Asianet Suvarna News Asianet Suvarna News

IPL 2021: DC vs SRH ಡೆಲ್ಲಿ ಕ್ಯಾಪಿಟಲ್‌ ವರ್ಸಸ್‌ ಸನ್‌ರೈಸರ್ಸ್‌ ಹೈದರಾಬಾದ್‌ ಸಂಭಾವ್ಯ ತಂಡ ಹೀಗಿದೆ

* ಡೆಲ್ಲಿ ವರ್ಸಸ್‌ ಹೈದರಾಬಾದ್‌ ನಡುವಿನ ಪಂದ್ಯಕ್ಕೆ ಕೌಂಟ್‌ ಡೌನ್‌ ಶುರು

* ಎರಡು ತಂಡಗಳಲ್ಲೂ ಮಹತ್ವದ ಬದಲಾವಣೆ

* ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯ

IPL 2021 Match 33 Delhi Capitals vs SunRisers Hyderabad Probable Squad kvn
Author
Dubai - United Arab Emirates, First Published Sep 22, 2021, 5:25 PM IST

ದುಬೈ(ಸೆ.22): 14ನೇ ಆವೃತ್ತಿಯ ಐಪಿಎಲ್‌(IPL) ಟೂರ್ನಿಯ 33ನೇ ಪಂದ್ಯದಲ್ಲಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್‌ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ.

ಒಂದು ಕಡೆ ಕೇನ್‌ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್‌(Sunrisers Hyderabad) ತಂಡವು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದ್ದರೆ, ಮತ್ತೊಂದೆಡೆ ರಿಷಭ್ ಪಂತ್(Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಪ್ಲೇ ಆಫ್ ಹಾದಿಯನ್ನು ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಮೊದಲ ಆವೃತ್ತಿಯಲ್ಲಿ ಜಾನಿ ಬೇರ್‌ಸ್ಟೋವ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೀಗ ಯುಎಇ ಚರಣದ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಇನ್ನು ಬೇರ್‌ಸ್ಟೋವ್ ಬದಲಿಗೆ ಡೇವಿಡ್ ವಾರ್ನರ್‌(David Warner) ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಇನ್ನು ಇಂದಿನ ಪಂದ್ಯಕ್ಕೆ ಟಿ ನಟರಾಜನ್ ಹಾಗೂ ವಿಜಯ್‌ ಶಂಕರ್ ಕೂಡಾ ಹೊರಗುಳಿಯಲಿದ್ದಾರೆ. ಈ ಇಬ್ಬರು ಆಟಗಾರರಿಗೆ ಕೋವಿಡ್‌ ದೃಢಪಟ್ಟಿದ್ದು, ಸದ್ಯ ಐಸೋಲೇಷನ್‌ನಲ್ಲಿದ್ದಾರೆ.

IPL 2021: ಟಿ ನಟರಾಜನ್‌ ಸೇರಿ ಸನ್‌ರೈಸರ್ಸ್‌ನ 6 ಆಟಗಾರರಿಗೆ ಕೋವಿಡ್ ಪಾಸಿಟಿವ್..!

ಇನ್ನೊಂದೆಡೆ ಶ್ರೇಯಸ್‌ ಅಯ್ಯರ್(Shreyas Iyer) ಮೊದಲ ಆವೃತ್ತಿಯಲ್ಲಿ ಭುಜದ ಗಾಯಕ್ಕೆ ಒಳಗಾಗಿ ಟೂರ್ನಿಯಿಂದ ಭಾರತದಲ್ಲಿ ನಡೆದ ಐಪಿಎಲ್‌ ಟೂರ್ನಿಯಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಫಿಟ್‌ ಆಗಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವು ಸರಾಸರಿ 171 ರನ್‌ ಗಳಿಸಿದೆ. ಇನ್ನು ದುಬೈ ಮೈದಾನದಲ್ಲಿ ನಡೆದ ಕಳೆದ 28 ಪಂದ್ಯಗಳನ್ನು ಗಮನಿಸಿದರೆ ಮೊದಲ ಬ್ಯಾಟ್‌ ಮಾಡಿದ ತಂಡವು 18 ಬಾರಿ ಗೆಲುವು ದಾಖಲಿಸಿದರೆ, ಚೇಸಿಂಗ್ ಮಾಡಿದ ತಂಡ ಕೇವಲ 10 ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ.

ಇನ್ನು ಐಪಿಎಲ್‌ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಇದುವರೆಗೂ 19 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ 11 ಬಾರಿ ಸನ್‌ರೈಸರ್ಸ್‌ ಗೆಲುವಿನ ರುಚಿ ಕಂಡಿದ್ದರೆ, ಡೆಲ್ಲಿ ತಂಡವು 8 ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ.  

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಪೃಥ್ವಿ ಶಾ, ಧವನ್‌, ಅಯ್ಯರ್‌, ಸ್ಮಿತ್‌/ಹೆಟ್ಮೇಯರ್‌, ಪಂತ್‌(ನಾಯಕ), ಸ್ಟೋಯ್ನಿಸ್‌, ಅಶ್ವಿನ್‌, ಅಕ್ಷರ್‌, ರಬಾಡ, ನೋಕಿಯ, ಆವೇಶ್‌ ಖಾನ್‌.

ಸನ್‌ರೈಸರ್ಸ್‌: ವಾರ್ನರ್‌, ಸಾಹ, ವಿಲಿಯಮ್ಸನ್‌(ನಾಯಕ), ಪಾಂಡೆ, ಗರ್ಗ್‌‌, ನಬಿ/ಹೋಲ್ಡರ್‌, ಸಮದ್‌, ರಶೀದ್‌, ಭುವನೇಶ್ವರ್‌, ಸಂದೀಪ್‌, ಖಲೀಲ್‌.

ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Follow Us:
Download App:
  • android
  • ios