Asianet Suvarna News Asianet Suvarna News

IPL 2021: ರಾಜಸ್ಥಾನ ವಿರುದ್ದ ಟಾಸ್ ಗೆದ್ದ ಮುಂಬೈ, ತಂಡದಲ್ಲಿ 2 ಬದಲಾವಣೆ!

  • ಪ್ಲೇ ಆಫ್ ಸ್ಥಾನಕ್ಕಾಗಿ ರಾಜಸ್ಥಾನ, ಮುಂಬೈ ಹೋರಾಟ
  • ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್
  • ಗೆದ್ದ ತಂಡದ ಪ್ಲೇ ಆಫ್ ಆಸೆ ಜೀವಂತ
IPL 2021 Mumbai Indians won toss opted to bowl first against Rajasthan Royals ckm
Author
Bengaluru, First Published Oct 5, 2021, 7:12 PM IST

ಶಾರ್ಜಾ(ಅ.05): ರಾಜಸ್ಥಾನ ರಾಯಲ್ಸ್(RR) ಹಾಗೂ ಮುಂಬೈ ಇಂಡಿಯನ್ಸ್(MI) ತಂಡಕ್ಕೆ ಗೆಲುವು ಮಾತ್ರ ಬೇಕಿದೆ. ಕಾರಣ ಗೆದ್ದ ತಂಡದ  ಪ್ಲೇ ಆಫ್ ಸ್ಥಾನದ ಆಸೆ ಜೀವಂತವಾಗಿರಲಿದೆ. ಹೀಗಾಗಿ ಶಾರ್ಜಾದಲ್ಲಿ ನಡೆಯುತ್ತಿರುವ 51ನೇ ಲೀಗ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

IPL 2021: ಚೆನ್ನೈ ಸೋಲಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಡೆಲ್ಲಿ!

ಮುಂಬೈ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಕ್ವಿಂಟನ್ ಡಿಕಾಕ್ ಬದಲು ಇಶಾನ್ ಕಿಶನ್ ತಂಡ ಸೇರಿಕೊಂಡರೆ, ಕ್ರುನಾಲ್ ಪಾಂಡ್ಯ ಬದಲು ನೀಶಮ್ ತಂಡ ಸೇರಿಕೊಂಡಿದ್ದಾರೆ.

 

ಇಂದಿನ ಪಂದ್ಯಕ್ಕೆ ಬಳಸುತ್ತಿರುವ ಶಾರ್ಜಾ ಪಿಚ್‌ನಲ್ಲಿ ಈ ಹಿಂದೆ ಎರಡು ಪಂದ್ಯಗಳು ನಡೆದಿದೆ. ಎರಡರಲ್ಲೂ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಹೀಗಾಗಿ ಇಂದು ಟಾಸ್ ಕೂಡ ಮುಖ್ಯವಾಗಲಿದೆ.  

ಮುಂಬೈ ಹಾಗೂ ರಾಜಸ್ಥಾನ(Rajasthan Royals) ತಂಡ ಐಪಿಎಲ್ 2021 ಎರಡನೇ ಭಾಗದಲ್ಲಿ ನಿರಾಸೆ ಅನುಭವಸಿದ್ದೇ ಹೆಚ್ಚು. ಅದರಲ್ಲೂ ರಾಜಸ್ಥಾನ ರಾಯಲ್ಸ್   3 ಪಂದ್ಯಗಳನ್ನು ಸೋತು, ಕಳೆದ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಿತ್ತು.. ಸದ್ಯದ ಫಾರ್ಮ್ ನೋಡಿದರೆ ರಾಜಸ್ಥಾನಕ್ಕೆ ಇಂದು ಗೆಲುವು ಸುಲಭದ ಹಾದಿಯಲ್ಲ. ಇತ್ತ ಮುಂಬೈ ಇಂಡಿಯನ್ಸ್(Mumbai Indians) ತಂಡದಲ್ಲಿ ಟಿ20 ಸ್ಪೆಷಲಿಸ್ಟ್, ಮಾರಕ ವೇಗಿ, ಬೆಸ್ಟ್ ಕ್ವಾಲಿಟಿ ಸ್ಪಿನ್ನರ್ ಸೇರಿದಂತೆ ಘಟಾನುಘಟಿಗಳೇ ತುಂಬಿದ್ದಾರೆ. ಆದರೆ ಗೆಲುವು ಮಾತ್ರ ಸಿಗುತ್ತಿಲ್ಲ.

ರೋಹಿತ್ ಶರ್ಮಾ-ಜಸ್ಪ್ರೀತ್ ಬುಮ್ರಾ: ಟೀಮ್‌ ಇಂಡಿಯಾದ ಆಟಗಾರರ ಲುಕ್‌ಅಲೈಕ್‌ ಇಲ್ಲಿದ್ದಾರೆ!

ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ 23 ಬಾರಿ ಮುಖಾಮುಖಿಯಾಗಿದೆ.  ಮುಂಬೈ ಇಂಡಿಯನ್ಸ್ 12 ಗೆಲುವು ಸಾಧಿಸಿದರೆ, ರಾಜಸ್ಥಾನ 11 ಗೆಲುವು ಕಂಡಿದೆ.  ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗುಬಡಿದಿರುವ ರಾಜಸ್ಥಾನ ರಾಯಲ್ಸ್ ಆತ್ಮವಿಶ್ವಾಸ ಹೆಚ್ಚಿದೆ. 

ಐಪಿಎಲ್ 2021(IPL 2021) ಎರಡನೇ ಭಾಗದಲ್ಲಿ ಮುಂಬೈ 5 ಪಂದ್ಯದಲ್ಲಿ 4 ಸೋಲನ್ನೇ ಕಂಡಿದೆ. ಕೊನೆಯ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿ ಮುಗ್ಗರಿಸಿತ್ತು. ಎರಡೂ ತಂಡಗಳ ಪ್ರದರ್ಶನ ಸಮಬಲವಾಗಿದೆ. ಗೆಲುವಿಗಿಂತ ಹೆಚ್ಚು ಸೋಲನ್ನೇ ಕಂಡಿದೆ. ಆದರೆ ಇಂದು ಗೆಲುವು ಮಾತ್ರ ಬೇಕಿದೆ.

2018ರ ಬಳಿಕ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿ ಮತ್ತಷ್ಟು ಕುತೂಹಲ. 2018ರ ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ 7 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 5 ಬಾರಿ ರಾಜಸ್ಥಾನ ರಾಯಲ್ಸ್ ಗೆಲುವು ಸಾಧಿಸಿದೆ. ಇತ್ತೀಚೆಗೆ ಮುಂಬೈ ಇಂಡಿಯನ್ಸ್ ರಾಜಸ್ಥಾನ ವಿರುದ್ಧ ನಿರೀಕ್ಷಿತ ಹೋರಾಟ ನೀಡಿಲ್ಲ.

ಅಂಕಪಟ್ಟಿಯಲ್ಲಿ(Points Table) ರಾಜಸ್ಥಾನ ರಾಯಲ್ಸ್ 6ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 7ನೇ ಸ್ಥಾನದಲ್ಲಿದೆ. ಉಭಯ ತಂಡಗಳು ತಲಾ 10 ಅಂಕಗಳನ್ನು ಸಂಪಾದಿಸಿದೆ. ಇಂದಿನ ಪಂದ್ಯ ಗೆದ್ದ ತಂಡ 12 ಅಂಕ ಸಂಪಾದಿಸಲಿದೆ. ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಿದರೆ ಪ್ಲೇ ಆಫ್ ಪ್ರವೇಶಕ್ಕೆ ನೆರವಾಗಲಿದೆ.

Follow Us:
Download App:
  • android
  • ios