14ನೇ ಆವೃತ್ತಿ ಐಪಿಎಲ್ ಟೂರ್ನಿಯ 25ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು? 

ಅಹಮ್ಮದಾಬಾದ್(ಏ.29): ಐಪಿಎಲ್ ಟೂರ್ನಿ ಸೋಲು ಗೆಲುವು ಪಂದ್ಯದ ಅಂಕಪಟ್ಟಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡುತ್ತಿದೆ. ಇದೀಗ ಡೆಲ್ಲಿ ಹಾಗೂ ಕೆಕೆಆರ್ ಪಂದ್ಯದ ಫಲಿತಾಂಶ ಮತ್ತೆ ಅಂಕಪಟ್ಟಿಯಲ್ಲಿ ಕೆಲ ಚೇಂಜಸ್ ಮಾಡಲಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡೆಲ್ಲಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅಮಿತ್ ಮಿಶ್ರಾ ಬದಲು, ಲಲಿತ್ ತಂಡ ಸೇರಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಆಡಿದ 6 ಪಂದ್ಯದಲ್ಲಿ 4 ಗೆಲುವು 2 ಸೋಲು ಕಂಡಿದೆ. 8 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ಇತ್ತ ಕೆಕೆಆರ್ 6ರಲ್ಲಿ 2 ಗೆಲುವು 4 ಸೋಲು ಕಂಡಿದೆ. ಈ ಮೂಲಕ 5ನೇ ಸ್ಥಾನದಲ್ಲಿದೆ.