* ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ರನ್‌ಗಳ ಗುರಿ ನೀಡಿದ ಕೋಲ್ಕತ ನೈಟ್‌ ರೈಡರ್ಸ್‌* ಬ್ಯಾಟಿಂಗ್‌ನಲ್ಲಿ ಮಿಂಚಿದ ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಕಾರ್ತಿಕ್* 20 ರನ್‌ ನೀಡಿ 2 ವಿಕೆಟ್ ಕಬಳಿಸಿದ ಶಾರ್ದೂಲ್ ಠಾಕೂರ್

ಅಬುಧಾಬಿ(ಸೆ.26): ರಾಹುಲ್ ತ್ರಿಪಾಠಿ(Rahul Tripathi), ದಿನೇಶ್‌ ಕಾರ್ತಿಕ್ ಹಾಗೂ ನಿತೀಶ್‌ ರಾಣಾ ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ ಕೋಲ್ಕತ ನೈಟ್‌ ರೈಡರ್ಸ್(Kolkata Knight Riders) ತಂಡವು 6 ವಿಕೆಟ್‌ ಕಳೆದುಕೊಂಡು 171 ರನ್‌ ಬಾರಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್‌(Chennai Super Kings) ತಂಡವು ಗೆಲ್ಲಲು ಸ್ಪರ್ಧಾತ್ಮಕ ಗುರಿ ನೀಡಿದೆ. 

ಇಲ್ಲಿನ ಶೇಕ್ ಜಾಯೆದ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ ನೈಟ್‌ ರೈಡರ್ಸ್‌ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಓವರ್‌ನಲ್ಲೇ ಶುಭ್‌ಮನ್‌ ಗಿಲ್‌ 9 ರನ್‌ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಇನ್ನು ಕಳೆದೆರಡು ಪಂದ್ಯಗಳಲ್ಲಿ ಅಬ್ಬರಿಸಿದ್ದ ವೆಂಕಟೇಶ್ ಅಯ್ಯರ್ ಆಟ ಕೇವಲ 18 ರನ್‌ಗಳಿಗೆ ಸೀಮಿತವಾಯಿತು. ವೆಂಕಟೇಶ್ ಅಯ್ಯರ್ 15 ಎಸೆತಗಳಲ್ಲಿ 3 ಬೌಂಡರಿ ಸಹಿತ 18 ರನ್‌ ಬಾರಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ನಾಯಕ ಇಯಾನ್ ಮಾರ್ಗನ್‌(08) ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 

Scroll to load tweet…

IPL 2021: ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಟಾಸ್ ಗೆದ್ದ KKR ಬ್ಯಾಟಿಂಗ್ ಆಯ್ಕೆ

ಮಿಂಚಿದ ತ್ರಿಪಾಠಿ: ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದ ರಾಹುಲ್‌ ತ್ರಿಪಾಠಿ ಮತ್ತೊಂದು ಉಪಯುಕ್ತ ಇನಿಂಗ್ಸ್‌ ಆಡಿದರು. 33 ಎಸೆತಗಳನ್ನು ಎದುರಿಸಿದ ರಾಹುಲ್ ತ್ರಿಪಾಠಿ 4 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 45 ರನ್‌ ಬಾರಿಸಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್‌ ಸೇರಿದರು.

ಇನ್ನು ಕೊನೆಯಲ್ಲಿ ನಿತೀಶ್‌ ರಾಣಾ(37*), ಆಂಡ್ರೆ ರಸೆಲ್‌(20) ಹಾಗೂ ದಿನೇಶ್‌ ಕಾರ್ತಿಕ್(26) ಉಪಯುಕ್ತ ರನ್‌ ಕಾಣಿಕೆ ನೀಡುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಚೆನ್ನೈ ಸೂಪರ್‌ ಕಿಂಗ್ಸ್ ಪರ ಶಾರ್ದೂಲ್ 20 ರನ್‌ ನೀಡಿ 2 ವಿಕೆಟ್ ಪಡೆದರೆ, ಜೋಸ್ ಹೇಜಲ್‌ವುಡ್‌ ಕೂಡಾ 2 ವಿಕೆಟ್ ಪಡೆದರು. ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಕೆಕೆಆರ್: 171/6

ರಾಹುಲ್ ತ್ರಿಪಾಠಿ: 45
ಶಾರ್ದೂಲ್ ಠಾಕೂರ್: 20/2

(*ಕೆಕೆಆರ್ ಇನಿಂಗ್ಸ್‌ ಮುಕ್ತಾಯದ ವೇಳೆಗೆ)