ಟೀಂ ಇಂಡಿಯಾ ತಾರಾ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಮಾರ್ಚ್ 15ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್‌ ದೂರಾಲೋಚನೆಯೊಂದು ಮಾಡಿದೆ. ಏನದು? ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ನವದೆಹಲಿ(ಮಾ.16): ಟೀಂ ಇಂಡಿಯಾ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಸೋಮವಾರ(ಮಾ.15)ರಂದು ಸಂಜನಾ ಗಣೇಶನ್‌ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇದರೊಂದಿಗೆ ಬುಮ್ರಾ ವಿವಾಹದ ಸುತ್ತಮುತ್ತ ಹಬ್ಬಿದ್ದ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

ಜಸ್ಪ್ರೀತ್‌ ಬುಮ್ರಾ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ವಿವಾಹದ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದು, ಅದರಲ್ಲಿ ನಾವಿಂದು ಪ್ರೀತಿಯಿಂದ ಹೊಸ ಜರ್ನಿ ಆರಂಭಿಸಿದ್ದೇವೆ. ನಮ್ಮ ಜೀವನದಲ್ಲಿಂದು ಅತ್ಯಂತ ಮಧುರವಾದ ಕ್ಷಣ. ಈ ಖುಷಿಯ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆಂದು ಬುಮ್ರಾ ಬರೆದುಕೊಂಡಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ವಿವಾಹಪೂರ್ವ ಕಾರ್ಯಕ್ರಮಗಳು ಮಾರ್ಚ್‌ 14ರಂದು ಗೋವಾದಲ್ಲಿ ನಡೆದಿದ್ದು, ಮಾರ್ಚ್ 15ರಂದು ಬುಮ್ರಾ-ಸಂಜನಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ತೀರಾ ಖಾಸಗಿಯಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕೇವಲ ಎರಡು ಡಜನ್‌ ಮಂದಿಗೆ ಮಾತ್ರ ಪಾಲ್ಗೊಂಡಿದ್ದರು. ಖಾಸಗಿತನ ಕಾಪಾಡಿಕೊಳ್ಳುವ ಉದ್ದೇಶದಿಂದ ಅತಿಥಿಗಳಿಗೆ ಮೊಬೈಲ್‌ ತರದಂತೆ ಸೂಚಿಸಲಾಗಿತ್ತು. ಇನ್ನು ಬುಮ್ರಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ಟೀಂ ಇಂಡಿಯಾ ಸಹಪಾಠಿಗಳಾದ ಶಿಖರ್ ಧವನ್‌, ಹಾರ್ದಿಕ್‌ ಪಾಂಡ್ಯ, ಚೇತೇಶ್ವರ್ ಪೂಜಾರ ಸೇರಿದಂತೆ ಹಲವು ಹಿರಿ-ಕಿರಿಯ ಕ್ರಿಕೆಟಿಗರು ಶುಭ ಹಾರೈಸಿದ್ದರು.

ಸಂಜನಾ ವರಿಸಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ; ಹೊಸ ಇನ್ನಿಂಗ್ಸ್‌ಗೆ ಕ್ರಿಕೆಟಿಗರ ಶುಭಾಶಯ!

ಮಾಲ್ಡೀವ್ಸ್‌ ಟ್ರಿಪ್‌ ಐಡಿಯಾ ಕೊಟ್ಟು ಕಾಲೆಳೆದ ರಾಜಸ್ಥಾನ ರಾಯಲ್ಸ್‌

Scroll to load tweet…

ಇನ್ನು ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬುಮ್ರಾ ದಂಪತಿಗೆ ಶುಭಕೋರುವುದರ ಜತೆಗೆ ಮಾಲ್ಡೀವ್ಸ್‌ ಟ್ರಿಪ್‌ ಐಡಿಯಾ ನೀಡಿದೆ. ಶುಭಾಶಯಗಳು ನಿಮಗೆ, ಏಪ್ರಿಲ್‌-ಮೇ ತಿಂಗಳಿನಲ್ಲಿ ಮಾಲ್ಡೀವ್ಸ್‌ ವಾತಾವರಣ ತುಂಬಾ ಚೆನ್ನಾಗಿ ಇರುತ್ತದೆ ಎಂದು ನಾವು ಕೇಳಿದ್ದೇವೆ ಎಂದು ಟ್ವೀಟ್‌ ಮಾಡಿದೆ. ಈ ಮೂಲಕ ಏಪ್ರಿಲ್‌ 09ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಬುಮ್ರಾ ದೂರವಿದ್ದರೇ ಒಳಿತು ಎನ್ನುವುದು ರಾಜಸ್ಥಾನ ರಾಯಲ್ಸ್‌ನ ದೂರಾಲೋಚನೆ..!

ಐಪಿಎಲ್‌ನಲ್ಲಿ ತಮ್ಮ ಡೆಡ್ಲಿ ಯಾರ್ಕರ್‌ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಸಾಮರ್ಥ್ಯವಿರುವ ಬುಮ್ರಾ, ಮುಂಬೈ ಇಂಡಿಯನ್ಸ್‌ 5 ಬಾರಿ ಐಪಿಎಲ್‌ ಚಾಂಪಿಯನ್‌ ಆಗುವಲ್ಲಿ ತಮ್ಮದೇ ಆದ ಮಹತ್ವದ ಕಾಣಿಕೆ ನೀಡಿದ್ದಾರೆ. ಇದೀಗ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಏಪ್ರಿಲ್‌ 09ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.