* ಮುಂಬೈ ಇಂಡಿಯನ್ಸ್‌ ಪರ ಮೊದಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ತೋರಿದ ಹೃತಿಕ್ ಶೋಕೀನ್* ಡೆಲ್ಲಿ ಮೂಲದ ಪ್ರತಿಭಾನ್ವಿತ ಆಲ್ರೌಂಡರ್ ಹೃತಿಕ್ ಶೋಕೀನ್* ಸಿಎಸ್‌ಕೆ ವಿರುದ್ದದ ಪಂದ್ಯದಲ್ಲಿ ಮಿಂಚಿದ ಹೃತಿಕ್ ಶೋಕೀನ್

ಮುಂಬೈ(ಏ.23) : ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ 156 ರನ್ ಟಾರ್ಗೆಟ್ ಅನ್ನ ಸಿಎಸ್​ಕೆ ಸುಲಭವಾಗಿ ಬೆನ್ನಟ್ಟಿ ಗೆಲ್ಲಬಹುದಿತ್ತು. ಆದ್ರೆ ಆ ಪಂದ್ಯವನ್ನ ರೋಚಕವಾಗಿ ಅಂತ್ಯಗೊಳ್ಳುವಂತೆ ಮಾಡಿದ್ದು ಮಾತ್ರ 21 ವರ್ಷದ ಯುವ ಬೌಲರ್. ಹೌದು, ಡೆಲ್ಲಿಯ ಈ ಆಫ್ ಬ್ರೇಕ್ ಬೌಲರ್, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಬ್ಯಾಟರ್​ಗಳನ್ನ ಇನ್ನಿಲ್ಲದಂತೆ ಕಾಡಿದ್ರು. ಹಾಗಾಗಿಯೇ ಕೊನೆ ಓವರ್​ನಲ್ಲಿ ಚೆನ್ನೈ ಸೋಲಿನ ಭೀತಿ ಅನುಭವಿಸಲು ಸಾಧ್ಯವಾಗಿದ್ದು.

ಭಾರತದ ಅಂಡರ್​-19 ಆಟಗಾರನಾಗಿರುವ ಹೃತಿಕ್ ಶೋಕೀನ್ (Hrithik Shokeen) 4 ಓವರ್ ಬೌಲಿಂಗ್ ಮಾಡಿ 23 ರನ್ ನೀಡಿದ್ರು. ಒಂದೂ ವಿಕೆಟ್ ಪಡೆಯದಿದ್ದರೂ ರನ್ ಬಿಟ್ಟುಕೊಡಲಿಲ್ಲ. ಇದೇ ಕೊನೆಗೆ ಸಿಎಸ್​ಕೆಯನ್ನ ಸಂಕಷ್ಟಕ್ಕೆ ಸಿಲುಕಿಸಿತು. ಮಹೇಂದ್ರ ಸಿಂಗ್ ಧೋನಿ ಮ್ಯಾಚ್ ಫಿನಿಶ್ ಮಾಡಿ ಸಿಎಸ್​ಕೆ ಗೆಲ್ಲಿಸಿದ್ರು ನಿಜ. ಆದ್ರೆ ಸಿಎಸ್​ಕೆ ಪಾಳಯದಲ್ಲಿ ಭಯ ಹುಟ್ಟಿಸಿದ್ದು ಮಾತ್ರ ಈ 21 ವರ್ಷದ ಯಂಗ್​ ಬೌಲರ್.

ಚೊಚ್ಚಲ ಪಂದ್ಯದಲ್ಲೇ ಗಮನ ಸೆಳೆದ ಹೃತಿಕ್:

ಹೃತಿಕ್ ಶೋಕೀನ್ ಅವರನ್ನ ಬಿಡ್​ನಲ್ಲಿ ಮೂಲ ಬೆಲೆ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. 6 ಪಂದ್ಯದಲ್ಲಿ ಬೆಂಚ್ ಕಾಯ್ದ ಹೃತಿಕ್, ಮೊನ್ನೆ 7ನೇ ಪಂದ್ಯದಲ್ಲಿ ಆಡೋ ಮೂಲಕ ಐಪಿಎಲ್​ಗೆ ಡೆಬ್ಯು ಮಾಡಿದ್ರು. ಅವರಿಗೆ ಇದು ಚೊಚ್ಚಲ ಟಿ20 ಪಂದ್ಯ ಸಹ ಆಗಿತ್ತು. ವಿಕೆಟ್ ಪಡೆಯದಿದ್ದರೂ ಅದ್ಭುತವಾಗಿ ಬೌಲಿಂಗ್ ಮಾಡಿದ್ರು. 8 ಲಿಸ್ಟ್ A ಪಂದ್ಯಗಳನ್ನಾಡಿರುವ ಶೋಕೀನ್, 8 ವಿಕೆಟ್ ಪಡೆದಿದ್ದಾರೆ. ಐಪಿಎಲ್​ನಲ್ಲಿ ಚೊಚ್ಚಲ ವಿಕೆಟ್ ಪಡೆಯೋ ಅವಕಾಶ ಇತ್ತಾದ್ರೂ ಅಂಪೈರ್​ನ ವಿವಾದಾತ್ಮಕ ತೀರ್ಪಿನಿಂದ ಮೊದಲ ವಿಕೆಟ್ ಪಡೆಯುವುದರಿಂದ ವಂಚಿತರಾದ್ರು.

No-Ball controversy: ರಿಷಭ್‌ ಪಂತ್‌ಗೆ 1.15 ಕೋಟಿ ರೂ ದಂಡ, ಕೋಚ್ ಆಮ್ರೆಗೂ ಭಾರೀ ಶಿಕ್ಷೆ..!

ಹೃತಿಕ್ ಶೋಕೀನ್ 2019ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಎಸಿಸಿ ಎಮರ್ಜಿಂಗ್ ಟೀಂಗಳ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಕಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದರು. 2019ರಲ್ಲೇ ನೇಪಾಳ ವಿರುದ್ದ ಕಣಕ್ಕಿಳಿಯುವ ಮೂಲಕ ಹೃತಿಕ್ ಶೋಕೀನ್ ಲಿಸ್ಟ್‌ 'ಎ' ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಐಪಿಎಲ್‌ನಲ್ಲಿ ಮೊದಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ತೋರಿದ್ದು, ಮುಂಬರುವ ದಿನಗಳಲ್ಲಿ ಇದೇ ರೀತಿಯ ಪ್ರದರ್ಶನ ತೋರಿದರೆ, ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡರೂ ಅಚ್ಚರಿಪಡುವಂತಿಲ್ಲ.

ಇನ್ನು ಸಿಎಸ್​ಕೆ ವಿರುದ್ಧ ಬ್ಯಾಟಿಂಗ್​ನಲ್ಲೂ ಹೃತಿಕ್ ಮಿಂಚಿದ್ರು. 25 ಬಾಲ್​ನಲ್ಲಿ ಮೂರು ಬೌಂಡರಿ ಸಹಿತ 25 ರನ್ ಬಾರಿಸಿ, ಮುಂಬೈ ಇಂಡಿಯನ್ಸ್​ಗೆ ಆಸರೆಯಾದ್ರು. ಈ ಮೂಲಕ ತಾನೊಬ್ಬ ಭವಿಷ್ಯದ ಆಲ್ ರೌಂಡರ್ ಅನ್ನೋದನ್ನ ಪ್ರೂವ್ ಮಾಡಿದ್ರು. ಮುಂಬೈ ಇಂಡಿಯನ್ಸ್‌ಗೆ ಸ್ಪಿನ್ನರ್​ಗಳ ಕೊರತೆಯನ್ನ ಶೋಕೀನ್ ನೀಗಿಸಿದ್ರು. ಸಿಎಸ್​ಕೆ ವಿರುದ್ಧದ ಪರ್ಪಾಮೆನ್ಸ್ ನೋಡಿದ್ರೆ ಮುಂದಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿಯಲಿದ್ದಾರೆ. ಉಳಿದ ಪಂದ್ಯಗಳಲ್ಲೂ ಇದೇ ಪ್ರದರ್ಶನ ಮುಂದುವರೆಸಿದ್ರೆ, ಮುಂದಿನ ವರ್ಷ ಡೇಂಜರಸ್ ಬೌಲರ್ ಆಗಿ ಹೊರಹೊಮ್ಮಲಿದ್ದಾರೆ.