* ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ* ಆರ್‌ಸಿಬಿ ಫ್ಯಾನ್ಸ್ ಕಾಲೆಳೆಯುವ ಮುನ್ನ ಎಚ್ಚರ* ಟೂರ್ನಿಯ ಎರಡನೇ ಗೆಲುವನ್ನು ಹಬ್ಬದಂತೆ ಆಚರಿಸಿದ ಆರ್‌ಸಿಬಿ ಫ್ಯಾನ್ಸ್
ಬೆಂಗಳೂರು(ಏ.07): ಆರ್‌ಸಿಬಿ (RCB) ಗೆಲ್ತು ಅಂದ್ರೆ ಅವತ್ತು ಹೇಟರ್ಸ್ ಕಥೆ ಮುಗಿತು ಅಂತಾನೇ ಅರ್ಥ. ಯಾಕಾದ್ರು ಆರ್‌ಸಿಬಿ ಹುಡುಗನ್ನ ಕೆಣಕಿದ್ವಿ ಅಂತ ಪಶ್ಚಾತ್ತಾಪ ಪಡಬೇಕು. ಆ ಪರಿ ಉರಿಸಿ ಬಿಡ್ತಾರೆ ಕೆಂಪಂಗಿ ಪಡೆಯ ಸಪೋಟರ್ಸ್. ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವಿನ ಬಳಿಕ ಆಗಿದ್ದು ಅದೇ. ಆರ್‌ಸಿಬಿ ಡೈ ಹಾರ್ಡ್ ಫ್ಯಾನ್ಸ್ ಟೂರ್ನಿಯಲ್ಲಿ ಎರಡನೇ ವಿಕ್ಟರಿ ದಾಖಲಿಸ್ತಿದ್ದಂತೆ ಹಬ್ಬದಂತೆ ಆಚರಿಸಿದ್ದಾರೆ. ಸೋಲಿನೊಂದಿಗೆ ಜರ್ನಿ ಆರಂಭಿಸಿದ್ದ ಆರ್‌ಸಿಬಿ 15ನೇ ಐಪಿಎಲ್ನಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಕಂಡಿದೆ.
ಎರಡು ಗೆಲುವು ಕೆಂಪಂಗಿ ಸೈನ್ಯದ ಹುರುಪು ಹೆಚ್ಚಿಸಿದೆ. ಆಟಗಾರರಿಂದ ಹಿಡಿದು, ಅಭಿಮಾನಿ ದೇವರುಗಳು ಸಂಭ್ರಮದಲ್ಲಿ ತೇಲಾಡ್ತಿದ್ದಾರೆ. ಚೊಚ್ಚಲ ಕಪ್ ಗೆಲ್ಲುವ ಮಹಾ ಕನಸು ಮತ್ತೆ ಚಿಗುರೊಡೆದಿದೆ. ಅದ್ರಲ್ಲೂ ಬಲಿಷ್ಠ ರಾಜಸ್ಥಾನ ರಾಯಲ್ಸ್ ಮಣಿಸಿದ ಮೇಲಂತೂ ಅಭಿಮಾನಿಗಳನ್ನ ಹಿಡಿಯೋರೆ ಇಲ್ಲದಂತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿಯದ್ದೇ ಹವಾ. ಯಾರ ಮೊಬೈಲ್ ಸ್ಟೇಟಸ್ನಲ್ಲಿ ನೋಡಿದ್ರೂ ಆರ್ಸಿಬಿದ್ದೇ ಗುಣಗಾನ. ಆರ್‌ಸಿಬಿ ಬಗ್ಗೆನೇ ಜೈಕಾರ. ಅಷ್ಟರ ಮಟ್ಟಿಗೆ ಕನ್ನಡಿಗರು ಕೆಂಪಂಗಿ ಸೈನ್ಯದ ಗೆಲುವನ್ನ ಎಂಜಾಯ್ ಮಾಡ್ತಿದ್ದಾರೆ. ಜೊತೆಗೆ ಹೇಟರ್ಸ್ಗಳಿಗೂ ಸರಿಯಾಗೇ ಗುನ್ನಾ ಕೊಟ್ಟಿದ್ದಾರೆ.
ವಿಡಿಯೋ ಎಡಿಟ್ ಮಾಡಿ ವಿರೋಧಿ ಬಾಯಿ ಮುಚ್ಚಿಸಿದ ಫ್ಯಾನ್ಸ್:
ರಾಜಸ್ಥಾನ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸ್ತಿದ್ದಂತೆ ಆರ್‌ಸಿಬಿ ಫ್ಯಾನ್ಸ್ ಹಿಡಿಯೋರೆ ಇಲ್ಲದಂತಾಗಿತ್ತು. ವಾಟ್ಸಪ್ ಸ್ಟೇಟಸ್ನಲ್ಲಿ ಆರ್‌ಸಿಬಿ ವಿಡಿಯೋಗಳನ್ನ ಹಾಕಿ ವಿರೋಧಿ ಉರಿಯುವಂತೆ ಮಾಡಿದ್ರು. ವಿಕ್ರಾಂತ್ ರೋಣದ ಟೀಸರ್ ಎಲ್ಲೆಡೆ ಗಮನ ಸೆಳೆದಿದೆ. ಇದೇ ಟೀಸರ್ನ ಡೈಲಾಗ್ ಬಳಸಿರೋ ಅಭಿಮಾನಿಗಳು ಇದಕ್ಕೆ ಪ್ಲೇಯರ್ಸ್ ಪೋಟೋಸ್ ಹಾಕಿ ಎಡಿಟ್ ಮಾಡಿದ್ದಾರೆ. ಇದು ನೋಡೋಗರಿಗೆ ಸಖತ್ ಕಿಕ್ ಕೊಡ್ತಿದೆ. ಇನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗಷ್ಟೇ ತವರಿನಲ್ಲಿ ವೀರಾಗಾಸೆ ನೃತ್ಯಕ್ಕೆ ಸ್ಟೆಪ್ಸ್ ಹಾಕಿದ್ರು. ಸಾಕಷ್ಟು ವೈರಲ್ ಕೂಡ ಆಗಿತ್ತು. ಈ ಡ್ಯಾನ್ಸ್ಗೆ ಆರ್‌ಸಿಬಿ ಆಂಥಮ್ ಸಾಂಗ್ ಹಾಕಿ ಫ್ಯಾನ್ಸ್ ಕೈಚಳಕ ತೋರಿದ್ದಾರೆ.
ಡ್ರೆಸ್ಸಿಂಗ್ ರೂಮ್ನಲ್ಲಿ ಮುಗಿಲು ಮುಟ್ಟಿದ ಪ್ಲೇಯರ್ಸ್ ಸಂಭ್ರಮ:
ಇನ್ನು ಬರೀ ಫ್ಯಾನ್ಸ್ ಮಾತ್ರ ಆಟಗಾರರು ಸಂಭ್ರಮ ಕೂಡ ಮುಗಿಲು ಮುಟ್ಟಿತ್ತು. ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್ಗೆ ತೆರಳಿದ ಪ್ಲೇಯರ್ಸ್ ವಿನ್ನಿಂಗ್ ಡೆಬ್ಯು ಸಾಂಗ್ಗೆ ಧ್ವನಿ ಗೂಡಿಸಿ ಸಂಭ್ರಮಿಸಿದ್ರು. ಒಟ್ಟಿನಲ್ಲಿ ಐಪಿಎಲ್ನಲ್ಲಿ ಆರ್‌ಸಿಬಿ ಹವಾ ಶುರುವಾಗಿದೆ. ಕೆಂಪಂಗಿ ಪಡೆಯನ್ನ ಕಟ್ಟಿಹಾಕೋದು ನಿಜಕ್ಕೂ ಟಫ್. ಅಸಲಿ ಫಿಕ್ಚರ್ ಇನ್ಮೇಲೆ ಶುರುವಾಗಲಿದೆ.
IPL 2022: ಆರ್‌ಸಿಬಿ ತಂಡದಲ್ಲಿ ಮ್ಯಾಚ್ ಫಿನಿಶರ್ 'ಎಂ ಎಸ್ ಧೋನಿ'..!
ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ತನ್ನ ತಾರಾ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಹಾಗೂ ಜೋಶ್ ಹೇಜಲ್‌ವುಡ್ ಅನುಪಸ್ಥಿತಿಯ ನಡುವೆಯೂ ಎರಡು ಬಲಿಷ್ಠ ತಂಡಗಳ ಎದುರು ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಈ ಇಬ್ಬರು ಆಟಗಾರರು ತಂಡ ಕೂಡಿಕೊಂಡರೆ, ಆರ್‌ಸಿಬಿ ಮತ್ತಷ್ಟು ಬಲಿಷ್ಠವಾಗಲಿದೆ. ಈಗಾಗಲೇ ಫಾಫ್ ಡು ಪ್ಲೆಸಿಸ್ (Faf du Plessis), ದಿನೇಶ್ ಕಾರ್ತಿಕ್ (Dinesh Karthik), ಶಹಬಾಜ್ ಅಹಮ್ಮದ್ ಬ್ಯಾಟಿಂಗ್‌ನಲ್ಲಿ ಘರ್ಜಿಸುತ್ತಿದ್ದರೆ, ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್ (Harshal Patel), ವನಿಂದು ಹಸರಂಗ ಮಿಂಚುತ್ತಿದ್ದಾರೆ. ಇದೇ ರೀತಿ ಆರ್‌ಸಿಬಿ ಪ್ರದರ್ಶನ ಮುಂದುವರೆಸಿಕೊಂಡು ಹೋದ್ರೆ, ಈ ಸಲ ಕಪ್ ನಮ್ದೇ..!
