Asianet Suvarna News Asianet Suvarna News

IPL 2021 KKR vs MI: ಇಂದಿನ ಪಂದ್ಯದಲ್ಲಿ ಯಾರಿಗೆ ಚಾನ್ಸ್‌? ಯಾರಿಗೆ ರೆಸ್ಟ್‌?

* ಮುಂಬೈ ಇಂಡಿಯನ್ಸ್‌ ವರ್ಸಸ್‌ ಕೋಲ್ಕತ ನೈಟ್‌ ರೈಡರ್ಸ್‌ ನಡುವಿನ ಪಂದ್ಯಕ್ಕೆ ಕ್ಷಣಗಣನೆ

* ಮುಂಬೈ ತಂಡದಲ್ಲಿಂದು ಎರಡು ಬದಲಾವಣೆಗಳಾಗುವ ಸಾಧ್ಯತೆ

* ಕೆಕೆಆರ್ ವರ್ಸಸ್‌ ಮುಂಬೈ ಪಂದ್ಯಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಮೈದಾನ ಆತಿಥ್ಯ

IPL 2021 Mumbai Indians vs Kolkata Knight Riders Probable Squad kvn
Author
Abu Dhabi - United Arab Emirates, First Published Sep 23, 2021, 5:46 PM IST

ಅಬುಧಾಬಿ(ಸೆ.23): 14ನೇ ಆವೃತ್ತಿಯ ಐಪಿಎಲ್‌(IPL 2021) ಟೂರ್ನಿಯ 34ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(Mumbai Indians) ತಂಡವು ಕೋಲ್ಕತ ನೈಟ್‌ರೈಡರ್ಸ್(Kolkata Knight Riders) ಸವಾಲನ್ನು ಸ್ವೀಕರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಮೈದಾನ ಆತಿಥ್ಯವನ್ನು ವಹಿಸಿದೆ.

ಈ ಹಿಂದಿನ ಮುಖಾಮುಖಿಗಳನ್ನು ಗಮನಿಸಿದರೆ, ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ಸಂಪೂರ್ಣ ಪ್ರಾಬಲ್ಯ ಮೆರೆದಿರುವುದು ಕಂಡು ಬಂದಿದೆ. ಉಭಯ ತಂಡಗಳ ಕಳೆದ 13 ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು 12 ಬಾರಿ ಗೆಲುವಿನ ನಗೆ ಬೀರಿದ್ದರೆ, ಕೇವಲ ಒಮ್ಮೆ ಮಾತ್ರ ಕೆಕೆಆರ್ ಗೆಲುವಿನ ಕೇಕೆ ಹಾಕಿವೆ. ಇನ್ನು ರೋಹಿತ್ ಶರ್ಮಾ(Rohit Sharma) ಹಾಗೂ ಹಾರ್ದಿಕ್ ಪಾಂಡ್ಯ(Hardik Pandya) ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಯುಎಇ ಚರಣದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು 20 ರನ್‌ಗಳ ಅಂತರದ ಸೋಲು ಅನುಭವಿಸಿತ್ತು. ಇಂದಿನ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಅನ್ಮೋಲ್‌ಪ್ರೀತ್ ಸಿಂಗ್ ಹಾಗೂ ಇಶಾನ್‌ ಕಿಶಾನ್‌ ಇಂದಿನ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

IPL 2021: ಈ ಆಟಗಾರನ ಪತ್ನಿ ಜತೆ ಪಾರ್ಟಿ ಎಂಜಾಯ್‌ ಮಾಡಿದ ಚಹಲ್ ಪತ್ನಿ ಧನಶ್ರೀ ವರ್ಮಾ..!

ಇನ್ನೊಂದೆಡೆ ಐಪಿಎಲ್ ಭಾಗ-1ರಲ್ಲಿ ನೀರಸ ಪ್ರದರ್ಶನ ತೋರಿದ್ದ ಕೋಲ್ಕತ ನೈಟ್‌ ರೈಡರ್ಸ್‌ ತಂಡವು ಯುಎಇ ಚರಣದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಮುಂಬೈ ಎದುರು ಅಬ್ಬರಿಸುವ ಕನಸು ಕಾಣುತ್ತಿದೆ. 

ಇನ್ನು ಈ ಪಿಚ್‌ನಲ್ಲಿ ಟಾಸ್ ಕೂಡಾ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದ್ದು, ಅಬುಧಾಬಿಯಲ್ಲಿ ಚೇಸಿಂಗ್ ಮಾಡಿದ ತಂಡ 14 ಬಾರಿ ಗೆಲುವು ದಾಖಲಿಸಿದ್ದರೆ, ಮೊದಲು ಬ್ಯಾಟಿಂಗ್ ಮಾಡಿದ ತಂಡವು 9 ಬಾರಿ ಗೆಲುವಿನ ನಗೆ ಬೀರಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಟಾಸ್ ಗೆದ್ದ ನಾಯಕ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯಿದೆ.

ಸಂಭಾವ್ಯ ತಂಡ

ಮುಂಬೈ ಇಂಡಿಯನ್ಸ್‌: ಕ್ವಿಂಟನ್‌ ಡಿ ಕಾಕ್‌, ರೋಹಿತ್ ಶರ್ಮಾ‌(ನಾಯಕ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ‌, ಹಾರ್ದಿಕ್‌ ಪಾಂಡ್ಯ, ಕೃನಾಲ್ ಪಾಂಡ್ಯ‌, ಕೀರನ್ ಪೊಲ್ಲಾರ್ಡ್‌, ರಾಹುಲ್‌ ಚಹರ್‌, ಮಿಲ್ನೆ, ಬೌಲ್ಟ್‌, ಬುಮ್ರಾ.

ಕೆಕೆಆರ್‌: ಶುಭಮನ್‌ ಗಿಲ್‌, ವೆಂಕಟೇಶ್‌ ಅಯ್ಯರ್‌, ರಾಹುಲ್ ತ್ರಿಪಾಠಿ, ನಿತೀಶ್‌ ರಾಣಾ, ಮಾರ್ಗನ್‌(ನಾಯಕ), ರಸೆಲ್‌, ದಿನೇಶ್ ಕಾರ್ತಿಕ್‌, ಸುನಿಲ್‌ ನರೇನ್‌, ಲಾಕಿ ಫಗ್ರ್ಯೂಸನ್‌, ಪ್ರಸಿದ್ದ್ ಕೃಷ್ಣ, ವರುಣ್‌ ಚಕ್ರವರ್ತಿ.

Follow Us:
Download App:
  • android
  • ios