ಮುಂಬೈ(ಏ.15): ಐಪಿಎಲ್ ಟೂರ್ನಿ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 7ನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಬೆನ್ ಸ್ಟೋಕ್ಸ್ ಬದಲು ಡೇವಿಡ್ ಮಿಲ್ಲರ್ ತಂಡ ಸೇರಿಕೊಂಡಿದ್ದರೆ, ಶ್ರೇಯಸ್ ಗೋಪಾಲ್ ಬದಲು, ಜಯದೇವ್ ಉನಾದ್ಕಟ್ ತಂಡ ಸೇರಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.

 

ಎರಡು ಬಲಿಷ್ಠ ತಂಡ ಇಂದು ಮುಖಾಮುಖಿಯಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದೆ. ಇತ್ತ ರಾಜಸ್ಥಾನ ರಾಯಲ್ಸ್, ಪಂಜಾಬ್ ವಿರುದ್ಧ ಸೋಲು ಕಂಡರೂ, ನಾಯಕ ಸಂಜು ಸ್ಯಾಮ್ಸನ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಇಷ್ಟೇ ಅಲ್ಲ 222 ರನ್ ಚೇಸ್ ಮಾಡಿ ಕೇವಲ 4 ರನ್‌ಗಳಿಂದ ವಿರೋಚಿತ ಸೋಲು ಕಂಡಿತ್ತು.