* ಐಪಿಎಲ್‌ ಭಾಗ-2 ಆರಂಭಕ್ಕೆ ಕ್ಷಣಗಣನೆ ಆರಂಭ* ಸೆಪ್ಟೆಂಬರ್ 19ರಿಂದ ಯುಎಇ ಚರಣದ ಐಪಿಎಲ್ ಆರಂಭ* ರಾಜಸ್ಥಾನ ರಾಯಲ್ಸ್‌ ತಂಡದಿಂದ ಹೊರಬಿದ್ದ ಜೋಸ್ ಬಟ್ಲರ್

ದುಬೈ(ಆ.23): 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ಉಳಿದ ಪಂದ್ಯಗಳಿಗೆ ಜೋಸ್‌ ಬಟ್ಲರ್‌ ಗೈರಾಗಲಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್‌ ತಂಡ ಖಚಿತಪಡಿಸಿದೆ.

ಇಂಗ್ಲೆಂಡ್‌ ಆಟಗಾರ ಬಟ್ಲರ್‌ 2ನೇ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರ ಬದಲಿಗೆ ನ್ಯೂಜಿಲೆಂಡ್‌ನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಗ್ಲೆನ್‌ ಫಿಲಿಫ್ಸ್‌ರನ್ನು ಸೇರಿಸಿಕೊಳ್ಳಲಾಗಿದೆ ಎಂದು ತಂಡವು ಟ್ವೀಟ್‌ ಮೂಲಕ ತಿಳಿಸಿದೆ.

Scroll to load tweet…

ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಯುಎಇ ಚರಣದಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರಿಸಲು ಫಿಲಿಫ್ಸ್‌ ರೆಡಿಯಾಗಿದ್ದಾರೆ. ಫಿಲಿಫ್ಸ್‌ ನ್ಯೂಜಿಲೆಂಡ್ ಪರ 25 ಟಿ20 ಪಂದ್ಯಗಳನ್ನಾಡಿ 506 ರನ್ ಬಾರಿಸಿದ್ದಾರೆ. 2020ರ ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್‌ ವಿರುದ್ದ ನಡೆದ ಟಿ20 ಪಂದ್ಯದಲ್ಲಿ ಕೇವಲ 46 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ನ್ಯೂಜಿಲೆಂಡ್ ಪರ ಅತಿವೇಗದ ಟಿ20 ಶತಕ ಬಾರಿಸಿದ ದಾಖಲೆ ನಿರ್ಮಿಸಿದ್ದರು. ಇದಕ್ಕೂ ಮೊದಲು ಕಾಲಿನ್ ಮನ್ರೋ ಕಿವೀಸ್‌ ಪರ 47 ಎಸೆತಗಳಲ್ಲಿ ಶತಕ ಬಾರಿಸಿದ್ದರು.

IPL 2021 ಬಟ್ಲರ್‌, ಸ್ಟೋಕ್ಸ್‌ ಅನುಮಾನ, ರಾಜಸ್ಥಾನ ರಾಯಲ್ಸ್‌ಗೆ ಸಂಕಷ್ಟ..!

Scroll to load tweet…

ಜೋಸ್‌ ಬಟ್ಲರ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿ 153.01 ಸ್ಟ್ರೈಕ್‌ರೇಟ್‌ನಲ್ಲಿ 254 ರನ್‌ ಬಾರಿಸಿದ್ದರು. ರಾಜಸ್ಥಾನ ರಾಯಲ್ಸ್‌ ಈಗಾಗಲೇ ಐಪಿಎಲ್ ಭಾಗ-2ಕ್ಕೆ ಇಂಗ್ಲೆಂಡ್‌ ಸ್ಟಾರ್ ಕ್ರಿಕೆಟಿಗರಾದ ಬೆನ್‌ ಸ್ಟೋಕ್ಸ್‌, ಜೋಫ್ರಾ ಆರ್ಚರ್‌ ಸೇವೆಯಿಂದ ವಂಚಿತವಾಗಿದೆ. ಸದ್ಯ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಸೆಪ್ಟೆಂಬರ್ 21ರಂದು ರಾಯಲ್ಸ್‌ ಪಡೆ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.