Asianet Suvarna News Asianet Suvarna News

IPL 2021: ಸುರೇಶ್ ರೈನಾ, ಕುರನ್ ಅಬ್ಬರ, ಡೆಲ್ಲಿಗೆ ಬೃಹತ್ ಗುರಿ!

ಕಳೆದ ಆವೃತ್ತಿಯಲ್ಲಿ ಹಿನ್ನಡೆ ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿ ಆ ಚಿಂತೆ ಇಲ್ಲ ಕಾರಣ. ಸುರೇಶ್ ರೈನಾ ಕಮ್‌ಬ್ಯಾಕ್. ಸಿಎಸ್‌ಕೆ ತಂಡಕ್ಕೆ ಮತ್ತೆ ಆಸರೆಯಾದ ಸುರೇಶ್ ರೈನಾ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದ್ದಾರೆ. ಹೀಗಾಗಿ ಡೆಲ್ಲಿ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.

IPL 2021 Suresh Raina help CSK to set  189 runs target to Delhi capitals ckm
Author
Bengaluru, First Published Apr 10, 2021, 9:16 PM IST

ಚೆನ್ನೈ(ಏ.10): ಕಳೆದ ಆವೃತ್ತಿಯಲ್ಲಿ ವೈಯುಕ್ತಿಕ ಕಾರಣದಿಂದ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಗುಳಿದಿದ್ದರು. ಹೀಗಾಗಿ ಮಧ್ಯಮ ಕ್ರಮಾಂಕ ಸಂಪೂರ್ಣ ದುರ್ಬಲಗೊಂಡಿತ್ತು. ಆದರೆ ಈ ಬಾರಿ ರೈನಾ ತಂಡದಲ್ಲಿರುವುದು ಚೆನ್ನೈ ಬಲ ಹೆಚ್ಚಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಸುರೇಶ್ ರೈನಾ ಹಾಫ್ ಸೆಂಚುರಿ ನೆರವಿನಿಂದ ಸಿಎಸ್‌ಕೆ 7 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿದೆ.

IPL 2021: ಪಂದ್ಯ ಸೋತರೂ ಅಭಿಮಾನಿಗಳ ಮನಗೆದ್ದ ರೋಹಿತ್ ಶರ್ಮಾ

ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್, ಆಘಾತಕಾರಿ ಆರಂಭ ಪಡೆಯಿತು. ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಬಹುಬೇಗನೆ ಪೆವಿಲಿಯನ್ ಸೇರಿದರು. ಆದರೆ ಮೊಯಿನ್ ಆಲಿ ಹಾಗೂ ಸುರೇಶ್ ರೈನಾ ಜೊತೆಯಾಟ ಚೆನ್ನೈ ತಂಡಕ್ಕೆ ಚೇತರಿಸಿಕೆ ನೀಡಿತು. ಮೊಯಿನ್ ಆಲಿ 36 ರನ್ ಸಿಡಿಸಿ ಔಟಾದರು.

ಅಂಬಾಟಿ ರಾಯುಡು 23 ರನ್ ಸಿಡಿಸಿ ಔಟಾದರು. ಇತ್ತ ಸುರೇಶ್ ರೈನಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ದಿಟ್ಟ ಹೋರಾಟ ನೀಡಿದ ರೈನಾ 54 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಆದರೆ ಸ್ಯಾಮ್ ಕುರನ್ ಹಾಗೂ ರವೀಂದ್ರ ಜಡೇಜಾ ಜೊತೆಯಾಟದಿಂದ ಚೆನ್ನೈ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತ್ತು. 

ಸ್ಯಾಮ್ ಕುರನ್ 15 ಎಸೆತದಲ್ಲಿ 34  ರನ್ ಸಿಡಿಸಿ ಔಟಾದರು. ಜಡೇಜಾ ಅಜೇಯ 26 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್, 7 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿತು. 

Follow Us:
Download App:
  • android
  • ios