Asianet Suvarna News Asianet Suvarna News

IPL 2022 ವಾರ್ನರ್, ಪಾವೆಲ್ ಮಿಂಚಿನ ಬ್ಯಾಟಿಂಗ್, ಡೆಲ್ಲಿ ಬೃಹತ್ ಮೊತ್ತ

ಹಾಲಿ ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಬಾರಿಸಿದ ನಾಲ್ಕನೇ ಅರ್ಧಶತಕ ಹಾಗೂ ರೋವ್ ಮನ್ ಪಾವೆಲ್ ಅವರ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ ಬೃಹತ್ ಮೊತ್ತದ ಸವಾಲು ನೀಡಿದೆ.

IPL 2022 DC vs SRH David Warner Rovman Powell Power with brilliant Half Century Delhi Capitals post Big total vs Sunrisers Hyderabad san
Author
Bengaluru, First Published May 5, 2022, 9:23 PM IST

ಮುಂಬೈ (ಮೇ. 5): ಅನುಭವಿ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ (David Warner) ಹಾಗೂ ರೋವ್ ಮನ್ ಪಾವೆಲ್ (Rovman Powell) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ, ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಗೆಲುವಿಗೆ ದೊಡ್ಡ ಮೊತ್ತದ ಗುರಿ ನೀಡಿದೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ ಅಬ್ಬರದ ಆಟವಾಡುವ ಮೂಲಕ ಗಮನಸೆಳೆಯಿತು. ಡೇವಿಡ್ ವಾರ್ನರ್ (92*ರನ್, 58ಎಸೆತ, 12 ಬೌಂಡರಿ, 3 ಸಿಕ್ಸರ್) ಹಾಗೂ ರೋವ್ ಮನ್ ಪಾವೆಲ್ (67*ರನ್, 35 ಎಸೆತ, 3 ಬೌಂಡರಿ, 6 ಸಿಕ್ಸರ್) ಅವರ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ 3 ವಿಕೆಟ್ ಗೆ 207 ರನ್ ಬಾರಿಸಿದೆ. ಸನ್ ರೈಸರ್ಸ್ ಹೈದರಾಬಾದ್ (SRH) ತಂಡ 6ನೇ ಗೆಲುವಿನ ಕನಸಿನಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಗೆಲುವು ಸಾಧಿಸಿ ಪ್ಲೇ ಆಫ್ ರೇಸ್ ನಲ್ಲಿ ಉಳಿಯುವ ಇರಾದೆಯಲ್ಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಓವರ್ ನಲ್ಲಿಯೇ ಮಂದೀಪ್ ಸಿಂಗ್ ವಿಕೆಟ್ ಕಳೆದುಕೊಂಡಿತ್ತು.  2ನೇ ವಿಕೆಟ್ ಗೆ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ 37 ರನ್ ಗಳ ಉತ್ತಮ ಜೊತೆಯಾಟವಾಡಿ ನಿರ್ಗಮಿಸಿದರು. 7 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 10 ರನ್ ಸಿಡಿಸಿದ ಮಿಚೆಲ್ ಮಾರ್ಷ್, ಕೈಲ್ ಅಬೋಟ್ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

37 ರನ್ ಗೆ ಪ್ರಮುಖ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ 3ನೇ ವಿಕೆಟ್‌ ಗೆ ನಾಯಕ ರಿಷಭ್ ಪಂತ್ ಹಾಗೂ ಡೇವಿಡ್ ವಾರ್ನರ್ ಆಸರೆಯಾದರು. ಮೈದಾನಕ್ಕೆ ಇಳಿದ ಹಂತದಿಂದಲೇ ಅಬ್ಬರಿಸಿದ ರಿಷಭ್ ಪಂತ್, ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದರು. ಶ್ರೇಯಸ್ ಗೋಪಾಲ್ ಎಸೆದ 9ನೇ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಬ್ಬರಿಸಿದ, ರಿಷಭ್ ಪಂತ್ ನಾಲ್ಕನೇ ಎಸೆತವನ್ನು ಬೌಂಡರಿಗಟ್ಟಿದರು.  ಈ ಓವರ್ ಆರಂಭಕ್ಕೂ ಮುನ್ನ 11 ಎಸೆತಗಳಲ್ಲಿ 4 ರನ್ ಬಾರಿಸಿದ್ದ ರಿಷಭ್ ಪಂತ್, ಶ್ರೇಯಸ್ ಗೋಪಾಲ್ ಎಸೆದ ಓವರ್ ನಲ್ಲಿಯೇ 22 ರನ್ ಸಿಡಿಸಿದರು.

ಇದೇ ಓವರ್ ನ ಕೊನೆಯ ಎಸೆತದಲ್ಲಿ ಬೌಲ್ಡ್ ಆಗುವುದರೊಂದಿಗೆ ಪಂತ್ ಅವರ ಅಬ್ಬರದ ಆಟ ಕೊನೆಯಾಯಿತು. ಆ ಬಳಿಕ ತಂಡದ ಮೊತ್ತವನ್ನು ಏರಿಸುವ ಜವಾಬ್ದಾರಿ ವಹಿಸಿಕೊಂಡ ಡೇವಿಡ್ ವಾರ್ನರ್ ಹಾಗೂ ರೋವ್ ಮನ್ ಪಾವೆಲ್, ಸನ್ ರೈಸರ್ಸ್ ತಂಡದ ಎಲ್ಲಾ ಬೌಲರ್ ಗಳನ್ನು ದಂಡಿಸಿದರು. ಮುರಿಯದ ನಾಲ್ಕನೇ ವಿಕೆಟ್ ಗೆ ಈ ಜೋಡಿ 66 ಎಸೆತಗಳಲ್ಲಿ 122 ರನ್ ಸಿಡಿಸಿ ಡೆಲ್ಲಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು.

IPL 2022: ನಾಯಕತ್ವದಿಂದ ಕೆಳಗಿಳಿದಿದ್ದು ಧೋನಿಯ ತಪ್ಪು ನಿರ್ಧಾರವೆಂದ ಸೆಹ್ವಾಗ್..!

400 ಸಿಕ್ಸರ್ಸ್ ಸಿಡಿಸಿದ ಡೇವಿಡ್ ವಾರ್ನರ್: ಸನ್ ರೈಸರ್ಸ್ ವಿರುದ್ಧದ ಅಬ್ಬರದ ಇನ್ನಿಂಗ್ಸ್ ಹಾದಿಯಲ್ಲಿ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ ನಲ್ಲಿ 400 ಸಿಕ್ಸರ್ ಗಳ ದಾಖಲೆಯನ್ನೂ ಮಾಡಿದರು. 

IPL 2022 ಐವರಿಗೆ ಕಂಟಕವಾಗಲಿದೆ ಈ ಬಾರಿಯ ಐಪಿಎಲ್..!

ಡೆಲ್ಲಿ ಪರವಾಗಿ ಗರಿಷ್ಠ ಮೊತ್ತ: ಡೇವಿಡ್ ವಾರ್ನರ್ ಅಜೇಯ 92 ರನ್ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಹಾಲಿ ಋತುವಿನಲ್ಲಿ ಗರಿಷ್ಠ ವೈಯಕ್ತಿಕ ಮೊತ್ತದ ದಾಖಲೆ ಮಾಡಿದರು. ಇದಕ್ಕೂ ಮುನ್ನ ಆರ್ ಸಿಬಿ ವಿರುದ್ಧ ಡೇವಿಡ್ ವಾರ್ನರ್ ಬಾರಿಸಿದ್ದ 66ರನ್ ಗಳೇ ಗರಿಷ್ಠ ಮೊತ್ತ ಎನಿಸಿತ್ತು. ಅದಲ್ಲದೆ, ಬ್ರಬೋರ್ನ್ ಮೈದಾನದಲ್ಲಿ ವಾರ್ನರ್ ಬಾರಿಸಿದ ಸತತ ಮೂರನೇ ಅರ್ಶತಕ ಇದಾಗಿದೆ. ಇದಕ್ಕೂ ಮುನ್ನ ಕೆಕೆಆರ್ ವಿರುದ್ಧ 45 ಎಸೆತಗಳಲ್ಲಿ 61 ರನ್, ಪಂಜಾಬ್ ಕಿಂಗ್ಸ್ ವಿರುದ್ಧ 30 ಎಸೆತಗಳಲ್ಲಿ ಅಜೇಯ 60 ರನ್ ಬಾರಿಸಿದ್ದರು.

Follow Us:
Download App:
  • android
  • ios