ ಈ ವರ್ಷ ಅಕ್ಟೋಬರ್‌ ಕೊನೆವರೆಗೂ ಹುದ್ದೆಯಲ್ಲಿರುವಂತೆ ಮನವೊಲಿಸಲಾಗಿದೆ. ಈ ಮೊದಲು ಜಯ್‌ ಶಾ ಅಥವಾ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly), ಐಸಿಸಿ ಅಧ್ಯಕ್ಷ ಹುದ್ದೆಗೇರಬಹುದು. ಇಬ್ಬರೂ ಆ ಹುದ್ದೆಗೆ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಮೂಲಗಳ ಪ್ರಕಾರ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಹೆಸರು ಸಹ ಮುಂದಿನ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದೆ ಎನ್ನಲಾಗಿದೆ.

ಕೋಹಿನೂರ್ ಯಾವಾಗ ಹಿಂತಿರುಗಿಸ್ತೀರಿ? ಲೈವ್‌ನಲ್ಲೇ ಗವಾಸ್ಕರ್ ಪ್ರಶ್ನೆ, ಬ್ರಿಟಿಷ್ ಕಮೆಂಟೆಟರ್ ಕಕ್ಕಾಬಿಕ್ಕಿ!

2ನೇ ಟೆಸ್ಟ್‌: ದಕ್ಷಿಣ ಆಫ್ರಿಕಾಕ್ಕೆ 332 ರನ್‌ಗಳ ಗೆಲುವು

ಪೋರ್ಚ್‌ ಎಲೆಜಿಬೆತ್‌: 2ನೇ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ 332 ರನ್‌ಗಳ ಭರ್ಜರಿ ಜಯ ಗಳಿಸಿದ್ದು, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಗೆಲುವಿಗೆ 413 ರನ್‌ ಗುರಿ ಪಡೆದಿದ್ದ ಬಾಂಗ್ಲಾ 23.3 ಓವರ್‌ಗಳಲ್ಲಿ ಕೇವಲ 80 ರನ್‌ಗೆ ಆಲೌಟಾಯಿತು. 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 27 ರನ್‌ ಗಳಿಸಿದ್ದ ತಂಡ ಭಾನುವಾರ ಅದಕ್ಕೆ 57 ರನ್‌ ಸೇರಿಸಲಷ್ಟೇ ಶಕ್ತವಾಯಿತು. ಲಿಟನ್‌ ದಾಸ್‌ 27, ಮೆಹದಿ ಹಸನ್‌ 20 ರನ್‌ ಗಳಿಸಿದರು. ಮೊದಲ ಪಂದ್ಯದಂತೆಯೇ ಕೇಶವ್‌ ಮಹಾರಾಜ್‌ 7, ಸೈಮನ್‌ ಹಾರ್ಮೆರ್‌ 3 ವಿಕೆಟ್‌ ಕಬಳಿಸಿದರು. ಇದಕ್ಕೂ ಮೊದಲು ಮೊದಲ ಇನ್ನಿಂಗ್ಸಲ್ಲಿ ದ.ಆಫ್ರಿಕಾದ 453 ರನ್‌ಗೆ ಉತ್ತರವಾಗಿ ಬಾಂಗ್ಲಾ 217 ರನ್‌ಗೆ ಆಲೌಟಾದರೆ, ದ.ಆಫ್ರಿಕಾ 2ನೇ ಇನ್ನಿಂಗ್ಸಲ್ಲಿ 6 ವಿಕೆಟ್‌ಗೆ 176 ರನ್‌ ಗಳಿಸಿ ಇನ್ನಿಂಗ್‌್ಸ ಡಿಕ್ಲೇರ್‌ ಮಾಡಿತ್ತು.

ಕೋವಿಡ್‌: ಬದಲಿ ಆಟಗಾರರು ಕಣಕ್ಕೆ, ಅಂತಾರಾಷ್ಟ್ರೀಯ ಕ್ರಿಕೆಟಲ್ಲಿ ಮೊದಲು

ಪೋರ್ಚ್‌ ಎಲೆಜಿಬೆತ್‌: ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ನ 4ನೇ ದಿನದಾಟಕ್ಕೂ ಮುನ್ನ ದ.ಆಫ್ರಿಕಾದ ಸರೆಲ್‌ ಎವೀರ್‍ ಹಾಗೂ ವಿಯಾನ್‌ ಮುಲ್ಡರ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತು. ಈ ಕಾರಣ ಅವರ ಬದಲು ಆಡುವ ಹನ್ನೊಂದರಲ್ಲಿ ಖಾಯಾ ಜೊಂಡೊ ಹಾಗೂ ಗ್ಲೆನ್ಟನ್‌ ಸ್ಟುಟ್ರ್ಮನ್‌ಗೆ ಸ್ಥಾನ ನೀಡಲಾಯಿತು. ಕೋವಿಡ್‌ ಕಾರಣದಿಂದಾಗಿ ಆಡುವ ಹನ್ನೊಂದರಲ್ಲಿ ಆಟಗಾರರನ್ನು ಬದಲಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೇ ಮೊದಲು. ನ್ಯೂಜಿಲೆಂಡ್‌ನ ಪ್ಲಂಕೆಟ್‌ ಶೀಲ್ಡ್‌ ಹಾಗೂ ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಕೋವಿಡ್‌ ಬದಲಿ ಆಟಗಾರರು ಆಡಿದ್ದರು.