Asianet Suvarna News Asianet Suvarna News

IPL 2021: ಚೆನ್ನೈಗೆ 173 ರನ್ ಟಾರ್ಗೆಟ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್!

  • ಫೈನಲ್ ಪ್ರವೇಶಕ್ಕಾಗಿ ಮೊದಲ ಕ್ವಾಲಿಫೈಯರ್ ಪಂದ್ಯ
  • ಚೆನ್ನೈ ತಂಡಕ್ಕೆ 173 ರನ್ ಟಾರ್ಗೆಟ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್
  • ಪೃಥ್ವಿ ಶಾ, ಪಂತ್ ಹಾಫ್ ಸೆಂಚುರಿ 
IPL 2021 Qualifier 1 Prithvi Shaw helps Delhi captials to set 173 run target to Csk ckm
Author
Bengaluru, First Published Oct 10, 2021, 9:18 PM IST
  • Facebook
  • Twitter
  • Whatsapp

ದುಬೈ(ಅ.10):  IPL 2021ರ ಫೈನಲ್ ಪ್ರವೇಶಕ್ಕಾಗಿ ನಡೆಯುತ್ತಿರುವ ಮೊದಲ ಕ್ವಾಲಿಫೈಯರ್(Qualifier 1) ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಿಸಿದೆ. ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK)ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್(DC)  5 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿದೆ. ಈ ಮೂಲಕ ಧೋನಿ ಸೈನ್ಯಕ್ಕೆ173 ರನ್ ಟಾರ್ಗೆಟ್ ನೀಡಿದೆ.

IPL 2021 ನಾಯಕ ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ತುಟಿಬಿಚ್ಚಿದ ಸಿಎಸ್‌ಕೆ..!

ಟಾಸ್ ಚೆನ್ನೈ ತಂಡ ಗೆದ್ದುಕೊಂಡಿತು. ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ (Delhi capitals) ತಂಡಕ್ಕೆ ಪೃಥ್ವಿ ಶಾ ಉತ್ತಮ ಆರಂಭ ನೀಡಿದರು. ಆದರೆ ಶಿಖರ್ ಧವನ್ ಮಹತ್ವದ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಧವನ್ 7 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದೆಕೊಂಡಿತು. ಅಯ್ಯರ್ ಕೇವಲ 1 ರನ್ ಸಿಡಿಸಿ ಔಟಾದರು.

ಇತ್ತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೃಥ್ವಿ ಶಾ ಹಾಫ್ ಸೆಂಚುರಿ ಸಿಡಿಸಿ ಔಟಾದರು. ಶಾಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಅಕ್ಸರ್ ಪಟೇಲ್ ಕೇವಲ 10 ರನ್ ಸಿಡಿಸಿ ನಿರ್ಗಮಿಸಿದರು. 34 ಎಸೆತದಲ್ಲಿ 60 ರನ್ ಸಿಡಿಸಿದ ಪೃಥ್ವಿ ಶಾ ವಿಕೆಟ್ ಪತನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತೀವ್ರ ಹಿನ್ನಡೆ ತಂದಿತು.

IPL 2021 ಹೀಗಿತ್ತು ನೋಡಿ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್‌ವರೆಗಿನ ಹಾದಿ..!

ಪೃಥ್ವಿ ಶಾ ವಿಕೆಟ್ ಪತನದ ಬಳಿಕ ನಾಯಕ ರಿಷಬ್ ಪಂತ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಜೊತೆಯಾಟ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ತುಂಬಿತು. ಪಂತ್ ಹಾಗೂ ಹೆಟ್ಮೆಯರ್ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ತಂಡದ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು.

ಶಿಮ್ರೊನ್ ಹೆಟ್ಮೆಯರ್ 24 ಎಸೆತದಲ್ಲಿ 37 ರನ್ ಸಿಡಿಸಿ ಔಟಾದರು. ಆದರೆ ಅಬ್ಬರಿಸಿದ ರಿಷಬ್ ಪಂತ್ ಅರ್ಧಶತಕ ಪೂರೈಸಿದರು. ಪಂತ್ 34 ಎಸೆತದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನರೆವಿನಿಂದ ಅಜೇಯ 51 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಚ್ ನಷ್ಟಕ್ಕೆ 172 ರನ್ ಸಿಡಿಸಿತು.

IPL 2021 ಹೀಗಿತ್ತು ನೋಡಿ ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇ ಆಫ್‌ವರೆಗಿನ ಹಾದಿ..!

ಡೆಲ್ಲಿ ಹಾಗೂ ಚೆನ್ನೈ ಪಂದ್ಯದ ನಡುವಿನ ದಾಖಲೆ ಹಾಗೂ ವಿಶೇಷತೆ:
ಕ್ವಾಲಿಫೈಯರ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಅತ್ಯಂತ ಕಿರಿಯ ನಾಯಕ ಅನ್ನೋ ಹೆಗ್ಗಳಿಗೆ ರಿಷಬ್ ಪಂತ್ ಪಾತ್ರರಾಗಿದ್ದಾರೆ. ಪಂತ್ ವಯಸ್ಸಿ 24 ವರ್ಷ ಹಾಗೂ 6 ದಿನ.
ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಸುತ್ತಿನಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಎರಡನೇ ಹಿರಿಯ ನಾಯಕ ಎಂ.ಎಸ್.ಧೋನಿ. 2013ರಲ್ಲಿ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ಲೇ ಆಫ್ ಸುತ್ತಿನಲ್ಲಿ ತಂಡವನ್ನು ಮುನ್ನಡೆಸಿದ್ದರು. ರಾಹುಲ್ ಬಳಿಕ ಇದೀಗ ಹಿರಿಯ ನಾಯಕ ಅನ್ನೋ ಹೆಗ್ಗಳಿಗೆ ಧೋನಿ ಪಾತ್ರರಾಗಿದ್ದಾರೆ.

IPL 2021: 56 ಲೀಗ್ ಪಂದ್ಯಗಳ ಬಳಿಕ ಬಯಲಾಯ್ತು ಟಾಪ್ 4 ತಂಡಗಳು; ಇಲ್ಲಿದೆ ನೋಡಿ ಪ್ಲೇ ಆಫ್‌ ವೇಳಾಪಟ್ಟಿ..!

ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ಬಾರಿ ಚೇಸಿಂಗ್ ಮಾಡಿದೆ. ಈ ಐದೂ ಪಂದ್ಯದಲ್ಲಿ ಚೆನ್ನೈ ಗೆಲುವು ಸಾಧಿಸಿದೆ. ಇಂದು ಚೆನ್ನೈ ತಂಡ ಚೇಸಿಂಗ್ ಆಯ್ಕೆ ಮಾಡಿಕೊಂಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ದುಬೈನಲ್ಲಿ ಆಯೋಜಿಸಿದ ಕಳೆದ 7 ಪಂದ್ಯದಲ್ಲಿ ಚೇಸಿಂಗ್ ಮಾಡಿದ ತಂಡಗಳು ಗಲುವು ಸಾಧಿಸಿದೆ

Follow Us:
Download App:
  • android
  • ios