* ಅಬುಧಾಬಿಯಲ್ಲಿಂದು ಮುಂಬೈಗೆ ಸನ್‌ರೈಸರ್ಸ್‌ ಹೈದರಾಬಾದ್ ಸವಾಲು* ದೊಡ್ಡ ಪವಾಡದ ನಿರೀಕ್ಷೆಯಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್* ಟಾಸ್ ಗೆದ್ದು ಹೈದರಾಬಾದ್ ಬ್ಯಾಟಿಂಗ್ ಆಯ್ದುಕೊಂಡರೆ, ಮುಂಬೈ ರೇಸ್‌ನಿಂದ ಔಟ್..!

ಅಬುಧಾಬಿ(ಅ.08): 5 ಬಾರಿ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ (Mumbai Indians), ಸನ್‌ರೈಸ​ರ್ಸ್‌ ಹೈದರಾಬಾದ್‌ ವಿರುದ್ಧ ಅಮೋಘ ಗೆಲುವು ಸಾಧಿಸಿದರಷ್ಟೇ ಪ್ಲೇ-ಆಫ್‌ಗೇರುವ ಅವಕಾಶ ಸಿಗಲಿದೆ. ಲೀಗ್‌ ಹಂತದ ಅಂತಿಮ ಪಂದ್ಯವಾಗಿರುವ ಕಾರಣ ರೋಹಿತ್‌ ಶರ್ಮಾ (Rohit Sharma) ಪಡೆಗೆ ಪ್ಲೇ-ಆಫ್‌ ಪ್ರವೇಶಕ್ಕೆ ಬೇಕಿರುವ ಲೆಕ್ಕಾಚಾರದ ಸಂಪೂರ್ಣ ಮಾಹಿತಿ ಇರಲಿದೆ. ಹೀಗಾಗಿ ತಂಡ ಅದಕ್ಕೆ ತಕ್ಕಂತೆ ತನ್ನ ಆಟದ ಶೈಲಿಯನ್ನು ಯೋಜಿಸಿಕೊಳ್ಳಬೇಕಿದೆ.

ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ (Rajasthan Royals)) ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಂಡಿದ್ದ ಮುಂಬೈ ಮತ್ತೊಮ್ಮೆ ಅಂತದ್ದೇ ಆಲ್ರೌಂಡ್‌ ಪ್ರದರ್ಶನ ತೋರಲು ಕಾಯುತ್ತಿದೆ. ಸನ್‌ರೈಸ​ರ್ಸ್‌ ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿಯನ್ನು ಕಟ್ಟಿಹಾಕಿದ ರೀತಿಯಲ್ಲೇ ಮುಂಬೈ ಆಸೆಗೂ ತಣ್ಣೀರೆರೆಚಲು ಕಾಯುತ್ತಿದೆ.

Scroll to load tweet…

IPL 2021‌: ಮೊದಲ ಬಾರಿ ಏಕಕಾಲಕ್ಕೆ 2 ಐಪಿಎಲ್‌ ಪಂದ್ಯ..!

ಭಾರತ ಟಿ20 ವಿಶ್ವಕಪ್‌ (T20 World Cup) ತಂಡದಲ್ಲಿ ಮುಂಬೈ ಇಂಡಿಯನ್ಸ್‌ ಆಟಗಾರರೇ ಹೆಚ್ಚಿರುವ ಕಾರಣ, ಲಯ ಉಳಿಸಿಕೊಳ್ಳುವ ಅಗತ್ಯವೂ ಇದೆ. ಇಶಾನ್‌ ಕಿಶನ್‌ ಸ್ಫೋಟಕ ಆಟವಾಡಿ ಲಯಕ್ಕೆ ಮರಳಿರುವುದು ಮುಂಬೈಗೆ ಮಾತ್ರವಲ್ಲ ಟೀಂ ಇಂಡಿಯಾಗೂ ಸಿಹಿ ಸುದ್ದಿ. ಸನ್‌ರೈಸ​ರ್ಸ್‌ ಹೈದರಾಬಾದ್ (Sunrisers Hyderabad) ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಲು ಕಾಯುತ್ತಿದ್ದು, ಮುಂಬೈ ಗೆಲುವಿಗಾಗಿ ಹೆಚ್ಚುವರಿ ಪರಿಶ್ರಮ ವಹಿಸಬೇಕಿದೆ.

ಸದ್ಯ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವು 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಕೇನ್‌ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, 13 ಪಂದ್ಯಗಳಲ್ಲಿ ಕೇವಲ 3 ಗೆಲುವು ಹಾಗೂ 10 ಸೋಲುಗಳೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 

Scroll to load tweet…

ಮುಂಬೈ ಪ್ಲೇ ಆಫ್‌ಗೇರಲು ಏನು ಮಾಡಬೇಕು..?

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್‌ಗೇರಲು ಕೇವಲ ಒಂದೇ ಒಂದು ಅವಕಾಶವಿದ್ದು, ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ದ 171 ರನ್‌ಗಳ ಅಂತರದ ಗೆಲುವು ಸಾಧಿಸಬೇಕು. ಹೀಗಾದರೆ ಮಾತ್ರ ಕೋಲ್ಕತ ನೈಟ್‌ ರೈಡರ್ಸ್ ತಂಡವನ್ನು ಹಿಂದಿಕ್ಕಿ ಮುಂಬೈ ಇಂಡಿಯನ್ಸ್ 4ನೇ ತಂಡವಾಗಿ ಪ್ಲೇ ಆಫ್‌ಗೇರಲಿದೆ. ಒಂದು ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರೆ ಸಾಕು, ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ.

ಸ್ಥಳ: ಅಬುಧಾಬಿ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 2