* ಪಾಯಿಂಟ್ ಟೆನಲ್ ನಲ್ಲಿ ಮೇಲಕ್ಕೇರಿದ ಕೆಕೆಆರ್* ಮುಂಬೈ ಇಂಡಿಯನ್ಸ್ ಗೆ ದೊಡ್ಡ ಸವಾಳು* ಉಪಾಂತ್ಯದ ಪಟ್ಟಿ ಬಹುತೇಕ ಫೈನಲ್* ಎರಡನೇ ಹಂತದಲ್ಲಿ ಕೆಕೆಆರ್ ಅದ್ಭುತ ಪ್ರದರ್ಶನ

ಅಬುದಾಬಿ(ಅ. 07) ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ದಾಖಲಿಸಿಕೊಂಡು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಐಪಿಎಲ್ ಸೆಕೆಂಡ್ ಹಾಫ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೋಲ್ಕತ್ತಾ ತನಗೆ ಪೈಪೋಟಿ ನೀಡುತ್ತಿರುವ ಮುಂಬೈ ಇಂಡಿಯನ್ಸ್ ಗಿಂತ ರನ್ ರೇಟ್ ನಲ್ಲಿ ಮುಂದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 171 ರನ್ ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದನ್ನು ಚೇಸ್ ಮಾಡಲು ಇಳಿದ ರಾಜಸ್ಥಾನಕ್ಕೆ ಆಘಾತದ ಮೇಲೆ ಆಘಾತ ನೀಡಿತು. ಅತ್ಯುತ್ತಮ ಬೌಲಿಂಗ್ ಸಂಘಟನೆ ಮಾಡಿದ ಕೆಕೆಆರ್ ರಾಜಸ್ಥಾನವನ್ನು ಕೇವಲ 85 ರನ್ ಗೆ ಅಲೌಟ್ ಮಾಡಿ ಭರ್ಜರಿ ಜಯ ಸಂಪಾದನೆ ಮಾಡಿಕೊಂಡಿತು. ಶಿವಂ ಮಾವಿ ಬೌಲಿಂಗ್ ಗೆ ರಾಜಸ್ಥಾನದ ಬಳಿ ಉತ್ತರವೇ ಇರಲಿಲ್ಲ.

ಪಂದ್ಯ ಸೋತರೂ ಪ್ರೀತಿ ಗೆದ್ದಿತು ಎಂದ ದೀಪಕ್ ಚಹಾರ್.. ಕ್ಯೂಟ್ ಪ್ರಪೋಸಲ್

ಡೆಲ್ಲಿ, ಸಿಎಸ್‌ಕೆ ಮತ್ತು ಆರ್‌ ಸಿಬಿ ತಂಡ ಈಗಾಗಲೇ ಉಪಾಂತ್ಯಕ್ಕೆ ಪ್ರವೇಶ ಪಡೆದುಕೊಂಡಿವೆ. ಈಗ ಇನ್ನೊಂದು ಪಂದ್ಯ ಬಾಕಿ ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಮತ್ತು ಗೆದ್ದು ಬೀಗಿರುವ ಕೆಕೆಆರ್ ಉಪಾಂತ್ಯಕ್ಕೆ ಪ್ರವೇಶ ಮಾಡಲು ಪೈಪೋಟಿ ನಡೆಸಬೇಕಾಗಿದೆ. 

ಮುಂಬೈನ ಇಂಡಿಯನ್ಸ್ ಶುಕ್ರವಾರ ಆರ್ ಸಿಬಿಯನ್ನು ಮಣಿಸಿರುವ ಆದರೆ ಪಂದ್ಯಾವಳಿಯಿಂದ ಹೊರಗೆ ಬಿದ್ದಿರುವ ಸನ್ ರೈಸರ್ಸ್ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದರೆ ಮತ್ತೆ ಲೆಕ್ಕಾಚಾರ ಹಾಕಬಹುದು.

ರಾಜಸ್ಥಾನ ರಾಯಲ್ಸ್ ಪರ ಯಾವ ದಾಂಢಿಗರು ಬ್ಯಾಟ್ ಬೀಸಲೇ ಇಲ್ಲ. ಹದಿನಾರು ಓವರ್ ಗಳಲ್ಲಿಯೇ ತಂಡ ಆಲೌಟ್ ಆಯಿತು. ಮೂರು ಓವರ್ ನಲ್ಲಿ ನಾಲ್ಕು ವಿಕೆಟ್ ಕಿತ್ತ ಶಿವಂ ಮಾವಿ ಕೋಲ್ಕತ್ತಾಕ್ಕೆ ಸುಲಭವಾಗಿ ಮತ್ತೊಂದು ಗೆಲುವು ದಕ್ಕಿಸಿಕೊಟ್ಟರು .

Scroll to load tweet…