ಸಹೋದರನ ಆತ್ಮಹತ್ಯೆ ದುಃಖ ಮಾಸುವ ಮುನ್ನ ತಂದೆ ಕೊರೋನಾಗೆ ಬಲಿ; ಕಣ್ಣೀರಿಟ್ಟ ಚೇತನ್ ಸಕಾರಿಯಾ!
ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ಸ್ಥಗಿತಗೊಂಡಿದೆ. ಇತ್ತ ಐಪಿಎಲ್ ಆಟಗಾರರು ತಮ್ಮ ಮನೆಗೆ ತೆರಳಿ ಕ್ವಾರಂಟೈನ್ ಆಗಿದ್ದಾರೆ. ಆದರೆ ಮನಗೆ ವಾಪಸ್ ಬಂದ ರಾಜಸ್ಥಾನ ರಾಯಲ್ಸ್ ವೇಗಿ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ಕೊರೋನಾ ಸೋಂಕಿನಿಂದ ಆಸ್ಪತ್ರೆ ದಾಖಲಾಗಿದ್ದ ವೇಗಿ ತಂದೆ ನಿಧನರಾಗಿದ್ದಾರೆ.
ಭವ್ನಗರ್(ಮೇ.09): ರಾಜಸ್ಥಾನ ರಾಯಲ್ಸ್ ವೇಗಿ ಚೇತನ್ ಸಕಾರಿ ತಂದೆ ಕಾಂಜಿಬಾಯ್ ಸಕಾರಿಯಾ ಕೊರೋನಾಗೆ ಬಲಿಯಾಗಿದ್ದಾರೆ. ಕೊರೋನಾದಿಂದ ಆಸ್ಪತ್ರೆ ದಾಖಲಾಗಿದ್ದ ಕಾಂಜಿಬಾಯ್ ಸಕಾರಿಯಾ ಇಂದು(ಮೇ.09) ನಿಧನರಾಗಿದ್ದಾರೆ.
ಕೊರೋನಾ ಅಟ್ಟಹಾಸಕ್ಕೆ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ..!
ಕಳೆದ ಕೆಲದಿನಗಳಿಂದ ಚೇತನ್ ಸಕಾರಿಯಾ ತಂದೆ ಕೊರೋನಾದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆ ಬಿಲ್ ಪಾವತಿಸುವಂತೆ ಆಡಳಿತ ಮಂಡಲಿ ಚೇತನ್ ಸಕಾರಿಯಾ ಕುಟುಂಬಸ್ಥರಿಗೆ ಸೂಚನೆ ನೀಡಿತ್ತು. ಇತ್ತ ಐಪಿಎಲ್ ಟೂರ್ನಿಯ ಮೊದಲ ಕಂತಿನ ವೇತ ಪಡೆದ ಬೆನ್ನಲ್ಲೇ ಚೇತನ್ ಸಕಾರಿಯಾ ಆಸ್ಪತ್ರೆ ಬಿಲ್ ಪಾವತಿಸಿ, ತಂದೆಯನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಸಕಾರಿಯಾ ತಂದೆ ಕೊರೋನಾಗೆ ಬಲಿಯಾಗಿದ್ದಾರೆ. ಸೌರಾಷ್ಟ್ರ ಆಟಗಾರ ಚೇತನ್ ಸಕಾರಿಯಾ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ. ಕಾರಣ ಇತ್ತೀಚೆಗೆ ಸೈಯದ್ ಮುಷ್ತಾಕ್ ಆಲಿ ಟೂರ್ನಿ ಆಡುತ್ತಿದ್ದ ವೇಳೆ, ಚೇತನ್ ಸಕಾರಿಯಾ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದರು.
ಖ್ಯಾತ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿಗೆ ಮಾತೃ ವಿಯೋಗ
ಈ ಆಘಾತದಿಂದ ಚೇತರಿಸಿಕೊಳ್ಳೋ ಮೊದಲೇ ಇದೀಗ ಸಕಾರಿಯಾ ತಂದೆ ಕೊರೋನಾಗೆ ಬಲಿಯಾಗಿದ್ದಾರೆ. ಚೇತನ್ ಸಕಾರಿಯಾ ತಂದೆ ಟ್ರಕ್ ಚಾಲಕಾರಿಗಿದ್ದರು. ಆದರೆ ಆರೋಗ್ಯ ಕ್ಷೀಣಿಸಿದ ಕಾರಣ ಮನೆಯಲ್ಲಿ ವಿಶ್ರಾಂತಿಗೆ ಜಾರಿದ್ದರು. ಇನ್ನು ಸಕಾರಿಯಾ ಮನೆಯಲ್ಲಿ ಚೇತನ್ ಸಕಾರಿಯಾ ಕ್ರಿಕೆಟ್ ಮೂಲಕ ಬರುತ್ತಿದ್ದ ಆದಾಯವೇ ಕುಟುಂಬದ ಆಧಾರವಾಗಿದೆ. 22ನೇ ವಯಸ್ಸಿಗೆ ತಂದೆ, ಸಹೋದರನ ಕಳೆದುಕೊಂಡ ಚೇತನ್ ಸಕಾರಿಯಾ ಹಾಗೂ ತಾಯಿತ ದುಃಖ ಹೇಳತೀರದು.
ಕೊರೋನಾ ಕಾಟಕ್ಕೆ ಕ್ರಿಕೆಟಿಗರ ಕುಟುಂಬಸ್ಥರು ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಕೃಷ್ಣಮೂರ್ತಿ ತಾಯಿ ಹಾಗೂ ಸಹೋದರಿ ಕೊರೋನಾಗೆ ಬಲಿಯಾಗಿದ್ದರು.