Asianet Suvarna News Asianet Suvarna News

IPL 2021 RR vs KKR ಪ್ಲೇ-ಆಫ್‌ ಮೇಲೆ ಕೆಕೆಆರ್ ಕಣ್ಣು..!

* ಶಾರ್ಜಾ ಮೈದಾನದಲ್ಲಿಂದು ಕೆಕೆಆರ್ ಎದುರು ರಾಜಸ್ಥಾನ ರಾಯಲ್ಸ್ ಸವಾಲು

* ಪ್ಲೇ-ಆಫ್‌ ಮೇಲೆ ಕಣ್ಣಿಟ್ಟಿದೆ ಮಾರ್ಗನ್ ನೇತೃತ್ವದ ಕೆಕೆಆರ್ ತಂಡ

* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಕೆಕೆಆರ್

IPL 2021 Rajasthan Royals take on Kolkata Knight Riders in Sharjah KKR eyes on Play off Spot kvn
Author
Sharjah - United Arab Emirates, First Published Oct 7, 2021, 1:01 PM IST

ಶಾರ್ಜಾ(ಅ.7): 2 ಬಾರಿ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್‌ (Kolkata Knight Riders) ಗುರುವಾರ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಸೆಣಸಲಿದ್ದು, ಪ್ಲೇ-ಆಫ್‌ ಹಾದಿಯನ್ನು ಸುಗಮಗೊಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. 

ಇಯಾನ್‌ ಮಾರ್ಗನ್ (Eoin Morgan) ನೇತೃತ್ವದ ಕೆಕೆಆರ್‌ 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕ ಕಲೆಹಾಕಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ತಂಡದ ನೆಟ್‌ ರನ್‌ರೇಟ್‌ ಅತ್ಯುತ್ತಮವಾಗಿರುವ ಕಾರಣ ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಹೆಚ್ಚೂ ಕಡಿಮೆ ಖಚಿತವಾದಂತೆ. ಹೀಗಾಗಿ ಇಂದಿನ ಪಂದ್ಯ ಗೆದ್ದು ಪ್ಲೇ ಆಫ್‌ಗೆ ಲಗ್ಗೆಯಿಡುವ ಲೆಕ್ಕಾಚಾರದಲ್ಲಿದೆ ಕೆಕೆಆರ್ ತಂಡ

ಇನ್ನು ಮುಂಬೈ ಇಂಡಿಯನ್ಸ್‌ (Mumbai Indians) ಸಹ 13 ಪಂದ್ಯಗಳಿಂದ 12 ಅಂಕ ಕಲೆಹಾಕಿದ್ದು, ತಂಡದ ನೆಟ್‌ ರನ್‌ರೇಟ್‌ -0.048 ಇರುವ ಕಾರಣ 5ನೇ ಸ್ಥಾನದಲ್ಲಿ ಉಳಿದಿದೆ. ರಾಯಲ್ಸ್‌ ವಿರುದ್ಧ ಕೋಲ್ಕತ ಗೆದ್ದು ಅಂತಿಮ ಪಂದ್ಯದಲ್ಲಿ ಮುಂಬೈ ಸಹ ಗೆದ್ದರೆ ಆಗ ನೆಟ್‌ ರನ್‌ರೇಟ್‌ ಆಧಾರದಲ್ಲಿ ಪ್ಲೇ-ಆಫ್‌ ಸ್ಥಾನ ನಿರ್ಧಾರವಾಗಲಿದೆ. ಕೆಕೆಆರ್‌ ಸೋತು ಮುಂಬೈ ಗೆದ್ದರೆ ಪ್ಲೇ-ಆಫ್‌ ಸ್ಥಾನ ಮುಂಬೈ ಪಾಲಾಗಲಿದೆ. ಹೀಗಾಗಿ, ಕೆಕೆಆರ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.

IPL 2021: ಮೂರು ವಿಕೆಟ್ ಕಬಳಿಸಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್‌..!

ಇನ್ನೊಂದೆಡೆ ಸಂಜು ಸ್ಯಾಮ್ಸನ್‌ (Sanju Samson) ನೇತೃತ್ವದ ರಾಜಸ್ಥಾನ ರಾಯಲ್ಸ್‌ ಈಗಾಗಲೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿದೆ. ರಾಜಸ್ಥಾನ ರಾಯಲ್ಸ್ 13 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 8 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇದೀಗ ರಾಯಲ್ಸ್ ತಂಡವು ತನ್ನ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಎದುರು ನೋಡುತ್ತಿದೆ.

ಐಪಿಎಲ್‌ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು 23 ಬಾರಿ ಮುಖಾಮುಖಿಯಾಗಿದ್ದು, ಕೆಕೆಆರ್ 12 ಬಾರಿ ಗೆಲುವು ಸಾಧಿಸಿದ್ದರೆ, ರಾಜಸ್ಥಾನ ರಾಯಲ್ಸ್‌ 11 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ

ಸಂಭವನೀಯ ಆಟಗಾರರ ಪಟ್ಟಿ

ಕೆಕೆಆರ್‌: ವೆಂಕಟೇಶ್ ಅಯ್ಯರ್‌, ಶುಭ್‌ಮನ್‌ ಗಿಲ್‌, ರಾಹುಲ್ ತ್ರಿಪಾಠಿ, ನಿತೀಶ್‌ ರಾಣಾ, ಇಯಾನ್ ಮೊರ್ಗನ್‌(ನಾಯಕ), ದಿನೇಶ್ ಕಾರ್ತಿಕ್‌, ಶಕೀಬ್ ಅಲ್ ಹಸನ್‌‌, ಸುನಿಲ್ ನರೇನ್‌, ಟಿಮ್‌ ಸೌಥಿ, ಶಿವಂ ಮಾವಿ, ವರುಣ್ ಚಕ್ರವರ್ತಿ‌.

ರಾಜಸ್ಥಾನ ರಾಯಲ್ಸ್: ಎವಿನ್ ಲೆವಿಸ್‌, ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌(ನಾಯಕ), ಶಿವಂ ದುಬೆ, ಗ್ಲೆನ್‌ ಫಿಲಿಫ್ಸ್‌, ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯಾ, ಶ್ರೇಯಸ್ ಅಯ್ಯರ್‌, ಚೇತನ್ ಸಕಾರಿಯಾ, ಕುಲ್ದೀಪ್ ಅಯ್ಯರ್‌, ಮುಸ್ತಾಫಿಜುರ್‌ ರೆಹಮಾನ್‌

ಸ್ಥಳ: ಶಾರ್ಜಾ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Follow Us:
Download App:
  • android
  • ios