IPL ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿಟ್ಟ ಬೌಲಿಂಗ್ ಪ್ರದರ್ಶನ ನೀಡಿದೆ. ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ ಆರ್‌ಸಿಬಿ,ಸ್ಪರ್ಧಾತ್ಮಕ ಟಾರ್ಗೆಟ್ ಪಡೆದಿದೆ.
ಚೆನ್ನೈ(ಏ.09): ರೋಹಿತ್ ಶರ್ಮಾ, ಕ್ರಿಸ್ ಲಿನ್, ಹಾರ್ಧಿಕ್ ಪಾಂಡ್ಯ, ಇಶಾನ್ ಕಿಶನ್, ಕೀರನ್ ಪೋಲಾರ್ಡ್ ಸೇರಿದಂತೆ ಸ್ಫೋಟಕ ಬ್ಯಾಟ್ಸ್‌ಮನ್ ದಂಡೇ ಹೊಂದಿರುವ ಮುಂಬೈ ಇಂಡಿಯನ್ಸ್, ಉದ್ಘಾಟನಾ ಪಂದ್ಯದಲ್ಲಿ ಅಬ್ಬರಿಸಲು ಸಾಧ್ಯವಾಗಿಲ್ಲ. ಕ್ರಿಸ್ ಲಿನ್ 49 ರನ್ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಸಿದ 31 ರನ್ ಕಾಣಿಕೆಯಿಂದ ಮುಂಬೈ ಇಂಡಿಯನ್ಸ್ ವಿಕೆಟ್ ನಷ್ಟಕ್ಕೆ ರನ್ ಸಿಡಿಸಿದೆ.
ಐಪಿಎಲ್‌ನಲ್ಲಿ 100; ಮುಂಬೈ ವಿರುದ್ಧ ವಿಶೇಷ ದಾಖಲೆ ಬರೆದ ಚಹಾಲ್!
ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಯಜುವೇಂದ್ರ ಚಹಾಲ್ ಚಾಣಕ್ಷತೆಯಿಂದ ರೋಹಿತ್ ಶರ್ಮಾ ರನೌಟ್‌ಗೆ ಬಲಿಯಾದರು. ಆದರೆ ಕ್ರಿಸ್ ಲಿನ್ ಬ್ಯಾಟಿಂಗ್‌ನಿಂದ ಮುಂಬೈ ಚೇತರಿಸಿಕೊಂಡಿತು. ಕ್ರಿಸ್ ಲಿನ್ 49 ರನ್ ಸಿಡಿಸಿ ಔಟಾದರು.
ಸೂರ್ಯಕುಮಾರ್ ಯಾದವ್ 31 ರನ್ ಕಾಣಕೆ ನೀಡಿದರು. ಆದರೆ ಇಶನ್ ಕಿಶನ್ ಬ್ಯಾಟಿಂಗ್ ಮುಂಬೈ ತಂಡವನ್ನು ಅಲ್ಪಮೊತ್ತದಿಂದ ಪಾರುಮಾಡಿತು. ಆದರೆ ಹಾರ್ದಿಕ್ ಪಾಂಡ್ಯ 13 ರನ್ ಸಿಡಿಸಿ ಔಟಾದರು. ಆದರೆ ಕೀರನ್ ಪೋಲಾರ್ಡ್ ಹಾಗೂ ಕಿಶನ್ ಹೋರಾಟ ಮುಂಬೈ ತಂಡಕ್ಕೆ ಮತ್ತಷ್ಟು ಉತ್ಸಾಹ ನೀಡಿತು.
