* ಮುಂಬೈ ಇಂಡಿಯನ್ಸ್‌ ವರ್ಸಸ್‌ ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಪಂದ್ಯಕ್ಕೆ ಕ್ಷಣಗಣನೆ* ಈ ಹೈವೋಲ್ಟೇಜ್‌ ಪಂದ್ಯವನ್ನು ಗೆಲ್ಲೋರು ಯಾರು ಎನ್ನುವ ಕುತೂಹಲ* ಮುಂಬೈ ಇಂಡಿಯನ್ಸ್‌ ಪರ ಬ್ಯಾಟ್ ಬೀಸಿದ ಆಕಾಶ್ ಚೋಪ್ರಾ

ದುಬೈ(ಸೆ.19): ಐಪಿಎಲ್‌ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸಮಯ ಸಮೀಪಕ್ಕೆ ಧಾವಿಸಿದ್ದು, ಯುಎಇ ಚರಣದ ಐಪಿಎಲ್‌ ಪಂದ್ಯಾವಳಿಗಳು ಇಂದಿನಿಂದ ಆರಂಭವಾಗಲಿದೆ. ಅರಬ್ಬರ ನಾಡಿನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿಗಳಾದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಹೈವೋಲ್ಟೇಜ್‌ ಪಂದ್ಯವನ್ನು ನಿರೀಕ್ಷೆ ಮಾಡಲಾಗಿದೆ.

ಭಾರತದಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೊದಲಾರ್ಧದ ಪಂದ್ಯದಲ್ಲಿ ಚೆನ್ನೈ ಎದುರು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಗೆಲುವಿನ ನಗೆ ಬೀರಿತ್ತು. ಇದೀಗ ಎರಡನೇ ಹಣಾಹಣಿಯಲ್ಲಿ ಗೆಲುವು ಯಾರ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ. ಇದೆಲ್ಲದರ ನಡುವೆ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾಗಿ ಆಕಾಶ್‌ ಚೋಪ್ರಾ ಈ ಪಂದ್ಯ ಕುರಿತಂತೆ ಭವಿಷ್ಯ ನುಡಿದಿದ್ದು, ಚೆನ್ನೈ ಸವಾಲನ್ನು ಮುಂಬೈ ಇಂಡಿಯನ್ಸ್‌ ಮೆಟ್ಟಿನಿಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸದ್ಯ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ 4ನೇ ಸ್ಥಾನದಲ್ಲಿದೆ. ನೀವು ಏನೇ ಹೇಳಿ, ಮೀಮ್ಸ್‌ ಮಾಡಿ, ನಾನು ಮುಂಬೈ ಇಂಡಿಯನ್ಸ್‌ ಗೆಲ್ಲಲಿದೆ ಎಂದು ಖಡಾಖಂಡಿತವಾಗಿ ಹೇಳುತ್ತೇನೆ ಎಂದು ಚೋಪ್ರಾ ನುಡಿದಿದ್ದಾರೆ.

IPL 2021: CSK vs MI ದುಬೈ ಪಿಚ್‌ನಲ್ಲಿ ಯಾವ ತಂಡಕ್ಕಿದೆ ಹೆಚ್ಚಿನ ಅನುಕೂಲ..?

ಇದಷ್ಟೇ ಅಲ್ಲದೇ ಆಕಾಶ್ ಚೋಪ್ರಾ ಮತ್ತೆರಡು ಭವಿಷ್ಯಗಳನ್ನು ನುಡಿದಿದ್ದು, ಪಂದ್ಯ ಆರಂಭವಾಗಿ 10 ಎಸೆತಗಳೊಳಗಾಗಿ ಮೊದಲ ಬೌಂಡರಿ ದಾಖಲಾಗಲಿದೆ. ಅದೇ ರೀತಿ ಪಂದ್ಯ ಆರಂಭವಾಗಿ ನಾಲ್ಕು ಓವರ್‌ಗಳೊಳಗೆ ಮೊದಲ ವಿಕೆಟ್‌ ಬೀಳಲಿದೆ ಎಂದು ಚೋಪ್ರಾ ಹೇಳಿದ್ದಾರೆ. 

ಮುಂಬೈ ಇಂಡಿಯನ್ಸ್‌ ವರ್ಸಸ್‌ ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಪಂದ್ಯದ ಕುರಿತಂತೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಕಾಶ್ ಚೋಪ್ರಾ ಏನೆಲ್ಲಾ ಹೇಳಿದ್ದಾರೆ ಎನ್ನುವುದರ ಕಂಪ್ಲೀಟ್‌ ಡೀಟೈಲ್ಸ್ ಇಲ್ಲಿದೆ ನೋಡಿ.
YouTube video player