ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮ್ಯೂಸಿಕ್ ಬ್ಯಾಂಡ್ ಹಿಡಿದುಕೊಂಡು ಫೋಟೋಶೂಟ್ ಮಾಡಿಸಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಏ.12): ಆರ್‌ಸಿಬಿ ಆಟಗಾರರ ಮ್ಯೂಸಿಕ್ ಬ್ಯಾಂಡ್ ರೀತಿ ಫೋಟೋಶೂಟ್ ನಡೆಸಿದ್ದು, ಆ ಫೋಟೋವನ್ನು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೈನಿ, ವಾಷಿಂಗ್ಟನ್, ಸಿರಾಜ್, ಪಡಿಕ್ಕಲ್, ಚಹಲ್ ಒಂದೊಂದು ವಾದ್ಯ ಹಿಡಿದು ಫೋಸ್ ನೀಡಿದ್ದಾರೆ.
ತಮ್ಮ ತಂಡದಿಂದ ಕಾರ್ಯಕ್ರಮ ಕೊಡಿಸಲು ಇಚ್ಛಿಸಿದರೆ ಯಜುವೇಂದ್ರ ಚಹಲ್‌ಗೆ ಕರೆ ಮಾಡಿ ಎಂದು ಪಡಿಕ್ಕಲ್, ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಫೋಟೋ ವೈರಲ್ ಆಗಿದೆ.
IPL 2021: 699 ದಿನಗಳ ಬಳಿಕ ಕ್ರಿಕೆಟ್‌ಗೆ ಭಜ್ಜಿ ವಾಪಸ್!
14ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ಏಪ್ರಿಲ್ 14ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ಪಾಲಿನ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
