* ಆರ್​ಸಿಬಿಗೆ ಸ್ಪರ್ಧಾತ್ಮಕ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್ * ಮೊದಲಿ ಬ್ಯಾಟಿಂಗ್ ಮಾಡಿ 149 ರನ್​ ಪೇರಿಸಿದ ಆರ್‌ಆರ್‌* ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ 

ದುಬೈ, (ಸೆ.29): ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 150 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

ದುಬೈ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 43ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್, ಎವಿನ್ ಲೂಯಿಸ್ (58) ಅರ್ಧಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 149 ರನ್​ ಪೇರಿಸಿದ್ದು, ಆರ್‌ಸಿಬಿಗೆ 150ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

IPL 2021 -RCB ಪ್ಲೇಯರ್ಸ್‌ನ ಪೂಲ್‌ ಪಾರ್ಟಿ ಫೋಟೋ ವೈರಲ್‌!

Scroll to load tweet…

ರಾಜಸ್ಥಾನ್ ರಾಯಲ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‍ಗೆ 77 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು.

ಎವಿನ್ ಲೆವಿಸ್ 37 ಎಸೆತಗಳಲ್ಲಿ 58 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 22 ಎಸೆತಗಳಲ್ಲಿ 31 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು.ಓಪನಿಂಗ್ ವಿಕೆಟ್‍ಗಳನ್ನು ಕಳೆದುಕೊಂಡ ನಂತರ ರಾಜಸ್ಥಾನ್ ರಾಯಲ್ಸ್‌ನ ರನ್‌ ವೇಗ ಕಡಿಮೆಯಾಯ್ತು. 

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 19, ಮಹಿಪಾಲ್ ಲೊಮ್ರಾರ್ 3, ಲಿಯಾಮ್ ಲಿವಿಂಗ್‌ಸ್ಟನ್ 6, ರಾಹುಲ್ ತೆವಾಟಿಯಾ 2, ರಿಯಾನ್ ಪರಾಗ್ 9, ಕ್ರಿಸ್ ಮೊರಿಸ್ 14, ಚೇತನ್ ಸಕಾರಿಯಾ 2 ಮತ್ತು ಕಾರ್ತಿಕ್ ತ್ಯಾಗಿ ಅಜೇಯ 1 ರನ್ ಗಳಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಹರ್ಷಲ್ ಪಟೇಲ್ 3, ಶಹಬಾಜ್ ಅಹ್ಮದ್ ಮತ್ತು ಯಜುವೇಂದ್ರ ಚಹಾಲ್ ತಲಾ 2 ವಿಕೆಟ್‍ಗಳನ್ನು ಪಡೆದರೆ, ಜಾರ್ಜ್ ಗಾರ್ಟನ್ ಮತ್ತು ಡೇನಿಯಲ್ ಕ್ರಿಸ್ಟಿಯನ್ ತಲಾ 1 ವಿಕೆಟ್ ಕಬಳಿಸಿದರು.