ಚೆನ್ನೈ(ಏ.11): ಈ ಬಾರಿಯ IPL ಟೂರ್ನಿ ಆರಂಭದಿಂದಲೇ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ರೋಚಕ ಪಂದ್ಯಕ್ಕೆ ಸಾಕ್ಷಿಯಾಗುತ್ತಿದೆ. ಇದೀಗ ಮತ್ತೊಂದು ರೋಚಕ ಹೋರಾಟ ನೀಡಲು ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ರೆಡಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಹೈದರಾಹಾದ್ ತಂಡಲ್ಲಿ ನಾಯಕ ಡೇವಿಡ್ ವಾರ್ನರ್, ರಶೀದ್ ಖಾನ್, ಮೊಹಮ್ಮದ್ ನಬಿ ಹಾಗೂ ಜಾನಿ ಬೈರ್‌ಸ್ಟೋ ವಿದೇಶಿ ಆಟಗಾರರಾಗಿ ಸ್ಥಾನ ಪಡೆದಿದ್ದಾರೆ. ಇತ್ತ ನಾಯಕ ಇಯಾನ್ ಮಾರ್ಗನ್, ಆ್ಯಂಡ್ರೆ ರಸೆಲ್, ಶಕೀಬ್ ಅಲ್ ಹಸನ್ ಹಾಗೂ ಪ್ಯಾಟ್ ಕಮಿನ್ಸ್  ಕೆಕೆಆರ್ ತಂಡಲ್ಲಿನ ನಾಲ್ವರು ವಿದೇಶಿ ಆಟಗಾರರಾಗಿದ್ದಾರೆ. 

ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ಪ್ರವೇಶಿಸಿದ್ದರೆ, ಕೆಕೆಆರ್ 5ನೇ ಸ್ಥಾನ ಅಲಂಕರಿಸಿತ್ತು. ಇದೀಗ ಉಭಯ ತಂಡಗಳು ಶುಭಾರಂಭದ ವಿಶ್ವಾಸದಲ್ಲಿದೆ. 2012 ಹಾಗೂ 2014ರಲ್ಲಿ ಕೆಕೆಆರ್ ಚಾಂಪಿಯನ್ ಆಗಿದ್ದರೆ, 2016ರಲ್ಲಿ ಸನ್‌ರೈಸರ್ಸ್ ತಂಡದ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ.