CSK ತಂಡ ಸೇರಿಕೊಂಡ ನಾಯಕ ಎಂ.ಎಸ್.ಧೋನಿ ರಾಂಚಿಯಿಂದ ಚೆನ್ನೈಗೆ ಬಂದಿಳಿದ ಕೂಲ್ ಕ್ಯಾಪ್ಟನ್ ಐಪಿಎಲ್ 2021 ಭಾಗ 2ಕ್ಕಾಗಿ ದುಬೈಗೆ ತೆರಳಲಿದೆ ಚೆನ್ನೈ ತಂಡ
ಚೆನ್ನೈ(ಆ.10): ಐಪಿಎಲ್ 2021 ಮಂದುವರಿದ ಪಂದ್ಯಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಯಾರಿ ಆರಂಭಿಸಿದೆ. ಸೆಪ್ಟೆಂಬರ್ 19 ರಂದು ಐಪಿಎಲ್ ಎರಡನೇ ಭಾಗ ದುಬೈನಲ್ಲಿ ಆರಂಭಗೊಳ್ಳಲಿದೆ. ಇದಕ್ಕಾಗಿ 8 ತಂಡಗಳು ಅಭ್ಯಾಸ ಆರಂಭಿಸಿದೆ. ಮೊದಲ ಭಾಗದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್(CSK) ಇದೀಗ 2ನೇ ಭಾಗಕ್ಕೆ ತಯಾರಿ ನಡೆಸುತ್ತಿದೆ. ಇದೀಗ ನಾಯಕ ಎಂ.ಎಸ್.ಧೋನಿ CSK ತಂಡ ಸೇರಿಕೊಂಡಿದ್ದಾರೆ.
IPL 2022 ಟೂರ್ನಿಗೆ ಬಹುತೇಕ ಆಟಗಾರರು ಅದಲು ಬದಲು; ರಿಟೈನ್ ಅವಕಾಶ ಮೂವರಿಗೆ ಮಾತ್ರ!
ರಾಂಚಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಧೋನಿ, ಚೆನ್ನೈಗೆ ಬಂದಿಳಿದಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಧೋನಿಗೆ ಸಿಎಸ್‌ಕೆ ತಂಡ ಸ್ವಾಗತ ನೀಡಿದೆ. ನೇರವಾಗಿ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್‌ಗೆ ತೆರಳಿದ ಧೋನಿ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಕೆಲ ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವ ಧೋನಿ ವರದಿ ಬಂದ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಂತ ಹಂತವಾಗಿ ದುಬೈಗೆ ಪ್ರಯಾಣ ಮಾಡಲಿದೆ. ದುಬೈ ನಿಯಮದ ಪ್ರಕಾರ ಪ್ರತಿ ಆಟಗಾರನಿಗೆ ಕನಿಷ್ಠ 10 ದಿನದ ಕ್ವಾರಂಟೈನ್ ಅಗತ್ಯವಿದೆ. ಹೀಗಾಗಿ ದುಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಎಲ್ಲಾ ತಂಡದ ಆಟಗಾರರು ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ವಿದೇಶಿ ಆಟಗಾರರು ನೇರವಾಗಿ ದುಬೈಗೆ ಆಗಮಿಸಲಿದ್ದಾರೆ.
IPL ಟೂರ್ನಿ ಪ್ರಸಾರ ಹಕ್ಕು ಖರೀದಿಗೆ ಮುಂದಾದ ರಿಲಯನ್ಸ್; 30,000 ಕೋಟಿ ರೂ ಅಧಿಕ ಮೊತ್ತಕ್ಕೆ ಬಿಡ್ ಸಾಧ್ಯತೆ!
ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಎರಡನೇ ಭಾಗದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಹೋರಾಟ ನಡೆಸಲಿದೆ. ಐಪಿಎಲ್ 2021ರ ಮೊದಲ ಭಾಗದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆಡಿದ 7 ಪಂದ್ಯದಲ್ಲಿ 5 ಗೆಲುವು 2 ಸೋಲು ಕಂಡಿರುವ ಧೋನಿ ಪಡೆ 10 ಅಂಕ ಸಂಪಾದಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನದಲ್ಲಿದ್ದರೆ, 3ನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿದೆ. ಸನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ.
