ಮುಂಬೈ(ಏ.12): ಐಪಿಎಲ್‌ 14ನೇ ಆವೃತ್ತಿಯಲ್ಲಿ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಪಡೆಗಳನ್ನು ಹೊಂದಿರುವ ತಂಡಗಳ ಪೈಕಿ ಪಂಜಾಬ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಪ್ರಮುಖವಾದವು. 

ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ದಂಡೇ ಇದೆ. ಪಂಜಾಬ್‌ ತಂಡದಲ್ಲಿ ಕ್ರಿಸ್‌ ಗೇಲ್‌, ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ನಿಕೋಲಸ್‌ ಪೂರನ್‌, ಡೇವಿಡ್‌ ಮಲಾನ್‌, ಶಾರುಖ್‌ ಖಾನ್‌ ಇದ್ದರೆ, ರಾಜಸ್ಥಾನ ತಂಡದಲ್ಲಿ ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌, ಯಶಸ್ವಿ ಜೈಸ್ವಾಲ್‌, ಕ್ರಿಸ್‌ ಮೋರಿಸ್‌, ಬೆನ್‌ ಸ್ಟೋಕ್ಸ್‌, ರಾಹುಲ್‌ ತೆವಾಟಿಯಾ, ಶಿವಂ ದುಬೆ ಇದ್ದಾರೆ. ಹೀಗಾಗಿ, ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿದೆ.ರಾಜಸ್ಥಾನಕ್ಕೆ ಜೋಫ್ರಾ ಆರ್ಚರ್‌ ಅನುಪಸ್ಥಿತಿ ಕಾಡಲಿದೆ. ಆದರೆ ಅವರ ಸ್ಥಾನವನ್ನು ತುಂಬುವ ಸಾಮರ್ಥ್ಯವನ್ನು ಕ್ರಿಸ್‌ ಮೋರಿಸ್‌ ಹೊಂದಿದ್ದಾರೆ. ಬಾಂಗ್ಲಾದೇಶದ ಮುಸ್ತಾಫಿಜುರ್‌ ರಹಮಾನ್‌ ಸಹ ರಾಯಲ್ಸ್‌ ಟೀಂನಲ್ಲಿದ್ದಾರೆ.

IPL 2021: ಮನೀಶ್ ಪಾಂಡೆ ಹೋರಾಟ ವ್ಯರ್ಥ; ಕೆಕೆಆರ್‌ಗೆ 10 ರನ್ ರೋಚಕ ಗೆಲುವು!

ಪಂಜಾಬ್‌ ಬೌಲಿಂಗ್‌ ಪಡೆಯನ್ನು ಮೊಹಮದ್‌ ಶಮಿ ಮುನ್ನಡೆಸಲಿದ್ದಾರೆ. ಆಸ್ಪ್ರೇಲಿಯಾದ ಯುವ ವೇಗಿಗಳಾದ ಜಾಯಿ ರಿಚರ್ಡ್‌ಸನ್‌ ಹಾಗೂ ರಿಲೇ ಮೆರೆಡಿತ್‌ ಮೇಲೆ ನಿರೀಕ್ಷೆ ಇದೆ. ಇಂಗ್ಲೆಂಡ್‌ನ ಕ್ರಿಸ್‌ ಜೋರ್ಡನ್‌ ಸಹ ತಂಡದಲ್ಲಿದ್ದಾರೆ. ಎರಡೂ ತಂಡಕ್ಕೆ ಆಡುವ ಹನ್ನೊಂದನ್ನು ಆಯ್ಕೆ ಮಾಡುವುದಲ್ಲಿ ಗೊಂದಲ ಎದುರಾಗಲಿದೆ.

ಪಿಚ್‌ ರಿಪೋರ್ಟ್‌: ವಾಂಖೇಡೆ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಡೆಲ್ಲಿ ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗಿತ್ತು. ಚೆನ್ನೈ ನೀಡಿದ್ದ 189 ರನ್‌ ಗುರಿಯನ್ನು ಡೆಲ್ಲಿ ಸುಲಭವಾಗಿ ಬೆನ್ನತ್ತಿತ್ತು. 2ನೇ ಇನ್ನಿಂಗ್ಸ್‌ ವೇಳೆ ಇಬ್ಬನಿ ಬೀಳುವ ಕಾರಣ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಪಂಜಾಬ್‌: ಕೆ.ಎಲ್‌.ರಾಹುಲ್‌(ನಾಯಕ), ಮಯಾಂಕ್‌ ಅಗರ್‌ವಾಲ್‌, ಕ್ರಿಸ್‌ ಗೇಲ್‌, ನಿಕೋಲಸ್‌ ಪೂರನ್‌, ಶಾರುಖ್‌ ಖಾನ್‌, ಮೋಸೆಸ್‌ ಹೆನ್ರಿಕ್ಸ್‌, ಇಶಾನ್‌ ಪೊರೆಲ್‌, ರವಿ ಬಿಷ್ಣೋಯಿ, ಮೊಹಮದ್‌ ಶಮಿ, ಎಂ.ಅಶ್ವಿನ್‌, ಜಾಯಿ ರಿಚರ್ಡ್‌ಸನ್‌.

ರಾಜಸ್ಥಾನ: ಜೋಸ್‌ ಬಟ್ಲರ್‌, ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌(ನಾಯಕ), ಮನನ್‌ ವೊಹ್ರಾ, ಬೆನ್‌ ಸ್ಟೋಕ್ಸ್‌, ಕ್ರಿಸ್‌ ಮೋರಿಸ್‌, ರಾಹುಲ್‌ ತೆವಾಟಿಯಾ, ಶ್ರೇಯಸ್‌ ಗೋಪಾಲ್‌, ಜಯದೇವ್‌ ಉನಾದ್ಕತ್‌, ಕಾರ್ತಿಕ್‌ ತ್ಯಾಗಿ, ಚೇತನ್‌ ಸಕಾರಿಯಾ.

ಸ್ಥಳ: ಮುಂಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌