* IPL ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ ಬಿಸಿಸಿಐ* ಸೆಪ್ಟೆಂಬರ್ 19ರಿಂದ ಯುಎಇ ಚರಣದ ಐಪಿಎಲ್‌ ಆರಂಭ* ಕಳೆದ ವರ್ಷ ಸಂಪೂರ್ಣ ಐಪಿಎಲ್‌ ಟೂರ್ನಿಗೆ ಯುಎಇ ಆತಿಥ್ಯ ವಹಿಸಿತ್ತು

ದುಬೈ(ಸೆ.15): ಮುಂಬರುವ ಯುಎಇ ಚರಣದ ಐಪಿಎಲ್‌ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಮೂರು ಬಾರಿಯ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್ ತಂಡಗಳು ತಮ್ಮ ಅಭಿಯಾನ ಆರಂಭಿಸಲಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸೆಪ್ಟೆಂಬರ್ 19ರಿಂದ ಯುಎಇ ಚರಣದ ಐಪಿಎಲ್‌ ಆರಂಭವಾಗಲಿವೆ.

ಹೌದು, ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಭಿಮಾನಿಗಳ ಪ್ರವೇಶಕ್ಕೆ ಅನುಮತಿ ಸಿಕ್ಕಿದೆ. ಕ್ರಿಕೆಟ್ ಅಭಿಮಾನಿಗಳು ಮೈದಾನಕ್ಕೆ ಬಂದು ಪಂದ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನ್ನುಳಿದ 31 ಪಂದ್ಯಗಳು ದುಬೈ, ಶಾರ್ಜಾ ಹಾಗೂ ಅಬುಧಾಬಿ ಮೈದಾನಗಳಲ್ಲಿ ನಡೆಯಲಿವೆ. ಕೋವಿಡ್‌ 19 ಪ್ರೊಟೋಕಾಲ್‌ ಹಾಗೂ ಯುಎಇ ಸರ್ಕಾರದ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಸೀಮಿತ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಒದಗಿಸುವುದಾಗಿ ಬಿಸಿಸಿಐ ತಿಳಿಸಿದೆ.

Scroll to load tweet…

ಅಕ್ಟೋಬರ್ 17ಕ್ಕೆ ಹೊಸ 2 ಐಪಿಎಲ್‌ ತಂಡಗಳಿಗೆ ಆನ್‌ಲೈನ್‌ ಬಿಡ್ಡಿಂಗ್‌..!

ಪ್ರೇಕ್ಷಕರು ಸೆಪ್ಟೆಂಬರ್ 16ರಿಂದಲೇ ಐಪಿಎಲ್ ಅಧಿಕೃತ ವೆಬ್‌ಸೈಟ್‌ www.iplt20.com ಹಾಗೂ PlatinumList.net ವೆಬ್‌ಸೈಟ್‌ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. 

ಕಳೆದ ವರ್ಷ ಸಂಪೂರ್ಣ ಐಪಿಎಲ್‌ ಟೂರ್ನಿಗೆ ಯುಎಇ ಆತಿಥ್ಯ ವಹಿಸಿತ್ತು. ಕೋವಿಡ್ ಭೀತಿಯಿಂದಾಗಿ ಖಾಲಿ ಮೈದಾನದಲ್ಲಿ ಪಂದ್ಯಾವಳಿಗಳು ನಡೆದಿದ್ದವು. ಇನ್ನು ಭಾರತದಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್‌ ಪಂದ್ಯಗಳು ಖಾಲಿ ಸ್ಟೇಡಿಯಂನಲ್ಲಿ ನಡೆದಿದ್ದವು.