IPL 2022 ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್, ಮಹತ್ತರ ಬದಲಾವಣೆ!

  • ಆರ್‌ಸಿಬಿ ಹಾಗೂ ಚೆನ್ನೈ ನಡುವಿನ ಹೈವೋಲ್ಟೇಜ್ ಪಂದ್ಯ
  • ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ
  • ರೋಚಕ ಹೋರಾಟಕ್ಕೆ ಸಾಕ್ಷಿಯಾಗಲಿದೆ ಪುಣೆ ಕ್ರೀಡಾಂಗಣ
IPL 2022 Chennai Super Kings win toss and chose bowl first against  Royal Challengers Bangalore ckm

ಪುಣೆ(ಮೇ.04): ಐಪಿಎಲ್ ಟೂರ್ನಿಯಲ್ಲಿಂದು ಹೈವೋಲ್ಟೇಜ್ ಪಂದ್ಯ. ಸೋಲಿನಿಂದ ಹೊರಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸೋಲಿನ ಶಾಕ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಚೆನ್ನೈ ತಂಡದಲ್ಲಿ ಸ್ಯಾಂಟ್ನರ್ ಬದಲು ಮೊಯಿನ್ ಆಲಿ ತಂಡ ಸೇರಿಕೊಂಡಿದ್ದಾರೆ. ಆರ್‌ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11
ಫಾಫ್ ಡುಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹಮ್ಮದ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೊರ್, ವಾನಿಂಡು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್

Rinku Singh ಸಿಲಿಂಡರ್ ಸೆಲ್ಲರ್​ ಮಗ ಇಂದು IPLನ​ ಸೆನ್ಷೆಷನಲ್​ ಸ್ಟಾರ್​..!

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಡೆವೋನ್ ಕೊನ್ವೆ, ಮೊಯಿನ್ ಆಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಎಂಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡ್ವೇನ್ ಪ್ರೆಟ್ರೋರಿಯಸ್, ಸಿಮ್ರಜಿತ್ ಸಿಂಗ್, ಮುಕೇಶ್ ಚೌಧರಿ, ಮಹೀಶಾ ತೀಕ್ಷನಾ

5 ಗೆಲುವು 5 ಸೋಲಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಆವೃತ್ತಿಗಳ ಪ್ರದರ್ಶನಕ್ಕೆ ಹಿಡಿದ ಕನ್ನಡಿಯಂತಿದೆ. ಆರಂಭದಲ್ಲಿ ಅಬ್ಬರಿಸಿದ್ದ ಆರ್‌ಸಿಬಿ ಇದೀಗ ಸೋಲಿನಿಂದ ಕಂಗೆಟ್ಟಿದೆ. ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಪಡೆಯಲು ಹೊಂಚು ಹಾಕಿದೆ. ಇದಕ್ಕಾಗಿ ಪ್ರತಿ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

ಆರ್‌ಸಿಬಿ ಉತ್ತಮ ಕಾಂಬಿನೇಷನ್ ಕಣಕ್ಕಿಳಿಸಿದರೂ ಗೆಲುವು ಮಾತ್ರ ಸಿಗುತ್ತಿಲ್ಲ. ಕಳೆದ 5 ಪಂದ್ಯಗಳಲ್ಲಿ ಫಾಫ್ ಡುಪ್ಲೆಸಿಸ್ ಸಿಂಗಲ್ ಡಿಜಿಟ್ ಸ್ಕೋರ್ ತಂಡಕ್ಕೆ ತೀವ್ರ ಹಿನ್ನಡೆ ತಂದಿದೆ. ವಿರಾಟ್ ಕೊಹ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅಬ್ಬರಿಸಿ ಫಾರ್ಮ್‌ಗೆ ಮರಳಿದ್ದಾರೆ. ಇದೀಗ ಚೆನ್ನೈ ವಿರುದ್ಧ ಆರ್‌ಸಿಬಿ ಸ್ಫೋಟಕ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

IPL 2022 ಪಂಜಾಬ್ ತಂಡದ ರನ್ ರೇಟ್ ಬೇಟೆ, ಆರ್ ಸಿಬಿಯನ್ನು ಇಳಿಸಿ 5ನೇ ಸ್ಥಾನಕ್ಕೇರಿದ ಕಿಂಗ್ಸ್!

ರವೀಂದ್ರ ಜಡೇಜಾ ನಾಯಕತ್ವದಲ್ಲಿ ಸೋಲಿನ ಸುಳಿಗೆ ಸುಲಿಕಿದ್ದ ಚೆನ್ನೈ ಸೂಪರ್ ಕಿಂಗ್ಸ್, ಧೋನಿ ನಾಯಕತ್ವದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. ಮತ್ತೆ ಗೆಲುವಿನ ಹಳಿಗೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಸಾಂಪ್ರದಾಯಿಕ ಎದುರಾಳಿ ಬೆಂಗಳೂರು ವಿರುದ್ಧ ಗೆಲುವಿಗೆ ರೆಡಿಯಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಚೆನ್ನೈ 9ನೇ ಸ್ಥಾನದಲ್ಲಿದೆ. ಆದರೆ ಧೋನಿ ನಾಯಕತ್ವ ಎದುರಾಳಿಗಳ ಆತ್ಮವಿಶ್ವಾಸವನ್ನು ಕುಗ್ಗಿಸಲಿದೆ ಅನ್ನೋದು ಖಚಿತ. 

ಅಂಕಪಟ್ಟಿ
ಐಪಿಎಲ್ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ 10 ರಲ್ಲಿ 8 ಪಂದ್ಯಗಳನ್ನು ಗೆದ್ದು ಮೊದಲ ಸ್ಥಾನದಲ್ಲಿದೆ. ಇನ್ನು 10 ರಲ್ಲಿ 7 ಪಂದ್ಯಗಳನ್ನು ಗೆದ್ದ ಲಖನೌ ಸೂಪರ್‌ ಜೈಂಟ್ಸ್ 2ನೇ ಸ್ಥಾನದಲ್ಲಿದೆ. 10 ರಲ್ಲಿ 6 ಪಂದ್ಯಗಳನ್ನು ಗೆದ್ದ ರಾಜಸ್ಥಾನ ರಾಯಲ್ಸ್ 3ನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ 9 ಪಂದ್ಯಗಳಲ್ಲಿ 5 ಗಲುವು ದಾಖಲಿಸಿ 4ನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್ 10 ಪಂದ್ಯಗಳಲ್ಲಿ 5 ಗೆಲುುವು ಹಾಗೂ 5 ಸೋಲು ಕಂಡು 5ನೇ ಸ್ಥಾನದಲ್ಲಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ 10 ರಲ್ಲಿ 5 ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ರನ್‌ರೇಟ್ ಆಧಾರದಲ್ಲಿ 6ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 9 ರಲ್ಲಿ 4 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ 7ನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ 10ರಲ್ಲಿ 4 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ 8ನೇ ಸ್ಥಾನದಲ್ಲಿದೆ. 9 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ 9ನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿನ್ಸ್ 9 ರಲ್ಲಿ ಕೇವಲ 1 ಪಂದ್ಯಗಳನ್ನು ಗೆದ್ದು ಕೊನೆಯ ಸ್ಥಾನದಲ್ಲಿದೆ.

Latest Videos
Follow Us:
Download App:
  • android
  • ios