Asianet Suvarna News Asianet Suvarna News

IPL 2021 ಸೋತರೂ, ಗೆದ್ದರೂ ಎಂದೆಂದಿಗೂ ಬೆಂಗಳೂರು-ವಿರಾಟ್‌ಗೆ ನಮ್ಮ ಸಪೋರ್ಟ್ ಎಂದ RCB ಫ್ಯಾನ್ಸ್‌..!

* 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಹೋರಾಟ ಅಂತ್ಯ

* ಎಲಿಮಿನೇಟರ್‌ ಪಂದ್ಯದಲ್ಲಿ ಕೆಕೆಆರ್‌ಗೆ ಶರಣಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು

* ಎಂದೆಂದಿಗೂ ನಮ್ಮ ಸಪೋರ್ಟ್‌ ಆರ್‌ಸಿಬಿಗೆ ಎಂದ ಫ್ಯಾನ್ಸ್‌

IPL 2021 will Support Virat Kohli Till The End Says Loyal RCB Fans kvn
Author
Bengaluru, First Published Oct 12, 2021, 11:14 AM IST
  • Facebook
  • Twitter
  • Whatsapp

ಬೆಂಗಳೂರು(ಅ.12): 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಚಕ ಸೋಲು ಕಾಣುವ ಮೂಲಕ ತನ್ನ ಅಭಿಯಾನ ಮುಗಿಸಿದೆ. ಇದೇ ವೇಳೆ ವಿರಾಟ್‌ ಕೊಹ್ಲಿ (Virat Kohli) ಆರ್‌ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇನ್ನೂ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ, ಮತ್ತೊಮ್ಮೆ ಬೆಂಗಳೂರು ಹಾಗೂ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ನಿಷ್ಠೆಯನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ.

ಹೌದು, ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವು ಕಳೆದ 14 ಆವೃತ್ತಿಗಳಲ್ಲಿ ಕಪ್‌ ಗೆಲ್ಲಲು ವಿಫಲವಾಗಿದ್ದರೂ, ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಪ್ರತಿಬಾರಿಯೂ ಅಭಿಮಾನಿಗಳು ಆರ್‌ಸಿಬಿ ಮೇಲೆ ತನ್ನ ಅಭಿಮಾನವನ್ನು ಮುಂದುವರೆಸಿಕೊಂಡೇ ಬಂದಿದ್ದಾರೆ. ಈ ಸಲ ಕಪ್‌ ನಮ್ದೇ (E sala Cup Namde) ಎಂದು ತಂಡವನ್ನು ಹುರಿದುಂಬಿಸುತ್ತಲೇ ಬಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ ಒಟ್ಟು ಮೂರು ಬಾರಿ ಐಪಿಎಲ್‌ ಪ್ರವೇಶಿಸಿದೆಯಾದರೂ, ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಂತ ಅಭಿಮಾನಿಗಳಲ್ಲಿ ಆರ್‌ಸಿಬಿ ಮೇಲಿನ ಅಭಿಮಾನ ಎಳ್ಳಷ್ಟೂ ಕಮ್ಮಿಯಾಗಿಲ್ಲ.

IPL 2021: ಪಂದ್ಯ ಸೋತರೂ ಅಪರೂಪದ ಮೈಲಿಗಲ್ಲು ನೆಟ್ಟ ಹರ್ಷಲ್‌ ಪಟೇಲ್-ವಿರಾಟ್ ಕೊಹ್ಲಿ..!

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದ ಆರ್‌ಸಿಬಿ, ಬಲಿಷ್ಠ ತಂಡಗಳನ್ನು ಮಣಿಸುವ ಮೂಲಕ ಈ ಬಾರಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್, ಶ್ರೀಕರ್ ಭರತ್, ಯುಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ಅಮೋಘ ಪ್ರದರ್ಶನ ತೋರುವ ಮೂಲಕ ಆರ್‌ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಿದ್ದೂ ಎಲಿಮಿನೇಟರ್‌ನಂತಹ ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತು.

ಇನ್ನು ಕಳೆದ ತಿಂಗಳಷ್ಟೇ ಈ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದರು. ಅದರಂತೆಯೇ ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ದ ಪಂದ್ಯದ ಸೋಲಿನ ಬಳಿಕ ಆರ್‌ಸಿಬಿ ನಾಯಕತ್ವದ ಕೆಳಗಿಳಿಯುವ ಬಗ್ಗೆ ವಿದಾಯದ ಸಂದೇಶ ರವಾನಿಸಿದ್ದಾರೆ. ಈ ಆವೃತ್ತಿಯ ಬಳಿಕ ನಾಯಕನಾಗಿ ಮುಂದುವರೆಯುವುದಿಲ್ಲ, ಬದಲಾಗಿ ಆರ್‌ಸಿಬಿ ಪರ ಕೇವಲ ಆಟಗಾರನಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಆರ್‌ಸಿಬಿಗಾಗಿ ನಾನು 120% ಶ್ರಮ ವಹಿಸಿದ್ದೇನೆ. ಆರ್‌ಸಿಬಿ ಪರ ನಿಷ್ಠೆಯಿಂದ ಇದ್ದೇನೆ. ಐಪಿಎಲ್‌ನಲ್ಲಿ ಆಡುವವರೆಗೂ ಆರ್‌ಸಿಬಿ (RCB) ಪರವೇ ಆಡುತ್ತೇನೆ ಎಂದಿದ್ದಾರೆ.

IPL 2021: ಆರ್‌ಸಿಬಿ ನಾಯಕತ್ವಕ್ಕೆ ಭಾವನಾತ್ಮಕವಾಗಿ ವಿದಾಯ ಹೇಳಿದ ವಿರಾಟ್ ಕೊಹ್ಲಿ
 

ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಸೋತರೂ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ತಂಡದ ಕುರಿತಂತೆ ಅಭಿಮಾನಿಗಳು ತಮ್ಮ ಬೆಂಬಲ ಸೂಚಿಸಿದ್ದಾರೆ. ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಯ ಬಗ್ಗೆ ಅಭಿಮಾನಿಗಳು ತಮ್ಮ ನಿಷ್ಠೆಯನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಅನಾವರಣ ಮಾಡಿದ್ದಾರೆ. ಅದರ ಒಂದಷ್ಟು ಸ್ಯಾಂಪಲ್ಸ್‌ ಇಲ್ಲಿದೆ ನೋಡಿ...
 

Follow Us:
Download App:
  • android
  • ios