* ದುಬೈನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಪಂಜಾಬ್ ಕಿಂಗ್ಸ್ ಸವಾಲು* ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದೆ ಚೆನ್ನೈ ಸೂಪರ್ ಕಿಂಗ್ಸ್‌* ಪ್ರತಿಷ್ಠೆಯ ಪಂದ್ಯಕ್ಕೆ ಸಜ್ಜಾದ ರಾಹುಲ್ ನೇತೃತ್ವದ ಪಂಜಾಬ್

ದುಬೈ(ಅ.07): ಪ್ಲೇ-ಆಫ್‌ ಹಂತ ಹತ್ತಿರವಾಗುತ್ತಿದ್ದಂತೆ ಲಯ ಕಳೆದುಕೊಂಡು ಸತತ 2 ಸೋಲು ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings), ಪ್ಲೇ-ಆಫ್‌ಗೂ ಮುನ್ನ ಲಯಕ್ಕೆ ಮರಳುವುದರ ಜೊತೆಗೆ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲೇ ಉಳಿದುಕೊಂಡು ಕ್ವಾಲಿಫೈಯರ್‌-1 ಪಂದ್ಯಕ್ಕೆ ಅರ್ಹತೆ ಪಡೆಯುವ ಉತ್ಸಾಹದಲ್ಲಿದೆ. ಗುರುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಚೆನ್ನೈಗೆ ಪಂಜಾಬ್‌ ಕಿಂಗ್ಸ್‌ (Punjab Kings) ಎದುರಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಇದುವರೆಗೂ 13 ಪಂದ್ಯಗಳನ್ನಾಡಿ 9 ಗೆಲುವು ಹಾಗೂ 4 ಸೋಲುಗಳೊಂದಿಗೆ 18 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಅಂತಿಮ ಪಂದ್ಯದಲ್ಲಿ ಗೆದ್ದರೆ ಒಟ್ಟು ಅಂಕ 20ಕ್ಕೇರಲಿದೆ. ತಂಡ ಉತ್ತಮ ನೆಟ್‌ ರನ್‌ರೇಟ್‌ ಹೊಂದಿರುವ ಕಾರಣ ಲೀಗ್‌ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲೇ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚು.

Scroll to load tweet…

ಅಂಕಿ-ಅಂಶಗಳ ಪ್ರಕಾರ ಪಂಜಾಬ್‌ ಕಿಂಗ್ಸ್‌ಗೆ ಪ್ಲೇ-ಆಫ್‌ಗೇರುವ ಅವಕಾಶವಿದೆಯಾದರೂ, ವಾಸ್ತವವಾಗಿ ತಂಡ ಈ ರೇಸ್‌ನಿಂದ ಹೊರಬಿದ್ದಿದೆ. ಕೆ.ಎಲ್‌.ರಾಹುಲ್‌ (KL Rahul) ಪಡೆ ಸದ್ಯ 13 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 8 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಗೆದ್ದು ಒಟ್ಟು ಅಂಕಗಳನ್ನು 12ಕ್ಕೆ ಏರಿಸಿಕೊಂಡರೂ, ನೆಟ್‌ ರನ್‌ರೇಟ್‌ ದೊಡ್ಡ ಮಟ್ಟದಲ್ಲಿ ಸುಧಾರಣೆ ಆಗುವುದಿಲ್ಲ. ಹೀಗಾಗಿ, ಪಂಜಾಬ್‌ಗೆ ಇದು ಪ್ರತಿಷ್ಠೆಯ ಪಂದ್ಯವಷ್ಟೇ.

Scroll to load tweet…

IPL 2021; ಹೈದ್ರಾಬಾದ್‌ ವಿರುದ್ಧ RCBಗೆ ವಿರೋಚಿತ ಸೋಲು, ಪಾಯಿಂಟ್ ಪಟ್ಟಿ ಯಥಾಸ್ಥಿತಿ!

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 24 ಐಪಿಎಲ್ ಪಂದ್ಯಗಳ ಪೈಕಿ ಸಿಎಸ್‌ಕೆ ತಂಡವು 15 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡವು 9 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋುತುರಾಜ್ ಗಾಯಕ್ವಾಡ್‌, ಫಾಫ್ ಡು ಪ್ಲೆಸಿ, ರಾಬಿನ್ ಉತ್ತಪ್ಪ/ ಸುರೇಶ್ ರೈನಾ, ಮೋಯಿನ್ ಅಲಿ, ಅಂಬಟಿ ರಾಯುಡು, ಎಂ ಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ದೀಪಕ್‌ ಚಹರ್, ಶಾರ್ದೂಲ್ ಠಾಕೂರ್‌, ಜೋಸ್ ಹೇಜಲ್‌ವುಡ್‌.

ಪಂಜಾಬ್‌: ಕೆ.ಎಲ್‌ ರಾಹುಲ್‌(ನಾಯಕ), ಮಯಾಂಕ್ ಅಗರ್‌ವಾಲ್‌, ನಿಕೋಲಸ್ ಪೂರನ್‌, ಏಯ್ಡನ್ ಮಾರ್ಕ್ರಮ್‌, ಸರ್ಫರಾಜ್ ಖಾನ್‌, ಶಾರುಖ್ ಖಾನ್‌, ಮೊಯಿಸ್‌ ಹೆನ್ರಿಕ್ಸ್‌, ಹಪ್ರೀತ್‌ ಬ್ರಾರ್‌, ರವಿ ಬಿಷ್ಣೋಯ್‌, ಮೊಹಮ್ಮದ್ ಶಮಿ, ಅಶ್‌ರ್‍ದೀಪ್ ಸಿಂಗ್‌.

ಸ್ಥಳ: ದುಬೈ
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್