ಮುಂಬೈ ಹಾಗೂ ಚೆನ್ನೈ ನಡುವಿನ 33ನೇ ಲೀಗ್ ಪಂದ್ಯ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಡಿವೈ ಪಾಟಿಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

ಮುಂಬೈ(ಏ.21); ಐಪಿಎಲ್ 2022 ಲೀಗ್ ಟೂರ್ನಿಯ 33ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಚೆನ್ನೈ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಮೊಯಿನ್ ಆಲಿ ಹಾಗೂ ಕ್ರಿಸ್ ಜೋರ್ಡಾನ್ ಬದಲು ಪ್ರೆಟೋರಿಯಸ್ ಹಾಗೂ ಸ್ಯಾಂಟ್ನರ್ ತಂಡ ಸೇರಿಕೊಂಡಿದ್ದಾರೆ. 

ಇದುವರೆಗೆ ಒಂದೂ ಪಂದ್ಯ ಗೆಲ್ಲದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ರಿಲೆ ಮೆರಿಡಿತ್ ಮುಂಬೈ ಇಂಡಿಯನ್ಸ್‌ಗೆ ಪದಾರ್ಪಣೆ ಮಾಡಿದ್ದಾರೆ. ಡೇನಿಯಲ್ ಸ್ಯಾಮ್ಸ್ ತಂಡಕ್ಕೆ ವಾಪಾಸ್ ಆಗಿದ್ದರೆ, ಯುವ ಆಫ್ ಸ್ಪಿನ್ನರ್ ಹೃತಿಕ್ ಶೋಕೀನ್ ತಂಡ ಸೇರಿಕೊಂಡಿದ್ದಾರೆ. ಮಹತ್ವದ ಬದಲಾವಣೆ ಮೂಲಕ ಮುಂಬೈ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ(ನಾಯಕ), ಎಂ.ಎಸ್ ಧೋನಿ, ಡ್ವೈನ್ ಪ್ರೆಟೋರಿಯಸ್, ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ಮಹೀಶ್ ತೀಕ್ಷನಾ, ಮುಕೇಶ್ ಚೌಧರಿ

IPL 2022: ಚೆನ್ನೈ ಸೂಪರ್ ಕಿಂಗ್ಸ್‌ ತಂಡದಿಂದ ಹೊರಗುಳಿದ ಸ್ಟಾರ್ ಕ್ರಿಕೆಟಿಗ..?

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಡೇವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರನ್ ಪೊಲಾರ್ಡ್, ಡೇನಿಯಸ್ ಸ್ಯಾಮ್ಸ್, ಹೃತಿಕ್ ಶೋಕಿನ್, ರಿಲೆ ಮೆರಿಡಿತ್, ಜಯದೇವ್ ಉನಾದ್ಕಟ್, ಜಸ್ಪ್ರೀತ್ ಬುಮ್ರಾ

ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ತಂಡ. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ತಂಡ. ಆದರೆ ಈ ಬಾರಿ ಅದೃಷ್ಟ ನೆಟ್ಟಗಿಲ್ಲ. ಎರಡೂ ತಂಡಗಳು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 9ನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ 10ನೇ ಸ್ಥಾನದಲ್ಲಿದೆ.

ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಮುಖಾಮುಖಿಯಲ್ಲಿ ಮುಂಬೈ ಮೇಲುಗೈ ಸಾಧಿಸಿದೆ. ಮುಂಬೈ 19 ಗೆಲುವು ಕಂಡಿದ್ದರೆ, ಚೆನ್ನ 13 ಗೆಲುವು ದಾಖಲಿಸಿದೆ. ಆದರೆ ಸೋಲಿನ ಸುಳಿಗೆ ಸಿಲುಕಿರುವ ಈ ಎರಡು ತಂಡಗಳ ಅದೃಷ್ಟ ಪರೀಕ್ಷೆಯಲ್ಲಿ ಯಾರು ಗೆಲುವಿನ ದಡ ಸೇರುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

IPLನಲ್ಲಿ ಟೀಂ ಇಂಡಿಯಾ ಇಬ್ಬರು ದಿಗ್ಗಜರಿಂದ ಪ್ಲಾಫ್​ ಶೋ..!

ಐಪಿಎಲ್ ಅಂಕಪಟ್ಟಿ:
ಐಪಿಎಲ್ ಟೂರ್ನಿ 2022 ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ 6 ಪಂದ್ಯದಲ್ಲಿ 5 ಗೆಲುವು ದಾಖಲಿಸಿದೆ. ಇನ್ನು ಭರ್ಜರಿ ಗೆಲುವಿನ ಮೂಲಕ ದಾಖಲೆ ಬರೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ ಎರಡನೇ ಸ್ಥಾನದಲ್ಲಿದೆ. ಇನ್ನು 6 ಪಂದ್ಯದಲ್ಲಿ 4 ಗೆಲವು ದಾಖಲಿಸಿದ ರಾಜಸ್ಥಾನ ರಾಯಲ್ಸ್ 3ನೇ ಸ್ಥಾನದಲ್ಲಿದೆ. ಲಖನೌ ಸೂಪರ್ ಜೈಂಟ್ಸ್ 4ನೇ ಸ್ಥಾನದಲ್ಲಿದೆ. ಲಖನೌ 7ರಲ್ಲಿ 4 ಗೆಲುವು ಕಂಡಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ 6 ಪಂದ್ಯದಲ್ಲಿ 4 ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 6ರಲ್ಲಿ 3 ಗೆಲುವು ದಾಖಲಿಸಿ 6ನೇ ಸ್ಥಾನದಲ್ಲಿದೆ. ಇನ್ನು ಕೋಲ್ಕತಾ ನೈಟ್ ರೈಡರ್ಸ್ 7ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 7ರಲ್ಲಿ 3 ಪಂದ್ಯಗಳನ್ನು ಗೆದ್ದು 8ನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ಹಾಗೂ ಮುಂಬೈ ಕೊನೆಯ ಸ್ಥಾನದಲ್ಲಿದೆ.