* ಬಿಸಿಸಿಐ ಮೂಲಗಳಿಂದ ಐಪಿಎಲ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌* ಐಪಿಎಲ್ 2021 ಭಾಗ-2 ಟೂರ್ನಿಗೆ ಯುಎಇ ಆತಿಥ್ಯ* ಸೆಪ್ಟೆಂಬರ್ 18/19ರಿಂದ ಇನ್ನುಳಿದ ಐಪಿಎಲ್‌ ಪಂದ್ಯಗಳು ಆರಂಭ

ನವದೆಹಲಿ(ಮೇ.26): 14ನೇ ಆವೃತ್ತಿಯ ಐಪಿಎಲ್‌ ಭಾಗ-2 ಸೆಪ್ಟೆಂಬರ್‌ 18 ಇಲ್ಲವೇ 19ರಿಂದ ಯುಎಇನಲ್ಲಿ ನಡೆಯಲಿದೆ, ಅಕ್ಟೋಬರ್‌ 9 ಇಲ್ಲವೇ 10ರಂದು ಫೈನಲ್‌ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

3 ವಾರಗಳ ಅವಧಿಯಲ್ಲಿ 31 ಪಂದ್ಯಗಳನ್ನು ನಡೆಸಬೇಕಿದ್ದು, 10 ದಿನಗಳಂದು ತಲಾ 2 ಪಂದ್ಯಗಳು ನಡೆಯಲಿವೆ. 7 ದಿನಗಳಲ್ಲಿ ತಲಾ ಒಂದು ಹಾಗೂ ಪ್ಲೇ-ಆಫ್ಸ್ ಹಂತದ 4 ಪಂದ್ಯಗಳು ನಾಲ್ಕು ದಿನ ನಡೆಯಲಿವೆ ಎನ್ನಲಾಗಿದೆ. ಸೆಪ್ಟೆಂಬರ್ 14ಕ್ಕೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಮುಕ್ತಾಯಗೊಳ್ಳಲಿದ್ದು, ಸೆಪ್ಟೆಂಬರ್ 15ಕ್ಕೆ ವಿಶೇಷ ವಿಮಾನದಲ್ಲಿ ಆಟಗಾರರನ್ನು ಯುಎಇಗೆ ಕರೆತರಲಾಗುತ್ತದೆ. ಬೇರೆ ದೇಶಗಳ ಆಟಗಾರರಿಗೂ ಬಿಸಿಸಿಐ ವ್ಯವಸ್ಥೆ ಮಾಡಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ IPL 2021; ದುಬೈನಲ್ಲಿ ಆಯೋಜಿಸಲು BCCI ಪ್ಲಾನ್!

ಇದೇ ವೇಳೆ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಬೇಕಿದ್ದ ಟಿ20 ಸರಣಿಯನ್ನು ಬಿಸಿಸಿಐ ರದ್ದುಪಡಿಸಿದೆ. ಹರಿಣಗಳ ವಿರುದ್ದದ ಈ ಟೂರ್ನಿ ಟಿ20 ವಿಶ್ವಕಪ್‌ ಬಳಿಕ ನಡೆಯುವ ಸಾಧ್ಯತೆ ಇದೆ. 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಯುಎಇ ಆತಿಥ್ಯವನ್ನು ವಹಿಸಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ 29 ಪಂದ್ಯಗಳು ನಿರಾತಂಕವಾಗಿ ನಡೆದಿದ್ದವು. ಆದರೆ ಬಯೋ ಬಬಲ್‌ನೊಳಗೆ ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢಪಟ್ಟ ಬೆನ್ನಲ್ಲೇ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.