Asianet Suvarna News Asianet Suvarna News

IPL 2021: ಪ್ಲೇ ಆಫ್‌ಗೂ ಮುನ್ನ ಆರ್‌ಸಿಬಿ ತಂಡಕ್ಕೆ ಡೆಲ್ಲಿ ಸವಾಲು

* ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕಿಂದು ಆರ್‌ಸಿಬಿ ಸವಾಲು

* ದುಬೈನಲ್ಲಿ ನಡೆಯಲಿದೆ ಹೈವೋಲ್ಟೇಜ್ ಪಂದ್ಯ

* ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿರುವ ಆರ್‌ಸಿಬಿ, ಡೆಲ್ಲಿ

IPL 2021 Royal Challengers Bangalore take on Mumbai Indians in last League Match in Dubai kvn
Author
Dubai - United Arab Emirates, First Published Oct 8, 2021, 1:52 PM IST

ದುಬೈ(ಅ.08): ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು (Royal Challengers Bangalore) ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals), ಗೆಲುವಿನೊಂದಿಗೆ ಪ್ಲೇ-ಆಫ್‌ ಹಂತಕ್ಕೆ ಕಾಲಿಡಲು ಎದುರು ನೋಡುತ್ತಿವೆ. ಹಿಂದಿನ ಪಂದ್ಯದಲ್ಲಿ ಸೋತಿರುವ ಉಭಯ ತಂಡಗಳು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಕಾತರಿಸುತ್ತಿವೆ.

ಸನ್‌ರೈಸ​ರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ ಅನುಭವಿಸಿದ 4 ರನ್‌ಗಳ ಸೋಲು ಆರ್‌ಸಿಬಿಗೆ ಅಗ್ರ-2ರಲ್ಲಿ ಸ್ಥಾನ ಗಳಿಸುವುದಕ್ಕೆ ಅಡ್ಡಿಯಾಗಿದೆ. ಡೆಲ್ಲಿ ವಿರುದ್ಧ ಆರ್‌ಸಿಬಿ ಗೆದ್ದರೂ 2ನೇ ಸ್ಥಾನಕ್ಕೇರುವುದು ಅಸಾಧ್ಯ. 2ನೇ ಸ್ಥಾನಕ್ಕೇರಬೇಕಿದ್ದರೆ ಆರ್‌ಸಿಬಿ ಮೊದಲು ಬ್ಯಾಟ್‌ ಮಾಡಿ ಸುಮಾರು 200 ರನ್‌ ಕಲೆಹಾಕಿ ಬಳಿಕ ಕನಿಷ್ಠ 163 ರನ್‌ಗಳಿಂದ ಗೆಲ್ಲಬೇಕು. ಆರ್‌ಸಿಬಿಗೆ ಮೊದಲು ಬ್ಯಾಟ್‌ ಮಾಡುವ ಅವಕಾಶ ಸಿಗದಿದ್ದರೆ 2ನೇ ಸ್ಥಾನಕ್ಕೇರಲು ಸಾಧ್ಯವಿಲ್ಲ.

IPL 2021‌: ಮೊದಲ ಬಾರಿ ಏಕಕಾಲಕ್ಕೆ 2 ಐಪಿಎಲ್‌ ಪಂದ್ಯ..!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ (Mumbai Indians) 2017ರಲ್ಲಿ 146 ರನ್‌ಗಳಿಂದ ಗೆದ್ದಿದ್ದು ಐಪಿಎಲ್‌ ಇತಿಹಾಸದಲ್ಲೇ ಈ ವರೆಗಿನ ಅತಿದೊಡ್ಡ ಗೆಲುವು. ಹೀಗಾಗಿ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಹಿಂದಿಕ್ಕಿ ಆರ್‌ಸಿಬಿ 2ನೇ ಸ್ಥಾನಕ್ಕೇರಲು ಪವಾಡವೇ ಆಗಬೇಕು. ಇನ್ನು ಡೆಲ್ಲಿ ಈ ಪಂದ್ಯದಲ್ಲಿ ಸೋತರೂ ಅಗ್ರಸ್ಥಾನದಲ್ಲೇ ಉಳಿಯಲಿದೆ. ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಡೆಲ್ಲಿ, ಮತ್ತೊಂದು ಭರ್ಜರಿ ಜಯದ ನಿರೀಕ್ಷೆಯಲ್ಲಿದೆ.

ರಿಷಭ್‌ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 13 ಪಂದ್ಯಗಳನ್ನಾಡಿ 10 ಗೆಲುವು ಹಾಗೂ 3 ಸೋಲುಗಳೊಂದಿಗೆ 20 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನೊಂದೆಡೆ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 13 ಪಂದ್ಯಗಳನ್ನಾಡಿ 8 ಗೆಲುವು ಹಾಗೂ 5 ಸೋಲುಗಳೊಂದಿಗೆ 16 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್‌ಗೆ ಸಜ್ಜಾಗಲು ಬೆಂಗಳೂರು ತಂಡ ಎದುರು ನೋಡುತ್ತಿದೆ.

ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

Follow Us:
Download App:
  • android
  • ios